Namma Metro: ಬೆಂಗಳೂರು ಜನರ ಪರ ಕೇಂದ್ರ ಸಚಿವರಿಗೆ ಮನವಿ, CMRS ಒಪ್ಪಿಗೆಗೆ ಸಂಸದ ಒತ್ತಾಯ
ಬೆಂಗಳೂರು, ಜುಲೈ 18: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ ತೆರೆಯುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಈಗಾಗಲೇ ಬಂದ ಮೂರು ಡ್ರೈವರ್ ಲೆಸ್ ರೈಲುಗಳ ತಪಾಸಣೆ ಬಹುತೇಕ ಪೂರ್ಣಗೊಂಡಿದೆ. ಇದೇ ವಿಚಾರವಾಗಿ ಹಲವು ಭಾರಿ ಧ್ವನಿ ಎತ್ತಿರುವ ಬೆಂಗಳೂರು ದಕ್ಷಿಣ ಭಾಗದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ದೆಹಲಿಯಲ್ಲಿ ಕೇಂದ್ರ ಸಚಿರನ್ನು ಭೇಟಿ ಮಾಡಿ ಬೆಂಗಳೂರಿನ ಜನರ ಪರ ವಿಶೇಷ ಮನವಿ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಸಾಗುವ ಬಹುನಿರೀಕ್ಷೆಯ ಆರ್‌ವಿ.ರಸ್ತೆ-ಬೊಮ್ಮಸಂದ್ರವರೆಗೆ ಇರುವ ಸುಮಾರು 19 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಪ್ರತಿಭಟನೆ ಮಾಡಲಾಯಿತು. ಹಲವು ಸಂಸದರ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರ ಹಾಗೂ BMRCLಗೆ ಆಗ್ರಹಿಸಿದ್ದರು. ಹಳದಿ ಮಾರ್ಗ ಕಾರ್ಯಾಚರಣೆ ವಿಳಂಬದಿಂದ ಲಕ್ಷಾಂತರ ಜನರಿಗೆ ತೊಂದರೆ, ಜನದಟ್ಟಣೆ ಏರಿಕೆ ಬಗ್ಗೆ ವಿವರಿಸಿದ್ದರು.

ಇದೀಗ ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು, ದೆಹಲಿಯಲ್ಲಿ ಇಂದು ಶುಕ್ರವಾರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ (MoHUA) ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಕುರಿತು ಮನವಿ ಸಲ್ಲಿಸಿದರು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅವರಿಂದ ಶೀಘ್ರವೇ ಹಳದಿ ಮಾರ್ಗಕ್ಕೆ ಅನುಮೋದನೆ ಕೊಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಸಚಿವರು ಮಧ್ಯ ಪ್ರವೇಶಿಸುವಂತೆ ಅವರು ಕೋರಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಸದರು ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚಿನ ಸಾರಿಗೆ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಕಾರುಗಳು, ಇತರ ವೈಯಕ್ತಿಕ ವಾಹನಗಳಿಂದ ಜರನ್ನು ಸಾರ್ವಜನಿಕ ಸಾರಿಗೆ ವರ್ಗಾಯಿಸಬೇಕಿದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಸಹಕರಿಸುವಂತೆ ಅವರು ಕೇಳಿಕೊಂಡಿದ್ಆರೆ. ಮುಂದಿನ ಒಂದು ದಶಕದಲ್ಲಿ ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಕನಿಷ್ಠ 5 ಭಾರತೀಯ ನಗರಗಳನ್ನು ಹೊಂದುವ ಗುರಿ ನಮ್ಮದಾಗಬೇಕು ಎಂದು ಅವರು ಹೇಳಿದರು.
ಜಾಗತಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು. ನಗರಗಳಿಗೆ ರೈಲುಗಳ ತ್ವರಿತ ವಿತರಣೆಯನ್ನು ಸುಗಮಗೊಳಿಸಬೇಕಿದೆ. ದೇಶಾದ್ಯಂತ ಎಲ್ಲಾ ಮೆಟ್ರೋ ರೈಲುಗಳನ್ನು ಪ್ರಮಾಣೀಕರಿಸುವಂತೆ ಸಂದರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
I met with MoHUA Minister Sri @mlkhattar Ji today and requested his intervention on expediting submission of ISA report, early CMRS approval and opening of the #YellowLine as soon as possible.
— Tejasvi Surya (@Tejasvi_Surya) July 18, 2025
I also requested him to push for more Transit Oriented Development in our cities and… pic.twitter.com/zriHz46E1j
ಮಾಸಿಕ 2 ರೈಲು ಪೂರೈಕೆ ಭರವಸೆ: CMRS ಅನುಮೋದನೆ ಬಾಕಿ
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೂರನೇ ರೈಲು ಬಂದ ಬಳಿಕ ಸಿಎಂಆರ್‌ಎಸ್ ತಂಡ ಪ್ರೋಟೊಟೈಪ್ ಡ್ರವೈರ್‌ಲೆಸ್ ರೈಲನ್ನು ಪರೀಶಿಲಿಸಿದ್ದಾರೆ. ಇನ್ನೊಂದಿಷ್ಟು ಪ್ರಕ್ರಿಯೆಗಳು ಬಾಕಿ ಇವೆ. ಐಟಿ ಕಾರಿಡಾರ್ ಸಂಪರ್ಕಿಸುವ ಈ ಹಳದಿ ಮಾರ್ಗದ ಎಲ್ಲ ರೈಲು ನಿಲ್ದಾಣಗಳ ತಪಾಸಣೆ ಮಾಡಲಿದ್ದಾರೆ. ಇದಾದ ಬಳಿಕ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವುದು ಬಾಕಿ ಇದೆ.
ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ಈ ಮೊದಲೇ ಮಾತು ಕೊಟ್ಟಂತೆ ಡ್ರೈವರ್‌ಲೆಸ್ ರೈಲು ಪೂರೈಕೆ ವಿಳಂಬವಾಗಿದೆ. ಇದರಿಂದ ಹಳದಿ ಮೆಟ್ರೋ ಮಾರ್ಗ ಕಾರ್ಯಾರಚಣೆ ವಿಳಂಬವಾಗುತ್ತಿದೆ. ಈ ಮಾರ್ಗ ಆರಂಭಕ್ಕೆ ಕನಿಷ್ಠ ಎಂಟು ರೈಲುಗಳಾದರೂ ಬೇಕು. ಸದ್ಯ BMRCL ಬಳಿ ಕೇವಲ ಮೂರು ರೈಲುಗಳಿವೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡರಂತೆ ರೈಲು ಪೂರೈಕೆಗೆ ಕಂಪನಿ ಬದ್ಧವಾಗಿರುವುದಾಗಿ ಇತ್ತೀಚೆಗೆ ಎತಿಳಿಸಿದೆ. ಈ ಸಂಬಂಧ ಸಿಎಂಆರ್‌ಎಸ್ ತಡಮಾಡದೇ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವಂತೆ, ಕೇಂದ್ರ ಸಚಿವರ ಮಧ್ಯ ಪ್ರವೇಶಿಸುವಂತೆ ಸಂಸದ ತೇಜಸ್ವಿ ಸೂರ್ಯ ಮನವಿ ಪತ್ರ ಮೂಲಕ ಆಗ್ರಹಿಸಿದ್ದರೆ.












Click it and Unblock the Notifications