ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಚಾರ್ಯ ಕ್ಯಾಂಪಸ್ ನಲ್ಲಿ ರಾಜ್ಯಮಟ್ಟದ ಯೋಜನಾ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಫೆ.11 : ಬೆಂಗಳೂರಿನ ಆಚಾರ್ಯ ಇನ್ಸ್ ಟಿಟ್ಯೂಟ್ ಮತ್ತೊಂದು ರಾಜ್ಯ ಮಟ್ಟದ ಸ್ಪರ್ಧೆಯನ್ನು ನಡೆಸಲು ತಯಾರಿ ಆರಂಭಿಸಿದೆ. ಫೆ.16 ಮತ್ತು 17 ರಂದು ಇನ್ಸ್ ಟಿಟ್ಯೂಟ್ ಆವರಣದಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಯೋಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

120 ಎಕರೆ ಪ್ರದೇಶದಲ್ಲಿ ಹಬ್ಬಿರುವ ಆಚಾರ್ಯ ಇನ್ಸ್ ಟಿಟ್ಯೂಟ್ ಪರಿಸರ ಸ್ನೇಹಿ ಕ್ಯಾಂಪಸ್ ನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಸ್ಪರ್ಧೆಗಳು ಈಗಾಗಲೇ ನಡೆದಿವೆ. ಸದ್ಯ ಫೆ.16 ಮತ್ತು 17ರಂದು ಆಚಾರ್ಯ ಪಾಲಿಟೆಕ್ನಿಕ್ ಇನ್ಸ್ ಟಿಟ್ಯೂಟ್ ಆವರಣದಲ್ಲಿ Technical Project Competition ಹಮ್ಮಿಕೊಂಡಿದೆ.

Acharya campus

ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮತ್ತು ಆಚಾರ್ಯ ಪಾಲಿಟೆಕ್ನಿಕ್ ಜಂಟಿಯಾಗಿ ಈ ರಾಜ್ಯ ಮಟ್ಟದ ತಾಂತ್ರಿಕ ಯೋಜನಾ ಸ್ಪರ್ಧೆಯನ್ನು ಆಯೋಜಿಸಿವೆ. ಈ ಸ್ಪರ್ಧೆ "Do-it yourself" ಎಂದೇ ಪ್ರಸಿದ್ಧಿ ಪಡೆದಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕ್ಯಾಂಪಸ್ ಆವರಣದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ.16ರಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸ್ಪರ್ಧೆಯನ್ನು ಉದ್ಗಾಟಿಸಿಲಿದ್ದು, ಯಲಹಂಕ ಶಾಸಕ ವಿಶ್ವನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ತಮ್ಮ ಬುದ್ದಿವಂತಿಕೆ ಪ್ರದರ್ಶಿಸಲಿದ್ದಾರೆ.55 ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, 170 ಯೋಜನೆಗಳನ್ನು ತಯಾರಿಸಲಿದ್ದಾರೆ.

English summary
Acharya Polytechnic/Technical Campus is hosting a state level Technical Project Competition which is popularly known as “Do-it yourself” in association with Directorate Of Technical Education. The Event is scheduled on 16th and 17th of February 2014 at Acharya Polytechnic/Technical Campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X