ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಂತ್ರಿಕ ದೋಷ: ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯತ್ಯಯ

|
Google Oneindia Kannada News

Recommended Video

ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯತ್ಯಯ | Oneindia Kannada

ಬೆಂಗಳೂರು, ಫೆಬ್ರವರಿ 10 : ಯಲಚೇನಹಳ್ಳಿ ಜೆಪಿನಗರ ನಮ್ಮ ಮೆಟ್ರೋ ನಿಲ್ದಾಣ ನಡುವಿನ ಒಂದು ಹಳಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಯಲಚೇನಹಳ್ಳಿಯಲ್ಲಿ ಶುಕ್ರವಾರ ಒಂದು ಪ್ಲ್ಯಾಟ್ ಫಾರ್ಮ್ ಮಾತ್ರ ಬಳಕೆ ಮಾಡಬೇಕಾಯಿತು.

ಯಲಚೇನಹಳ್ಳಿಯಲ್ಲು ಮೆಜೆಸ್ಟಿಕ್ ಕಡೆಯಿಂದ ಬಂದವರನ್ನು ಇಳಿಸಲು ಹಾಗೂ ಮೆಜೆಸ್ಟಿಕ್ ಕಡೆಗೆ ಹೋಗುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಒಂದೇ ಪ್ಲ್ಯಾಟ್ ಫಾರ್ಮ್ ಬಳಸಲಾಯಿತು.

ನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳ

ಮೆಜೆಸ್ಟಿಕ್ ನಿಂದ ಬರುವಾಗ ಸಾಮಾನ್ಯವಾಗಿ ಎಡಭಾಗದ ಪ್ಲ್ಯಾಟ್ ಫಾರ್ಮ್ ನಲ್ಲಿ ಇಳಿಯಬೇಕು ಆದರೆ ಬಲಭಾಗದ ಪ್ಲ್ಯಾಟ್ ಫಾರ್ಮ್ ನಲ್ಲಿ ಇಳಿಯಬೇಕಾಯಿತು. ಗುರುವಾರ ರಾತ್ರಿ ಹಳಿಯಲ್ಲಿ ಸಣ್ಣ ದೋಷ ಕಾಣಿಸಿಕೊಂಡಿದ್ದ ಪರಿಣಾಮ ಒಂದು ಹಳಿಯನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ.

Technical problem hits Yalachenahalli metro station

ಜೆಪಿ ನಗರ ನಿಲ್ದಾಣ ದಾಟಿ ಬಂದ ಬಳಿಕ ರೈಲನ್ನು ಮಾರ್ಗ ಮಧ್ಯೆಯೇ ನಿಲ್ಲಿಸಲಾಯಿತು. ನಂತರ ಹಳಿಯನ್ನು ಬದಲಾಯಿಸಲಾಯಿತು. ಹಳಿಯಲ್ಲಿ ದೋಷ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಡೀ ದಿನ ಒಂದೇ ಪ್ಲ್ಯಾಟ್ ಫಾರ್ಮ್ ಬಳಸಲಾಯಿತು. ಮೆಟ್ರೊ ಜಾಲದಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದು ಮಾಮೂಲಿ. ಇದರಿಂದಾಗಿ ಪ್ರಯಾಣಿಕರಿಗೆ ಅನನುಕೂಲ ಆಗದಂತೆ ನಾವು ಎಚ್ಚರ ವಹಿಸುತ್ತೇವೆ. ಯಲಚೇನಹಳ್ಳಿ ನಿಲ್ದಾಣದ ಬಳಿ ದೋಷ ಕಾಣಿಸಿಕೊಂಡಿದ್ದರೂ, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ನಿಗಮದ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ತಿಳಿಸಿದ್ದಾರೆ.

English summary
Due to technical problem between JP Nagar and Yelachenahalli, namma metro service was provided in single platform at Yelachenahalli metro station on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X