Namma Metro: ರೈಲಿನಲ್ಲಿ ದೋಷ, ಸೇವೆಯಲ್ಲಿ ವ್ಯತ್ಯಯ, ಪದೇ ಪದೆ ಯಾಕೆ ಹೀಗೆ?
ಬೆಂಗಳೂರು, ಜೂನ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತೀ ವೇಗದ ಮತ್ತು ಸುರಕ್ಷತೆಯ ಪ್ರಯಾಣ ಸೇವೆಗೆ ಹೆಸರಾಗಿರುವ ನಮ್ಮ ಮಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಕೆಲವು ಗುರುವಾರ ಬೆಳಗ್ಗೆ ಕೆಲವು ಘಂಟೆಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯವಾಯಿತು.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬೆಂಗಳೂರು ಮಟ್ರೋ ರೈಲು ನಿಗಮ (BMRCL) ಅಧಿಕಾರಿಗಳು, ಗುರುವಾರ ಬೆಳಗ್ಗೆ ಎಂದಿನಂತೆ ರೈಲು ಸಂಚಾರ ಆರಂಭವಾಗಿತ್ತು. ಈ ವೇಳೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ಬೆಳಗ್ಗೆ 9.58 ಕ್ಕೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.

ನಂತರ ಆ ದೋಷಯುಕ್ತ ರೈಲನ್ನು ಕೆಂಪೇಗೌಡ ಮೆಜೆಷ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪಾಕೆಟ್ ಟ್ರ್ಯಾಕ್‌ಗೆ ಕೊಂಡೋಯ್ಯಲಾಗಿದೆ. ಇದರಿಂದ ಒಂದಷ್ಟು ತೊಂದರೆ ಆಗಿದ್ದು, ಸಂಚಾರ ಸೇವೆಯಲ್ಲಿ ವ್ಯತ್ಯವಾಯಿತು. ಒಂದೆರಡು ಗಂಟೆಗಳ ಬಳಿಕ ರೈಲು ಸೇವೆಯನ್ನು ಎಂದಿನಂತೆ ಆರಂಭಿಸಲಾಗಿದೆ ಎಂದು ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಟ್ವಿಟ್ಟರ್ (ಎಕ್ಸ್) ನಲ್ಲಿ ಪೋಸ್ಟ್ ಮಾಡಿರುವ ಅವರು ಉಂಟಾದ ಅಡಚಣೆಗೆ ಬಿಎಂಆರ್‌ಸಿಎಲ್ ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ. ಜೊತೆಗೆ ದೋಷಯುಕ್ತ ರೈಲನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮರದ ಕೊಂಬೆ ಬಿದ್ದು, ತಾಂತ್ರಿಕ ಸಮಸ್ಯೆ, ಆತ್ಮಹತ್ಯೆ ಯತ್ನದಂತಹ ಕೆಲವು ಸಮಸ್ಯೆಗಳಿಂದಾಗಿ ಪದೇ ಪದೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಅದು ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಹೀಗಾಗುತ್ತಿರುವ ಕಾರಣ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಮೆಟ್ರೋ ಸೇವೆ ಬಗ್ಗೆ ಸುಳ್ಳು ಹೇಳಿದ್ರಾ ಅಧಿಕಾರಿಗಳು?
ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷಗಳಾದ ಬಳಿಕ ಬೆಳಗ್ಗೆ 11.30ರ ಹೊತ್ತಿಗೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳನ್ನು ಮರುಸ್ಥಾಪಿಸಲಾಗಿದೆ. ಎಲ್ಲವು ಸರಿ ಹೋಗಿದ್ದು, ಎಂದಿನಂತೆ ಸೇವೆ ಆರಂಭವಾಗಿದೆ. ಈ ಬಗ್ಗೆ ಸಾರ್ವಜನಿಕರು ದಯವಿಟ್ಟು ಗಮನಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಆದರೆ, ನಮ್ಮ ಮೆಟ್ರೋ ಟ್ವೀಟ್ ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಬೆಳಗ್ಗೆ 11:30ಗಂಟೆಗೆ ಮೆಟ್ರೋ ರೈಲು ಸೇವೆ ಮರುಸ್ಥಾಪಿಸಲಾಗಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಏಕೆ ಪ್ರಕಟಿಸಿಲ್ಲ. ಪ್ರತಿ 30 ನಿಮಿಷಗಳಿಗೊಮ್ಮೆ ನಾವು ಮಾಹಿತಿ ಪಡೆಯುತ್ತಿದ್ದು, ಇದು ಆರಂಭವಾಗಲಿದೆ ಎಂದು ಹತಿಳಿಸಿದ್ದಾರೆ. ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.












Click it and Unblock the Notifications