Breaking; ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ತೊಂದರೆ ಕಾರಣ ಒಂದೇ ಹಳಿಯಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ.
ಗುರುವಾರ ಬೆಳಗ್ಗೆ ನೇರಳೆ ಮಾರ್ಗದ ಮೈಸೂರು ರಸ್ತೆ-ಕೆಂಗೇರಿ ಮಾರ್ಗದಲ್ಲಿನ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 25 ರಿಂದ 30 ನಿಮಿಷಕ್ಕೊಂದು ರೈಲುಗಳು ಓಡುತ್ತಿವೆ.

ಸದ್ಯ ರೈಲುಗಳು ಬೈಯಪ್ಪನಹಳ್ಳಿ-ಮೈಸೂರು ರಸ್ತೆ ತನಕ ಯಾವುದೇ ಅಡೆ ತಡೆ ಇಲ್ಲದೇ ಸಂಚಾರ ನಡೆಸುತ್ತಿವೆ. ರೈಲುಗಳಿಗೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿರುವುದರಿಂದ ಪೀಕ್ ಅವರ್‌ನಲ್ಲಿ ಜನರಿಗೆ ತೊಂದರೆ ಉಂಟಾಗಿದೆ. ಜನರು ಮೆಟ್ರೋ ಬಿಟ್ಟು, ಬಸ್, ಖಾಸಗಿ ವಾಹನದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಇಂಜನಿಯರ್‌ಗಳು ಸ್ಥಳಕ್ಕೆ ಆಗಮಿಸಿದ್ದಾರೆ. ತಾಂತ್ರಿಕ ದೋಷ ಸರಿಪಡಿಸಲು ತಜ್ಞರ ತಂಡ ಪ್ರಯತ್ನ ನಡೆಸಿದೆ.
For kind information to all the Namma metro commuters.
— ನಮ್ಮ ಮೆಟ್ರೋ (@cpronammametro) September 15, 2022
Due to a technical fault, the trains will operate on a single track at 25 to 30 min intervals between Kengeri and Mysore stations .
Maintenance team are at the site for early rectification of the fault .
ತಾಂತ್ರಿಕ ದೋಷ ಸರಿಪಡಿಸುವ ತನಕ ಒಂದೇ ಹಳಿಯಲ್ಲಿ ಮೈಟ್ರೋ ರೈಲುಗಳು ಸಂಚಾರ ನಡೆಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು ಅರ್ಧಗಂಟೆಯಲ್ಲಿ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.
ತಾಂತ್ರಿಕ ತೊಂದರೆ ಬಗ್ಗೆ ನಮ್ಮ ಮೆಟ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಎಲ್ಲಾ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾಹಿತಿಗೆ, ತಾಂತ್ರಿಕ ದೋಷದ ಕಾರಣ ಕೆಂಗೇರಿ ಮತ್ತು ಮೈಸೂರು ನಿಲ್ದಾಣಗಳ ನಡುವೆ 25 ರಿಂದ 30 ನಿಮಿಷಗಳ ಮಧ್ಯಂತರದಲ್ಲಿ ರೈಲುಗಳು ಒಂದೇ ಹಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ದೋಷವನ್ನು ಶೀಘ್ರ ಸರಿಪಡಿಸಲು ನಿರ್ವಹಣಾ ತಂಡವು ಸ್ಥಳದಲ್ಲಿದೆ ಎಂದು ಹೇಳಿದೆ.












Click it and Unblock the Notifications