• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಗೆ ಆಹ್ವಾನಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಟೆಕ್ಕಿ ಅರೆಸ್ಟ್

|

ಬೆಂಗಳೂರು, ಜನವರಿ 10: ಮನೆಗೆ ಊಟಕ್ಕೆಂದು ಕರೆದು ಯುವತಿಗೆ ನಿದ್ರೆಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

11 ಮಂದಿಯ ಅತ್ಯಾಚಾರ-ಹತ್ಯೆ ಅಪರಾಧಿಗೆ ಚೀನಾದಲ್ಲಿ ನೇಣು11 ಮಂದಿಯ ಅತ್ಯಾಚಾರ-ಹತ್ಯೆ ಅಪರಾಧಿಗೆ ಚೀನಾದಲ್ಲಿ ನೇಣು

ದೆಹಲಿ ಮೂಲದ ಮೈಕೆಲ್ ಸೊರೆಂಗ್ ಬಂಧಿತ ಆಟೋಪಿ, ಈತ ವೃತ್ತಿಯಲ್ಲಿ ಆತ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾನೆ. ಬೆಂಗಳೂರಲ್ಲಿ ವಾಸವಿದ್ದ ಆತ ಜಾರ್ಖಂಡ್‌ನ ರಾಂಚಿ ಮೂಲದ ಯುವತಿಯನ್ನು ಊಟಕ್ಕೆಂದು ಆಹ್ವಾನಿಸಿ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ.

ಹದಿನಾರರ ಹರೆಯದಲ್ಲೇ ಅತ್ಯಾಚಾರ : ಪದ್ಮಾ ಲಕ್ಷ್ಮಿಯಿಂದ ಸ್ಫೋಟಕ ಸತ್ಯಹದಿನಾರರ ಹರೆಯದಲ್ಲೇ ಅತ್ಯಾಚಾರ : ಪದ್ಮಾ ಲಕ್ಷ್ಮಿಯಿಂದ ಸ್ಫೋಟಕ ಸತ್ಯ

ಈ ಘಟನೆ ಸೆಪ್ಟೆಂಬರ್ 8ರಂದು ನಡೆದಿತ್ತು, ಅತ್ಯಾಚಾರ ಪ್ರಶ್ನಿಸಿದ್ದಕ್ಕೆ ಆಕೆಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ, ಹಾಗೆಯೇ ಕೆಲ ದಿನಗಳ ಕಾಲ ಆಕೆಯಿಂದ ದೂರವಿದ್ದ, ನಂತರ ಸಂಸ್ತ್ರಸ್ತೆ ಆತನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಫ್ಲ್ಯಾಟ್ ಖಾಲಿ ಮಾಡಿ ಹೋಗಿರುವುದು ಗೊತ್ತಾಗಿದೆ. ಬಳಿಕ ನೊಂದ ಸಂಸ್ತ್ರಸ್ತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

English summary
Delhi origin techie arrested for rape charges. A lady accused him for rape in his house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X