ಆಚಾರ್ಯ ಕಾಲೇಜಿನಲ್ಲಿ ತಾಂಜಾನಿಯಾ ಡೇ ಸಂಭ್ರಮ
ಬೆಂಗಳೂರು, ಡಿ.19 : ಬೆಂಗಳೂರಿನ ಆಚಾರ್ಯ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಎಥಿನಿಕ್ ಡೇಯನ್ನು ವಿಶಿಷ್ಟ ಪೂರ್ಣವಾಗಿ ಆಚರಣೆ ಮಾಡಿದರು. ತಾಂಜಾನಿಯಾ ವಿದ್ಯಾರ್ಥಿಗಳೊಂದಿಗೆ ದಿನವನ್ನು ಆಚರಣೆ ಮಾಡಿದ್ದರಿಂದ ಅದಕ್ಕೆ ತಾಂಜಾನಿಯಾ ಡೇ ಎಂಬ ಹೆಸರು ನೀಡಿದ್ದರು. ಸಂಗೀತ, ಹಾಡು, ವಿವಿಧ ಸ್ಪರ್ಧೆಗಳಿಂದ ತಾಂಜಾನಿಯಾ ಡೇ ರಂಗೇರಿತ್ತು.
ತಾಂಜಾನಿಯಾ ಡೇಗೆ ಅಲ್ಲಿನ ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಕ ಹಾಡು, ನೃತ್ಯದ ಮೂಲಕ ವಿಶಿಷ್ಟ ಮೆರಗು ನೀಡಿದರು. ಆಚಾರ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಕೃತಿ ಪರಿಚಯ ಮಾಡಿಕೊಟ್ಟ ತಾಂಜಾನಿಯಾ ವಿದ್ಯಾರ್ಥಿಗಳು, ತಮ್ಮ ದೇಶದ ನಾಡಗೀತೆಯೊಂದಿಗೆ ಎಥಿನಿಕ್ ಡೇ ಸಂಭ್ರಮಾಚರಣೆ ಆರಂಭಿಸಿದರು.
ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮ, ಹಾಡು, ನೃತ್ಯ, ವಿವಿಧ ಸ್ಪರ್ಧೆಗಳಿಂದ ಆಚಾರ್ಯ ಪಿಯು ಕಾಲೇಜಿನ ಆವರಣ ರಂಗೇರಿತ್ತು. ತಾಂಜಾನಿಯಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕನ್ನಡ ಪಾಂಡಿತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ತಾಂಜಾನಿಯಾ ಡೇ ಸಂಭ್ರಮಾಚರಣೆ ಚಿತ್ರಗಳಲ್ಲಿ

ತಾಂಜಾನಿಯಾ ಡೇ
ಬೆಂಗಳೂರಿನ ಆಚಾರ್ಯ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಎಥಿನಿಕ್ ಡೇಯನ್ನು ತಾಂಜಾನಿಯಾ ವಿದ್ಯಾರ್ಥಿಗಳೊಂದಿಗೆ ಸೇರಿ `ತಾಂಜಾನಿಯಾ ಡೇ`ಯನ್ನಾಗಿ ಆಚರಣೆ ಮಾಡಿದರು. ಬೆಂಗಳೂರಿನ ವಿದ್ಯಾರ್ಥಿಗಳಿಗೆ ಇದರಿಂದ ತಾಂಜಾನಿಯಾ ಸಂಸ್ಕೃತಿಯ ಪರಿಚಯವಾಯಿತು.

ಆಚಾರ್ಯ ಕಾಲೇಜಿನ ಆವರಣದಲ್ಲಿ ಸಂಭ್ರಮ
ತಾಂಜಾನಿಯಾ ಡೇ` ಅಂಗವಾಗಿ ಆಚಾರ್ಯ ಕಾಲೇಜಿನ ಆವರಣ ಸಂಭ್ರಮ ಸಡಗರದಲ್ಲಿ ಮುಳುಗಿ ಹೋಗಿತ್ತು.ಡ್ರಮ್ಮರ್ ರಮೇಶ್ ಕಾರ್ಯಕ್ರಮ, ತಾಂಜಾನಿಯಾ ವಿದ್ಯಾರ್ಥಿಗಳ ಸಾಂಪ್ರದಾಯಿಕ ನೃತ್ಯ ವಿದ್ಯಾರ್ಥಿಗಳ ಮನಸೂರೆಗೊಂಡಿತು.

ಜೀನ್ಸ್, ಟಿ ಶರ್ಟ್ ಗೆ ಗುಡ್ ಬೈ
ತಾಂಜಾನಿಯಾ ಡೇ` ಗೆ ಮತ್ತಷ್ಟು ಮೆರಗು ನೀಡಲು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿದ್ದರು. ಪ್ರತಿದಿನ ಜೀನ್ಸ್, ಟಿ ಶರ್ಟ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿಗಳು ಅವುಗಳಿಗೆ ವಿದಾಯ ಹೇಳಿದ್ದರು.

ಕನ್ನಡ ಪಾಂಡಿತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳು
ಎಥಿನಿಕ್ ಡೇಯಲ್ಲಿ ತಾಂಜಾನಿಯಾ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾತನಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಯಾವುದೇ ಬೇರೆ ಭಾಷೆಯ ಶಬ್ದಗಳನ್ನು ಬಳಸದೆ ತಾಂಜಾನಿಯಾ ವಿದ್ಯಾರ್ಥಿಗಳು ಕನ್ನಡ ಮಾತನಾಡಿ ತಮ್ಮ ಕನ್ನಡ ಪಾಂಡಿತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು
ಆಚಾರ್ಯ ಕಾಲೇಜಿನಲ್ಲಿ ಎಥಿನಿಕ್ ಡೇಯಲ್ಲಿ ತಾಂಜಾನಿಯಾದ ಕಲೆ ಮತ್ತು ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟದ್ದಕ್ಕೆ ವಿದ್ಯಾರ್ಥಿಗಳು ಸಂತಸ ಪಟ್ಟರು. ಭಾರತದಲ್ಲಿ ತಮ್ಮ ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.












Click it and Unblock the Notifications