ವಲಸೆ ಬದುಕಿನ ಮೇಲೆ ಬೆಳಕು ಚೆಲ್ಲುವ 'ಹಿಜಾಬ್' ಕುರಿತು ಅವಲೋಕನ

ಬೆಂಗಳೂರು, ಮಾರ್ಚ್ 21: ಲೇಖಕ, ವೈದ್ಯರು ಆಗಿರುವ ಗುರುಪ್ರಸಾದ್ ಕಾಗಿನೆಲೆಯವರ 'ಹಿಜಾಬ್' ಕಾದಂಬರಿ ಆಧಾರಿತ ಸಂವಾದ ಕಾರ್ಯಕ್ರಮವು ಮಾ.25ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಲಿದೆ.

ಹಿಜಾಬ್ ಗುರುಪ್ರಸಾದ್ ಅವರ ಮೂರನೇ ಕಾದಂಬರಿಯಾಗಿದೆ , ಕಥೆಯ ಪ್ರಾರಂಭದಲ್ಲಿ ಓದಲು ಕುತೂಹಲ ರೋಚಕ ಹುಟ್ಟಿಸಿದರೂ ಕೊನೆಯ ಪುಟದಲ್ಲಿ ಶಾಂತ ತಟಸ್ಥ ರೀತಿಯಲ್ಲಿ ಸಾಗಿರುವ ಕಾದಂಬರಿ ಇದಾಗಿದೆ.
.ಇಡೀ ಕಾದಂಬರಿಯು ವಲಸೆ ಬಂದಿರುವ ಕಪ್ಪು ಬಣ್ಣದ ಮುಸ್ಲಿಮರು, ಪಕೋಡ ಜತೆ ಬಿಯರ್ ಕುಡಿಯುವ ಭಾರತೀಯರು, ಜಾಗತಿಕ ಜ್ಞಾನವಿಲ್ಲದ ಸ್ಥಳೀಯ ಅಮೆರಿಕನ್ನರ ಮಧ್ಯೆ ನಡಯುವ ಕಥೆಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈಗ ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಗಳು ಉಲ್ಬಣಗೊಂಡಿರುವ ಕಾಲದಲ್ಲಿ ವಲಸೆ ಎನ್ನುವ ವಿಷಯ ಇಟ್ಟುಕೊಂಡು ಬರೆದಿರುವ ಕಾದಂಬರಿ ಹಿಜಾಬ್, ಕಪ್ಪು ಮತ್ತು ಮುಸ್ಲಿಂ ಧರ್ಮ ಅನುಸರಿಸುವ ಸೋಮಾಲಿಯದವರು ಅಮರೆಕಗೆ ವಲಸೆ ಬರುವುದು, ಅಲ್ಲಿನ ಮೂಲ ನಿವಾಸಿಗಳನ್ನು ಕೊಂಡು ತಮ್ಮದೇ ಅಮೆರಿಕ ಕಟ್ಟಿಕೊಂಡ ಐರೋಪ್ಯ ಕತೆಗಳನ್ನು ಅಲ್ಲಿ ಓದಬಹುದಾಗಿದೆ.

Talk on Hijab, novel by Guruprasad Kaginele on Sunday

ಅಂದು ಡಾ. ಸಿ.ಎನ್. ರಾಮಚಂದ್ರನ್, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎನ್. ಮಂಗಳಾ ವಾಚನ ಮಾಡಲಿದ್ದಾರೆ. ದತ್ತಾತ್ರಿ ಎಂ.ಆರ್ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ.

ಏನು- ಹಿಜಾಬ್ ಕಾದಂಬರಿ ಕುರಿತು ಸಂವಾದ
ಎಲ್ಲಿ- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ
ಯಾವಾಗ-ಮಾರ್ಚ್ 25, ಭಾನುವಾರ, ಬೆಳಗ್ಗೆ 10.30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+