ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏನಿದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ತಿಳಿಯಬೇಕೆ?

By Nayana
|
Google Oneindia Kannada News

ಬೆಂಗಳೂರು, ಜು.4: ಲೇಖಕ ವಸಂತ್‌ ಶೆಟ್ಟಿಯವರ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಏನಿದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಎನ್ನುವ ವಿಷಯ ಕುರಿತು ಜುಲೈ 8ರಂದು ಭಾನುವಾರ ಅರಿಮೆ ಮಾತುಕತೆಯನ್ನು ಹಮ್ಮಿಕೊಂಡಿದೆ.

ಬಸವನಗುಡಿಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಭಾನುವಾರ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಟರ್ಬೋ ಪಾಸ್‌ ಸಾಫ್ಟ್‌ ವೇರ್‌ ಸಂಸ್ಥೆ ಎಂಜಿನಿಯರಿಂಗ್‌ ಮುಖ್ಯಸ್ಥ ಪವಮಾನ್‌ ಅಥಣಿ ಈ ವಿಚಾರದ ಕುರಿತು ತಿಳಿಸಿಕೊಡಲಿದ್ದಾರೆ.

ಸಾಮಾಜಿಕ ಆರ್ಥಿಕ ಸ್ಥಿತಿ ಮೇಲೆ ಕೃಷಿ ಸಾಲ ಮನ್ನಾ ಪರಿಣಾಮ: ಉಪನ್ಯಾಸ ಸಾಮಾಜಿಕ ಆರ್ಥಿಕ ಸ್ಥಿತಿ ಮೇಲೆ ಕೃಷಿ ಸಾಲ ಮನ್ನಾ ಪರಿಣಾಮ: ಉಪನ್ಯಾಸ

ಒಂದು ಕಾಲದಲ್ಲಿ ಕೇವಲ ಹಾಲಿವುಡ್‌ ಸಿನೆಮಾ ಕಲ್ಪನೆಯ ಸರಕಾಗಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಅಥವಾ ಎಐ ವಾಸ್ತವದ ಹೊಸ್ತಿಲಲ್ಲಿ ನಿಂತಿದೆ. ಮುಂದಿನ ದಿನಗಳಲ್ಲಿ ನಮ್ಮ ಬದುಕನ್ನು ಹಿಂತಿರುಗಿಸಲಾಗದ ರೀತಿಯಲ್ಲಿ ಮಾರ್ಪಡಿಸಿಬಿಡುವ ಕಡೆಗೆ ಹೆಜ್ಜೆ ಹಾಕುತ್ತಿದೆ.

Talk on Artificial Intelligence by Pavaman Athani

ಹಾಗಿದ್ದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಂದರೆ ಏನು, ಒಂದು ಬಗೆಯ ಸಾಫ್ಟ್‌ವೇರೇ?, ಇಲ್ಲವೇ ಬರಿ ಒಂದು ಪರಿಕಲ್ಪನೆಯೇ? ಇಪ್ಪತ್ತೊಂದನೆ ಶತಮಾನದ ಸಾಮಾಜಿಕ ಆರ್ಥಿಕ ಸಮೀಕರಣಗಳನ್ನು ಬುಡಮೇಲು ಮಾಡಿಬಿಡಬಹುದು ಎಂದು ಹೇಳಲಾಗುತ್ತಿರುವ ಇದರ ಒಳಿತು, ಕೆಡುಕುಗಳೇನು ಈ ಎಲ್ಲಾ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ.

ಏನು? ಏನಿದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕಾರ್ಯಕ್ರಮ
ಎಲ್ಲಿ?ಮುನ್ನೋಟ ಪುಸ್ತಕ ಮಳಿಗೆ, ಸೌತ್‌ ಅವೆನ್ಯೂ ರಸ್ತೆ, ಡಿವಿಜಿ ರಸ್ತೆ, ನಾಗಸಂದ್ರ ವೃತ್ತ ಬಳಿ, ಬಸವನಗುಡಿ
ಯಾವಾಗ? ಜುಲೈ 8, ಭಾನುವಾರ, ಬೆಳಗ್ಗೆ 11.30

English summary
Munnota book shop organising a talk on Artificial Intelligence by Turbo Pass Software engineering chief Pavaman Athani on July 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X