Railway Work: ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ, ಬೆಂಗಳೂರು ರೈಲಿಗೆ ಹೊಸ LHB ಬೋಗಿಗಳು
ಬೆಂಗಳೂರು, ಜೂನ್ 15: ರೈಲ್ವೆ ಮಾರ್ಗದಲ್ಲಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಂಡ ಕಾರಣ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಒಂದೆರಡು ರೈಲುಗಳ ಸಮಯ ಬದಲಾವಣೆ ಜೊತೆಗೆ ಬೆಂಗಳೂರು-ಎರ್ನಾಕುಲಂ ರೈಲಿನ ಸಾಮಾನ್ಯ ಕೋಚ್‌ಗಳನ್ನು ಎಲ್‌ಎಚ್‌ಬಿ ಬೋಗಿಗಳಿಗೆ ಪರಿವರ್ತಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ರೈಲ್ವೆ ಪುಣೆ ವಿಭಾಗದ ಪುಣೆ-ಮಿರಜ್ ಮಾರ್ಗದಲ್ಲಿ ಅಂಬಾಲೆ ಮತ್ತು ಶಿಂದಾವಾನೆ ಮಧ್ಯೆ ಟ್ರ್ಯಾಕ್ ಡಬ್ಲಿಂಗ್ ಕೆಲಸ ನಡೆಯುತ್ತಿದೆ. ಹೀಗಾಗಿ ಹಜರತ್ ನಿಜಾಮುದ್ದೀನ್ ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗುತ್ತದೆ. ಈ ರೈಲಿಗೆ ಸಂಚರಿಸುವವರು ಗಮನಿಸಿ ಓಡಾಡಬೇಕು.

* ಜೂನ್ 16 ರಂದು ಪ್ರಾರಂಭವಾಗುವ ಹಜರತ್ ನಿಜಾಮುದ್ದೀನ್ ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು (12782) ಮನ್ಮಾಡ್, ದೌಂಡ್, ಕುರ್ದುವಾಡಿ, ಪಂಢರಪುರ ಮತ್ತು ಮಿರಜ್ ಮೂಲಕ ಸಂಚರಿಸುವಂತೆ ಮಾರ್ಗ ಬದಲಾಯಿಸಲಾಗಿದೆ. ದೌಂಡ್ ಕಾರ್ಡ್ ಲೈನ್, ಪುಣೆ, ಸತಾರಾ, ಕರಾದ್ ಮತ್ತು ಸಾಂಗ್ಲಿಯಲ್ಲಿ ನಿಗದಿತ ನಿಲುಗಡೆ ಈ ರೈಲು ನೀಡುವುದಿಲ್ಲ.
* ಜೂನ್ 16 ರಂದು ಆರಂಭವಾಗುವ ವಾಟ್ವಾ ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07334) ಪ್ರಯಾಣವನ್ನು ಪುಣೆ, ದೌಂಡ್, ಕುರ್ದುವಾಡಿ, ಪಂಢರಪುರ ಮತ್ತು ಮಿರಜ್ ಮೂಲಕ ತಿರುಗಿಸಲಾಗುತ್ತದೆ. ಸತಾರಾ, ಕರಾದ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡದು.
ಗುಂತಕಲ್ ನಿಲ್ದಾಣ: ರೈಲು ಸಮಯ ಪರಿಷ್ಕರಣೆ
ದಕ್ಷಿಣ ಮಧ್ಯ ರೈಲ್ವೆಯು ಗುಂತಕಲ್ ನಿಲ್ದಾಣದಲ್ಲಿ ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು ಡೈಲಿ ಎಕ್ಸ್‌ಪ್ರೆಸ್‌ನ ರೈಲು (11013) ಆಗಮನ/ನಿರ್ಗಮನ ಸಮಯ ಪರಿಷ್ಕರಣೆ ಮಾಡಲಾಗಿದೆ. ಈ ಹೊಸ ಸಮಯವು ಜೂನ್ 16ರಿಂದ ಜಾರಿಗೆ ಬರಲಿದೆ. ಈ ರೈಲು 13:05 ನಿಲ್ದಾಣಕ್ಕೆ ಬಂದು 13:10 ಗಂಟೆ ತೆರಳುವ ಸಮಯವನ್ನು ಬದಲಾಯಿಸಿ, 13:10 ಆಗಮಿಸಿ 13:20 ಗಂಟೆಗೆ ಗುಂತಕಲ್ ನಿಲ್ದಾಣ ನಿರ್ಗಮಿಸುತ್ತದೆ.
ಬೆಂಗಳೂರು ರೈಲಿಗೆ ಎಲ್‌ಎಚ್‌ಬಿ ಕೋಚ್
ಪ್ರಯಾಣಿಕರಿಗೆ ಅರಾಮದಾಯಕ ಹಾಗೂ ಸುರಕ್ಷತೆ ನೀಡಲು, ರೈಲ್ವೆ ಸೌಕರ್ಯ ಹೆಚ್ಚಿಸಲು 'ಎರ್ನಾಕುಲಂ ಕೆಎಸ್‌ಆರ್ ಬೆಂಗಳೂರು ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್' ರೈಲು (12678/12677) ಸಾಂಪ್ರದಾಯಿಕ ಐಸಿಎಫ್ ರೇಕ್‌ನಿಂದ ಆಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಫ್‌ಮನ್ ಬುಷ್) ಕೋಚ್‌ಗಳಾಗಿ ಪರಿವರ್ತಿಸುವುದಾಗಿ ದಕ್ಷಿಣ ರೈಲ್ವೆ ತಿಳಿಸಿದೆ. ಹೊಸ ಬೋಗಿಗಳೊಂದಿಗೆ ಈ ರೈಲು ಜೂನ್ 20ರಿಂದ ಕಾರ್ಯಾಚರಣೆ ಆರಂಭಿಸಲಿದೆ.
ಈ ರೈಲಿನಲ್ಲಿ ಎಲ್‌ಎಚ್‌ಬಿ ಕೋರ್ಚ್ ವಿವರ ನೋಡುವುದಾದರೆ, ಎಸಿ ಚೇರ್ ಕಾರ್ -1, ಎರಡನೇ ದರ್ಜೆಯ ಸಿಟ್ಟಿಂಗ್ ಕೋಚ್‌ಗಳು -13, ಪ್ಯಾಂಟ್ರಿ ಕಾರ್ -1, ಎರಡನೇ ದರ್ಜೆಯ ಜನರಲ್ ಕೋಚ್‌ಗಳು -4 ಮತ್ತು ಎರಡನೇ ದರ್ಜೆಯ ಬ್ರೇಕ್ ವ್ಯಾನ್ ಕಮ್ ಲಗೇಜ್ ಕೋಚ್‌ಗಳು -2 ಇರಲಿವೆ. ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ -1 ಜೊತೆಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಅನ್ನು ಒಳಗೊಂಡ ಬೋಗಿಗಳು ಇವಾಗಿರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.












Click it and Unblock the Notifications