ಬೆಂಗಳೂರು ಸವಾರರೇ ಎಚ್ಚರ: 3 ಬೈಕ್‌ಗೆ ಗುದ್ದಿದ ಕಾರು: ಅಪಘಾತದ ವಿಡಿಯೋ ಸೆರೆ

ಬೆಂಗಳೂರು, ನವೆಂಬರ್ 13: ನಗರದಲ್ಲಿ ಭಾನುವಾರ ಎಸ್‌ಯುವಿ ಕಾರೊಂದು ರಸ್ತೆಯಲ್ಲಿ ಹೊರಟಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಏಕಕಾಲಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಸಂಜೆ ಬೆಂಗಳೂರಿನ ಹುಲಿಮಾವು ಪ್ರದೇಶದಲ್ಲಿ ಮುಖ್ಯರಸ್ತೆಯೊಂದರಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಹಿಂದಿನ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

SUV Car Speeding Hits 3 Bike in Main Road of Hulimavu, 4 Injured, Video viral

ವಿಡಿಯೋದಲ್ಲಿರುವ ಸೆರೆಯಾದ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಹಂಪ್ ಇದ್ದ ಕಾರಣ ಎರಡು ಬದಿಯ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಇದೇ ಎಡ ಬದಿಯಲ್ಲಿ ನಿಧಾನವಾಗಿ ಮೂರು ಬೈಕ್ ಮತ್ತು ಕಾರುಗಳು ಸಾಗುತ್ತಿದ್ದವು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಿಳಿ ಬಣ್ಣದ ಎಸ್‌ಯುವಿ ಕಾರೊಂದು ಮುಂದಿನ ಮೂರು ಬೈಕ್ ಗಳಿಗೆ ಗುದ್ದಿ ಸ್ವಲ್ಪ ದೂರ ಹೋಗಿ ನಿಂತಿದೆ.

ಹಿಂಬದಿ ಕಾರಿನ ಕ್ಯಾಮೆರಾದಲ್ಲಿ ವಿಡಿಯೋ ಸೆರೆ

ಈ ಭಯಾನಕ ಘಟನೆ ಡ್ಯಾಶ್‌ ಬೋಡ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನ ನಿಬೀಡ ಪ್ರದೇಶದಲ್ಲಿ ಅತೀ ವೇಗವಾಗಿದ್ದ ಕಾರು ಚಾಲಕನ ಅಜಾಗೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಕಾರು ಬೈಕುಗಳಿಗೆ ಗುದ್ದಿದ ರಭಸಕ್ಕೆ ಸವಾರರು ಇಬ್ಬರು ಗಾಳಿ ತೋರಿ ರಸ್ತೆ ಮಧ್ಯೆ ಬಿದ್ದಿದ್ದಾರೆ. ಮತ್ತೊಬ್ಬ ಬೈಕ್‌ ಸವಾರ ಕಾರು ಡಿಕ್ಕಿ ಹೊಡೆದ ಮೇಲೆ ನಿಯಂತ್ರಣ ಮಾಡಲಾಗದೇ ಪಾದಾಚರಿ ಮಾರ್ಗದಲ್ಲಿ ಉರಳಿ ಬಿದ್ದರು. ಈ ರಸ್ತೆ ಅಪಘಾತದಿಂದ ಸದರಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

SUV Car Speeding Hits 3 Bike in Main Road of Hulimavu, 4 Injured, Video viral

ಸದ್ಯ ಗಾಯಾಳು ವಾಹನ ಸವಾರರನ್ನು ಹತ್ತಿತರ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿರುವ ಕಾರು ಚಾಲಕನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+