ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಂಕಿತ ಉಗ್ರರಾದ ಅಖ್ತರ್ ಹಸೇನ್, ಜುಬಾ ಮೊಬೈಲ್‌ನಲ್ಲಿ ಸ್ಫೋಟಕ ಮಾಹಿತಿ

|
Google Oneindia Kannada News

ಬೆಂಗಳೂರು, ಜುಲೈ 27: ಎನ್‌ಐಎ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದರು. ಬೆಂಗಳೂರಿನ ತಿಲಕ ನಗರದಲ್ಲಿ ಅಖ್ತರ್ ಹುಸೇನ್ ಎಂಬ ಶಂಕಿತನನ್ನು ಮತ್ತು ತಮಿಳುನನಾಡಿನ ಸೇಲಂನಲ್ಲಿ ಜುಬಾ ಎಂಬಾತನನ್ನು ಬಂಧಿಸಲಾಗಿತ್ತು. ಶಂಕಿತ ಪ್ಲಾನ್ ಏನಾಗಿತ್ತು ಅನ್ನೋದರ ಇನ್ ಸೈಡ್ ವರದಿ ಇಲ್ಲಿದೆ.

ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವು ನಗರದಲ್ಲಿ ಉಗ್ರರು ಸ್ಲೀಪರ್ ಸೆಲ್‌ನಂತೆ ಕೆಲಸ ಮಾಡಲು ಪ್ರೇರೆಪಣೆಯನ್ನು ನೀಡುತ್ತಾರೆ. ಕಳೆದ ಒಂದು ವರುಷದ ಅವಧಿಯಲ್ಲಿ ರಾಜ್ಯದಲ್ಲಿ 9ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲೇ ಅತಿಹೆಚ್ಚು ಸ್ಲೀಪರ್ ಸೆಲ್ ರೀತಿಯಲ್ಲಿ ಕೆಲಸವನ್ನು ಮಾಡುವ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕನ್ನು ನೀಡುವುದು ಕಂಡು ಬರುತ್ತಿರುವುದು ಆತಂಕಕಾರಿಯಾದ ಅಂಶವಾಗಿದೆ.

ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಬಂಧಿತವಾಗಿರುವ ಶಂಕಿತ ಉಗ್ರರು ಮಾಸ್ಟರ್ ಪ್ಲಾನ್ ಅನ್ನು ಹಾಕಿದ್ದರು ಅನ್ನೋದು ಬೆಳಕಿಗೆ ಬರುತ್ತಿದೆ. ಶಂಕಿತರನ್ನು ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಅಧಿಕಾರಿಗಳು ಒಂದೊಂದೆ ವಿಚಾರವನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಶಂಕಿತ ಜೊತೆಗೆ ಸಂಪರ್ಕದಲ್ಲಿದ್ದ ಮತ್ತಷ್ಟು ಜನರನ್ನು ಬಲೆಗೆ ಕೆಡವಲು ಅಣಿಯಾಗುತ್ತಿದ್ದಾರೆ. ಇದರೊಂದಿಗೆ ಶಂಕಿತ ಉಗ್ರ ಅಖ್ತರ್ ಹುಸೇನ್ ಮತ್ತು ಜುಬಾ ಜೊತೆಯಲ್ಲಿ ಸಂಪರ್ಕದಲ್ಲಿದ್ದವರು ಬಂಧನವಾಗುವುದು ಖಚಿತವಾಗುತ್ತಿದೆ.

 ಶಂಕಿತರನ್ನು ಬುಡಸಹಿತ ಕೀಳದಿದ್ದರೆ ಗಂಡಾಂತರ

ಶಂಕಿತರನ್ನು ಬುಡಸಹಿತ ಕೀಳದಿದ್ದರೆ ಗಂಡಾಂತರ

ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಶಂಕಿತ ಉಗ್ರರು ಪತ್ತೆಯಾಗಿದ್ದರು. ಅಖ್ತರ್ ಹುಸೇನ್ ಮತ್ತು ಜುಬಾನನ್ನು ಸಿಸಿಬಿ ಮತ್ತು ಎನ್‌ಐಎ ತನಿಖೆ ವೇಳೆ ನಡೆಸುತ್ತಿದೆ. ಈ ವೇಳೆ ಸ್ಫೋಟಕ‌‌ ವಿಚಾರ ಬೆಳಕಿಗೆ ಬಂದಿದೆ. ತಾಲಿಬಾನ್ ರೀತಿಯಲ್ಲಿ ದೊಡ್ಡದಾಗಿ ಪ್ಲಾನ್ ಮಾಡಬೇಕೆಂದು ಶಂಕಿತರು ಆಲೋಜಿಸಿದ್ದರು ಎಂಬುದು ತಿಳಿದು ಬಂದಿದೆ. ತಾಲಿಬಾನ್ ಅಫ್ಘಾನಿಸ್ತಾನ ಆಕ್ರಮಣ ಮಾಡಿದ ರೀತಿಯಲ್ಲಿ ಆಕ್ರಮಣ ಮಾಡಲು ಶಂಕಿತರ ಬಿಗ್ ಪ್ಲಾನ್ ಮಾಡಿದ್ದರಂತೆ. ಮುಸ್ಲಿಂಮರಿಗೆ ಶೋಷಣೆ ಮಾಡೋರನ್ನ ಟಾರ್ಗೆಟ್ ಮಾಡಿ ತೆಕ್ಕೆಗೆ ಹಾಕಿಕೊಳ್ಳಲು ಆಲೋಚನೆಯನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

 ವಾಟ್ಸ್‌ಆಪ್ ಸೇರಿ ಸಾಮಾಜಿಕ ಜಾಲತಾಣ ಮೂಲಕ ಗಾಳ

ವಾಟ್ಸ್‌ಆಪ್ ಸೇರಿ ಸಾಮಾಜಿಕ ಜಾಲತಾಣ ಮೂಲಕ ಗಾಳ

ಪ್ರಪಂಚದಲ್ಲಿ ಯಾರೆಲ್ಲಾ ಮುಸ್ಲಿಮರ ವಿರುದ್ದ ಶೋಷಣೆ ಮಾಡ್ತಾರೆ ಅವರನ್ನ ಹೊಡೆಯಬೇಕು ಅನ್ನೋ ಪ್ಲಾನ್ ಹೊಂದಿದ್ದ ಶಂಕಿತರು ಇದಕ್ಕಾಗಿ ಅಜೆಂಡಾವನ್ನು ರೂಪಿಸಿದ್ದರು. ವ್ಯಾಟ್ಸಪ್ ಗ್ರೂಪ್, ಟೆಲಿಗ್ರಾಂ, ಸೋಷಿಯಲ್ ಮೀಡಿಯಾಗಳ ಮೂಲಕ ಯುವಕರನ್ನು ಶಂಕಿತರು ಸೆಳೆಯುತ್ತಿದ್ದರು. ಇಸ್ಲಾಮಿಕ್ ರಾಷ್ಟ್ರದ ಬಗ್ಗೆ ಒಲವಿರೋರನ್ನ ಟಾರ್ಗೆಟ್ ಮಾಡಿ ಗ್ರೂಪ್ ಗೆ ಸೇರಿಸಿಕೊಳ್ತಿದ್ದರು ಎಂದು ತಿಳಿದು ಬಂದಿದೆ. ತನಿಖೆಯ ವೇಳೆಯಲ್ಲಿ 25 ಜನರಿರೋ ವಾಟ್ಸಪ್ ಗ್ರೂಪ್ ಮಾಡಿಕೊಂಡಿರೋದು ಪತ್ತೆಯಾಗಿದೆ. 25 ಜನರಿರೋ ಗ್ರೂಪ್‌ನಲ್ಲಿ ಅಖ್ತರ್ ಮತ್ತು ಜುಬಾ ಇರೋದು ಪತ್ತೆಯಾಗಿದ್ದೂ ಶಂಕಿತರ ಮೊಬೈಲ್ ಪರಿಶೀಲನೆ ವೇಳೆ ಗ್ರೂಪ್ ವಿಚಾರ ಪತ್ತೆಯಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿರೋ ಶಂಕಿತರೂ ಈ ಗ್ರೂಪ್ ಗಳಲ್ಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಅಖ್ತರ್ ಮತ್ತು ಜುಬಾಗೆ ಸಂಪರ್ಕದಲ್ಲಿ ನೂರಾರು ಮಂದಿ ಇದ್ದಾರೆ ಎನ್ನಲಾಗಿದ್ದು ಎಲ್ಲರನ್ನು ಪತ್ತೆ ಮಾಡಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

 ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ

ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ

ಅಲ್ಖೈದಾ ಉಗ್ರ ಸಂಘಟನೆ ಜೊತೆ ಲಿಂಕ್ ಇರೋ ಬಗ್ಗೆ ಮೂಡಿದ ಅನುಮಾನ ಮೂಡಿದೆ. ಅಖ್ತರ್ ಹಾಗೂ ಜುಬಾ ಇಬ್ಬರೂ ಲಿಂಕ್ ಇರೋ ಬಗ್ಗೆ ಅನುಮಾನವಿದ್ದೂ ಇದೇ ಕಾರಣಕ್ಕೆ ಇಬ್ಬರನ್ನೂ 10 ದಿನಗಳ ಕಸ್ಟಡಿಗೆ ಪಡೆದಿರೋ ಸಿಸಿಬಿ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯ ಸಮಯದಲ್ಲಿ ಅಲ್ಖೈದಾ ಸಂಘಟನೆಗೆ ಸೇರೋಕೆ ಪಕ್ಕಾ ಪ್ಲಾನ್ ಮಾಡಿಕೊಂಡಿರೋದು ತನಿಖೆ ವೇಳೆ ಬಯಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಉಗ್ರ ಸಂಘಟನೆಗೆ ಸೇರಿ ತಾಲಿಬಾನ್ ರೀತಿಯಲ್ಲಿ ವರ್ಕ್ ಎಕ್ಸ್ಪೋಸ್ ಮಾಡೋ ಪ್ಲಾನ್ ಮಾಡಿದ್ದಂತೆ. ಈ ಬಗ್ಗೆ ಅಲ್ಖೈದಾ ಉಗ್ರ ಸಂಘಟನೆ ಜೊತೆ ಚರ್ಚೆ ಮಾಡಿರೋ ಅನುಮಾನ ಮೂಡಿದೆ. ಸದ್ಯ ಶಂಕಿತರ ವ್ಯಾಟ್ಸಪ್ ಗ್ರೂಪ್, ಫೇಸ್ ಬುಕ್ ನಲ್ಲಿ ಕಾಂಟ್ಯಾಕ್ಟ್ ಇರೋರ ಬಗ್ಗೆ ಮಾಹಿತಿ ಕಲೆ‌ ಹಾಕ್ತಿರೋ ಸಿಸಿಬಿ ಕಲೆಹಾಕುತ್ತಿದ್ದಾರೆ.

 ಶಂಕಿತರ ಚೈನ್ ಲಿಂಕ್ ದೊಡ್ಡ ಮಟ್ಟದಲ್ಲಿರೋದು ಪತ್ತೆ

ಶಂಕಿತರ ಚೈನ್ ಲಿಂಕ್ ದೊಡ್ಡ ಮಟ್ಟದಲ್ಲಿರೋದು ಪತ್ತೆ

ಶಂಕಿತ ವಿಚಾರಣೆಯಲ್ಲಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿಯನ್ನು ಐಬಿ, ರಾ, ಎನ್ ಐಎ ಅಧಿಕಾರಿಗಳಿಗೆ ರವಾನಿಸಲಾಗಿದೆ. ಶಂಕಿತರ ಚೈನ್ ಲಿಂಕ್ ದೊಡ್ಡ ಮಟ್ಟದಲ್ಲಿರೋದು ಮೇಲ್ನೋಟಕ್ಮೆ ಪತ್ತೆಯಾಗಿದೆ. ಹೀಗಾಗಿ ಕೇಂದ್ರ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಕೋರುವ ಸಾಧ್ಯತೆಗಳಿವೆ. ತಮಿಳುನಾಡು, ಅಸ್ಸಾಂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆಗೆ ಅಧಿಕಾರಿಗಳು ಚಿಂತನೆಯನ್ನು ನಡೆಸಿದ್ದು. ಕೇಂದ್ರ ತನಿಖಾ ಸಂಸ್ಥೆ ಯಾವ ರೀತಿ ಪ್ರತಿಕ್ರಿಯೆಯನ್ನು ನೀಡುವುದ ಅದರ ಮೇಲೆ ತನಿಖೆಯು ಸಾಗಲಿದೆ.

English summary
CCB Nabs Suspected Terrorist Akhtar Hussain in Bangalore; Explosive information and plan available on Akhtar Hussain's and Juba mobile. Here is the inside report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X