• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಅರಮನೆ ರಸ್ತೆಗೆ ವಿಸ್ತರಣೆ ಭಾಗ್ಯ

|

ಬೆಂಗಳೂರು, ನ.23 : ಬೆಂಗಳೂರು ಅರಮನೆಗೆ ಸೇರಿದ 15.39 ಎಕರೆ ಜಮೀನನ್ನು ಬಳಸಿಕೊಂಡು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುವ ರಸ್ತೆಗಳನ್ನು ಅಗಲಗೊಳಿಸುವ ರಾಜ್ಯ ಸರ್ಕಾರದ ಯೋಜನೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಒಂದು ತಿಂಗಳಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಭವನದಿಂದ ದೇವನಹಳ್ಳಿಯ ತನಕವಿರುವ ಬಳ್ಳಾರಿ ರಸ್ತೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಅಗಲಗೊಳಿಸಿದೆ. ಈ ರಸ್ತೆಯಲ್ಲಿ ಬೆಂಗಳೂರು ಅರಮನೆ ಮೈದಾನಕ್ಕೆ ಅಂಟಿಕೊಂಡಿರುವ ರಸ್ತೆಗಳನ್ನು ಮಾತ್ರ ಅಗಲಗೊಳಿಸುವ ಕಾರ್ಯ ನಡೆಯಬೇಕಾಗಿತ್ತು.

ಹೆಚ್ಚು ವಾಹನ ಸಂಚಾರವಿರುವ ರಮಣ ಮಹರ್ಷಿ ರಸ್ತೆ ಮತ್ತು ಬೆಂಗಳೂರು ಅರಮನೆಗೆ ಹೊಂದಿಕೊಂಡಂತಿರುವ ಜಯಮಹಲ್ ರಸ್ತೆಯನ್ನು ಅಗಲಗೊಳಿಸುವುದು ಅಗತ್ಯಗತ್ಯ ಎಂದು ರಾಜ್ಯ ಸರ್ಕಾರ ಯೋಜನೆ ತಯಾರಿಸಿತ್ತು. ಬೆಂಗಳೂರು ಅರಮೆಗೆ ಸೇರಿದ 15 ಎಕರೆ ಮತ್ತು 39 ಗುಂಟೆಗಳಷ್ಟು ಜಮೀನನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿತ್ತು. [ಬಿಡಿಎಯಿಂದ 12,610 ನಿವೇಶನ ಹಂಚಿಕೆ]

ರಸ್ತೆಗೆ ಅಗತ್ಯವಿರುವ ಜಮೀನನ್ನು ಬಿಟ್ಟುಕೊಡುತ್ತೇವೆ. ಆದರೆ, ಅದಕ್ಕೆ ಪ್ರತಿಯಾಗಿ ವರ್ಗಾವಣೆ ಅಭಿವೃದ್ಧಿ ಹಕ್ಕನ್ನು ತಮಗೆ ನೀಡಬೇಕು ಎಂದು ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತಿತರರು ಹೇಳಿದ್ದರು. ಆದರೆ, ರಾಜ್ಯ ಸರ್ಕಾರ ಹಕ್ಕನ್ನು ನೀಡಲು ನಿರಾಕರಿಸಿದ್ದರಿಂದ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು.

ಸದ್ಯ ಪ್ರಕರಣದ ಬಗ್ಗೆ ತೀರ್ಪು ನೀಡಿರುವ ಕೋರ್ಟ್, ಅರಮನೆ ಜಮೀನಿಗೆ ಪ್ರತಿಯಾಗಿ ವರ್ಗಾವಣೆ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತಿತರೆ ಮೇಲ್ಮನವಿದಾರರಿಗೆ ನೀಡುವಂತೆ ಆದೇಶಿಸಿದೆ.

ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಪತ್ರಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಒಂದು ತಿಂಗಳಿನಲ್ಲಿ ಈ ಯೋಜನೆಯನ್ನು ಆರಂಭಿಸುತ್ತೇವೆ. ಈ ಯೋಜನೆಯಿಂದಾಗಿ ಹೆಚ್ಚು ವಾಹನ ಸಂಚಾರವಿರುವ ರಮಣ ಮಹರ್ಷಿ ರಸ್ತೆ ಮತ್ತು ಬೆಂಗಳೂರು ಅರಮನೆಗೆ ಹೊಂದಿಕೊಂಡಂತಿರುವ ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court gave the green signal to acquire 15.39 acres of Palace ground land to widen Bellary road and Jayamahal Road in Bengaluru city both connecting Kempe Gowda International Airport. Chief Minister Siddaramaiah said, the project will be taken up within a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more