ಬೇಸಿಗೆಯ ಝಳ; ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ಏರಿಕೆ

ಬೆಂಗಳೂರು, ಏಪ್ರಿಲ್ 23; ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಡು ಬೇಸಿಗೆಯಿಂದ ಜನರು ಕಂಗೆಟ್ಟಿದ್ದಾರೆ. ಸರಿಯಾಗಿ ಮಳೆ ಸರಿಯದ ಕಾರಣ ಬೇಸಿಗೆಯ ಝಳಕ್ಕೆ ಜನರು ಬಸವಳಿದು ಹೋಗಿದ್ದಾರೆ. ಬೇಸಿಗೆಯ ಹಿನ್ನಲೆಯಲ್ಲಿ ವಿದ್ಯುತ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅದರಲ್ಲೂ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(ಬೆಸ್ಕಾಂ) ರಾಜ್ಯದ ಪ್ರಮುಖ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಯ ಸುಮಾರು 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆ ಮಾಡುತ್ತಿದೆ. ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್‌ಗಾಗಿ ಬೇಡಿಕೆ ಹೆಚ್ಚಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Summer Power Consumption Hiked In Bescom Limits

ಅಧಿಕಾರಿಗಳ ಮಾಹಿತಿಯಂತೆ ಏಪ್ರಿಲ್ 18ರ ತನಕ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಸರಾಸರಿ 7,282 ಮೆಗಾವ್ಯಾಟ್‌ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಸರಾಸರಿ 6,334 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 821 ಮೆಗಾವ್ಯಾಟ್‌ ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಬೇಸಿಗೆಯ ಕಾರಣ ಫ್ಯಾನ್, ಎಸಿ, ಕೂಲರ್‌ಗಳ ಬಳಕೆಯೂ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಹಲವರು ಮನೆಯಿಂದ ಕೆಲಸ ಮಾಡುವ ಕಾರಣ ನಿರಂತರವಾಗಿ ವಿದ್ಯುತ್ ಬಳಕೆಯಾಗುತ್ತಿದೆ.

ಏರುತ್ತಲಿದೆ ವಿದ್ಯುತ್ ಬಳಕೆ; ಈ ವರ್ಷದ ಫೆಬ್ರವರಿಯಲ್ಲಿಯೇ ಬೇಸಿಗೆಯ ಝಳ ಹೆಚ್ಚಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆಯೇ ಸರಿಯಾಗಿ ಮಳೆ ಬಾರದೇ ಜನರು ಬಿಸಿಲಿನಿಂದ ಕಂಗೆಟ್ಟಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳು ವಿದ್ಯುತ್‌ ಬೇಡಿಕೆ ಹೆಚ್ಚಿತ್ತು, ಏಪ್ರಿಲ್‌ನಲ್ಲಿ ಅದು ಇನ್ನೂ ಏರಿಕೆ ಕಂಡಿದೆ.

ಕಳೆದ ವರ್ಷ ಬೇಸಿಗೆಯಲ್ಲಿಯೂ ಆಗಾಗ ಮಳೆಯಾಗುತ್ತಿತ್ತು. ಆದರೆ ಈ ವರ್ಷ ವಿದ್ಯುತ್‌ ಬೇಡಿಕೆ 489 ಮೆಗಾವಾಟ್‌ಗೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಮಾರ್ಚ್‌ಗಿಂತ ಏಪ್ರಿಲ್ ತಿಂಗಳಿನಲ್ಲಿ ಬಿಸಿಲು ಹೆಚ್ಚಾಗಿದ್ದು, ಮನೆಯಲ್ಲಿ ಇದ್ದರೆ ಫ್ಯಾನ್ ಅನಿವಾರ್ಯವಾಗಿದೆ. ಬಿಸಿಲ ಧಗೆಯಿಂದ ಪಾರಾಗಲು ಜನರು ಫ್ಯಾನ್, ಎಸಿಗಳ ಮೊರೆ ಹೋಗಿದ್ದು ಹಗಲು ಹೊತ್ತಿನಲ್ಲಿಯೂ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ.

Summer Power Consumption Hiked In Bescom Limits

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾರ್ಚ್‌ನಲ್ಲಿ ಸರಾಸರಿ ವಿದ್ಯುತ್‌ ಬೇಡಿಕೆ 2022ರಲ್ಲಿ 2,738 ಮೆಗಾವಾಟ್. 2023ರ ಮಾರ್ಚ್‌ನಲ್ಲಿ 3,147 ಮೆಗಾವಾಟ್. ನಗರದ ಗರಿಷ್ಠ ಉಷ್ಣಾಂಶ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕಿಂತ ಏರಿಕೆಯಾಗಿದೆ. ಮಳೆಗಾಲ ಆರಂಭವಾಗುವ ತನಕ ವಿದ್ಯುತ್‌ಗಾಗಿ ಬೇಡಿಕೆ ಹೆಚ್ಚುತ್ತಲೇ ಸಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಬೇಸಿಗೆಯಲ್ಲಿ ಜನರು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಎಸಿ ಉಪಯೋಗ ಜಾಸ್ತಿ ಮಾಡುತ್ತಾರೆ. ಅಲ್ಲದೇ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚು ವಿದ್ಯುತ್‌ ಬಳಸುತ್ತಿದ್ದಾರೆ. ಕೈಗಾರಿಕೆಗಳಲ್ಲಿ ವರ್ಷಪೂರ್ತಿ ಉತ್ಪಾದನೆ ಪ್ರಮಾಣ ಸಾಮಾನ್ಯವಾಗಿರುತ್ತದೆ. ಆದರೆ ಮನೆ, ಕಚೇರಿಯ ವಿದ್ಯುತ್ ಬಳಕೆಯಲ್ಲಿ ಏರಿಳಿತ ಆಗುತ್ತದೆ. ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ.

ಇದಲ್ಲದೇ ಕೋವಿಡ್ ನಂತರ ಬೆಂಗಳೂರು ನಗರದಲ್ಲಿ ಜನರು ಕಡಿಮೆ ಆಗಿದ್ದರು. ಆದರೆ ಈಗ ಕಚೇರಿ, ಶಾಲೆಗಳು ಪ್ರಾರಂಭವಾಗಿದ್ದು, ಮತ್ತೆ ಜನರು ಬಂದು ಸೇರುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುವುದು ಸಾಗಿದೆ. ಆದ್ದರಿಂದ ವಿದ್ಯುತ್‌ ಬೇಡಿಕೆ ಮತ್ತು ಬಳಕೆ ಹೆಚ್ಚಾಗುತ್ತಲೇ ಇದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆಯಿಂದ ಕೆಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಆದರೆ ಬೇಸಿಗೆಯ ಧಗೆ ಕಡಿಮೆಯಾಗಿಲ್ಲ. ಸರಿಯಾಗಿ ಮುಂಗಾರು ಪೂರ್ವ ಮಳೆ ಸುರಿಯುವ ತನಕ ವಿದ್ಯುತ್‌ಗೆ ಬೇಡಿಕೆ ಏರುತ್ತಲೇ ಇರುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+