Bengaluru Suburban rail: ಉಪನಗರ ರೈಲು ಯೋಜನೆಗೆ ಪೂರ್ಣಕ್ಕೆ ಕೇಲವೇ ತಿಂಗಳು ಬಾಕಿ, ಪ್ರಗತಿ ಕೇವಲ ಶೇ.4..!

ಬೆಂಗಳೂರು, ನವೆಂಬರ್ 24: ರಾಜಧಾನಿ ಬೆಂಗಳೂರಿನ ಜನರಿಗೆ ಟ್ರಾಫಿಕ್ ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸಲಿರುವ ಬೆಂಗಳೂರು ಉಪನಗರ ರೈಲು ಯೋಜನೆ (Bengaluru Suburban Rail Project) ಪೂರ್ಣಗೊಳಿಸಲು ಕೇವಲ ಒಂದು ಸಾವಿರಕ್ಕೂ ಅಧಿಕ (35 ತಿಂಗಳು) ದಿನಗಳು ಮಾತ್ರ ಬಾಕಿ ಉಳಿದಿವೆ.

ಸದ್ಯ ಉದ್ದೇಶಿತ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕೌಂಟ್‌ಡೌನ್ ಶುರುವಾಗಿದೆ. ಈವರೆಗೆ ಯೋಜನೆಯ ಒಟ್ಟು ಕಾಮಗಾರಿ ಪೈಕಿ ಕೇವಲ ಶೇಕಡಾ 4ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಸಿಟಿಜನ್ಸ್ ಫಾರ್ ಸಿಟಿಜನ್ಸ್ (CFC) ಪ್ರಕಾರ, ನಿಗದಿತ ಸಮಯದ ಸುಮಾರು 53% ಮುಗಿದಿದೆ ಆದರೆ ಯೋಜನೆಯಲ್ಲಿ ಪೂರ್ಣಗೊಂಡ ಕೆಲಸದ ಪ್ರಮಾಣವು ಕೇವಲ ಶೇಕಡಾ 4ರಷ್ಟು ಎಂದು ತಿಳಿದು ಬಂದಿದೆ.

Suburban Rail Project Only Have on 35 Month For Completion Work, 4 pc Progress has Achieved

ನಾಲ್ಕು ಕಾರಿಡಾರ್‌ಗಳಲ್ಲಿ ಮೂರು ಕಾರಿಡಾರ್‌ ಇನ್ನೂ ಆರಂಭವೇ ಆಗಿಲ್ಲ ಎನ್ನಲಾಗಿದೆ. ಅತೀ ನಿಧಾನಗತಿಯಲ್ಲಿ ಈ ಯೋಜನೆಯ ಕೆಲಸಗಳು ಸಾಗುತ್ತಿವೆ. ಯೋಜನೆಗೆ ನೀಡಲಾಗಿದ್ದ ಗಡುವು ಪೂರ್ಣಗೊಳ್ಳಲು ಒಟ್ಟು ಕೇವಲ 1,065 ದಿನಗಳು ಬಾಕಿ ಉಳಿದಿವೆ. ಇಷ್ಟು ಕಡಿಮೆ ದಿನದಲ್ಲಿ ಬಾಕಿ ಕೆಲಸ ಪೂರ್ಣ ನಿರೀಕ್ಷೆ ಅಸಾಧ್ಯವಾಗಿದೆ.

ಪ್ರಗತಿ ಬಗ್ಗೆ ನಿರಂತರ ಮೇಲ್ವೀಚಾರಣೆ ಮಾಡಬೇಕು

ನಿಧಾನ ಗತಿಯ ಕೆಲಸಕ್ಕೆ ಸ್ಥಳೀಯ ಹಲವು ಸಮಸ್ಯೆಗಳು ಕಾರಣ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್(CFC) ತಿಳಿಸಿದೆ. ಯೋಜನೆ ಮುಗಿಯುವವರೆಗೆ ಮೇಲ್ವಿಚಾರಕರು ಪೂರ್ಣ ಸಮಯದವರೆಗೆ ಯೋಜನೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಿರುತ್ತದೆ.

Suburban Rail Project Only Have on 35 Month For Completion Work, 4 pc Progress has Achieved

ಅಲ್ಲದೇ ಯೋಜನೆಯ ಸಮರ್ಥ ನಿರ್ವಹಣೆಗೆ ಅಗತ್ಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ನಲ್ಲಿನ ನಿಯೋಜಿತ ತಂಡವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಯೋಜನೆಯ ಕಾರಿಡಾರ್ (C1) ಕಾರ್ಯ ನಡೆಯುತ್ತಿದ್ದು, ಒಟ್ಟು ನಾಲ್ಕು ಕಾರಿಡಾರ್ ಕಾರ್ಯಗಳ ಪೂರ್ಣಕ್ಕೆ ಅಕ್ಟೋಬರ್ 2026 ಕ್ಕೆ ಅಂತಿಮ ಗುರಿ ನೀಡಲಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಲಿ

ರೋಲಿಂಗ್ ಸ್ಟಾಕ್ ಮತ್ತು ಸಿಗ್ನಲಿಂಗ್ ಮತ್ತು ದೂರಸಂಪರ್ಕಕ್ಕಾಗಿ ಟೆಂಡರ್‌ಗಳ ಜೊತೆ ಜೊತೆಗೆ C1, C4 ಮತ್ತು C3 ಗಾಗಿ ಟೆಂಡರ್‌ಗಳನ್ನು ತ್ವರಿತವಾಗಿ ಕೊಟ್ಟರೆ ಯೋಜನೆಗೆ ವೇಗ ನೀಡಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯ ನಿರಂತರ ಪರಿಶೀಲನೆ ಮಾಡಬೇಕು.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಸಂಸದರು, ಶಾಸಕರು ಆಗಿಂದಾಗ್ಗೆ ಮೇಲ್ವಿಚಾರಣೆ, ಅಧಿಕಾರಿಗಳ ಜೊತೆಗೆ ಸಮಾಲೋಚನೆ ಮುಂದಾಗಬೇಕು. ಭವಿಷ್ಯದಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ 4-5ರಷ್ಟು ಆನ್-ಗ್ರೌಂಡ್ ಕೆಲಸವನ್ನು ಖಚಿತಪಡಿಸಿಕೊಳ್ಳಬೇಕು.

ಯೋಜನೆ ವಿಸ್ತರಣೆ ಕಾರ್ಯ ಆರಂಭಿಸಲು ಸಲಹೆ

ಬಿಎಸ್‌ಆರ್‌ಪಿ ಎಲ್ಲ ನಾಲ್ಕು ಕಾರಿಡಾರ್ ತುದಿಗಳನ್ನು ಪಕ್ಕದ ಪಟ್ಟಣಗಳಿಗೆ ವಿಸ್ತರಿಸುವ ಗುರಿ ಇದ್ದು, ಈಗಿನಿಂದಲೇ ಅವರುಗಳ ಕಾರ್ಯರೂಪಕ್ಕೆ ತರಲು ಮುಂದಾಗಬೇಕು.ಅದರ ಜೊತೆಗೆ ಹಾಲಿ ಕಾರಿಡಾರ್ ಒಂದನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು ಎಂದು ಸಿಟಿಜನ್ ಫಾರ್ ಸಿಟಿಜನ್ ಆಗ್ರಹಿಸಿದೆ.

ಎರಡು ತಿಂಗಳಿಗೆ ಒಮ್ಮೆ ಯೋಜನೆ ಪ್ರಗತಿಗೆ ಪರಿಶೀಲಿಸಬೇಕು. ಕೆ-ರೈಡ್‌ ಯೋಜನೆ ಆರಂಭವಾದ ನಂತರ 2190 ದಿನಗಳಲ್ಲಿ ನಿಗದಿತ ಯೋಜನೆ ಮುಗಿಸುವುದಾಗಿ ಘೋಷಿಸಿತ್ತು. ಮುಂದಿನ ದಿನಗಳಲ್ಲಿ ಕೆ-ರೈಡ್ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದೊಳಗೆ ಯೋಜನೆ ಸಾಕಾರಕ್ಕೆ ಒತ್ತಡ ತರಬೇಕು. ಇದರಿಂದ ಯೋಜನೆಗೆ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂಧು ಸಿಟಿಜನ್‌ ಫಾರ್ ಸಿಟಿಜನ್ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+