ಬೆಂಗಳೂರು: ಚಲಿಸುವ ರೈಲಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಸುಂಕದಕಟ್ಟೆಯ ಮಾದೇಶ್ ನಗರದ ನಿವಾಸಿ ಮಹೇಂದ್ರ ಸಿಂಗ್ ಅವರ ಪುತ್ರ ಜಿತೇಂದ್ರ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಲ್ಲೇಶರಂ ಹಳಿ ಮೇಲೆ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ, ಆತನ ಬಳಿಯಿದ್ದ ಗುರುತಿನ ಚೀಟಿ ಮೂಲಕ ಹೆಸರು, ವಿಳಾಸ ಗೊತ್ತಾಗಿದ್ದು, ನಂತರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.[ಮೆಡಿಕಲ್ ಸೀಟು ಭೀತಿ: ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ]
ರಾಜಸ್ಥಾನ ಮೂಲದ ಮಹೇಂದ್ರ ಸಿಂಗ್ ಅವರು ರಾಜಸ್ಥಾನದಲ್ಲೇ ಅವನನ್ನು ಶಾಲೆಗೆ ಸೇರಿಸಿದ್ದರು. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನಲೆಯಲ್ಲಿ ಪುತ್ರನನ್ನು ಬೆಂಗಳೂರಿನ ಶಾಲೆಗೆ ಸೇರಿಸಿದ್ದರು. ಆದರೆ ಈ ವರ್ಷವೂ ಜಿತೇಂದ್ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿದ್ದ.
ಅನುತ್ತೀರ್ಣಗೊಂಡ ಹಿನ್ನಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಜಿತೇಂದ್ರ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications