ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಏನಿತ್ತು?

|
Google Oneindia Kannada News

ಬೆಂಗಳೂರು, ನವೆಂಬರ್ 22: ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಪೀಣ್ಯ ಸಮೀಪದ ಖಾಸಗಿ ಕಾಲೇಜು ವಿದ್ಯಾರ್ಥಿ ಶ್ರೇಯಸ್ ನಂದನ್ ಮೃತ ವಿದ್ಯಾರ್ಥಿ. ಹಾಜರಾತಿ ಕಡಿಮೆ ಇದೆ ಎಂದು ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನೀಡಿರಲಿಲ್ಲ, ಮನೆಯಲ್ಲಿ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಂಕರ್ ಐಎಎಸ್ ಅಕಾಡೆಮಿ ಸ್ಥಾಪಕ ಆತ್ಮಹತ್ಯೆಗೆ ಶರಣು ಶಂಕರ್ ಐಎಎಸ್ ಅಕಾಡೆಮಿ ಸ್ಥಾಪಕ ಆತ್ಮಹತ್ಯೆಗೆ ಶರಣು

ಮೃತ ಶ್ರೇಯಸ್, ತನ್ನ ಪೋಷಕರ ಜೊತೆ ಜೆಬಿ ನಗರದ ನಿವಾಸದಲ್ಲಿ ವಾಸವಾಗಿದ್ದ, ಕೊಠಡಿಯಲ್ಲಿ ದೊರೆತಿರುವ ಡೆತ್ ನೋಟ್ ನಲ್ಲಿ ಆತ್ಮಹತ್ಯೆ ನಿರ್ಧಾರ ಕುರಿತು ಸವಿಸ್ತಾರವಾಗಿ ಬರೆದಿದ್ದಾನೆ. ಆದರೆ ಕಾಲೇಜು ಆಡಳಿತ ಮಂಡಳಿಯ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಇದರಲ್ಲಿ ಅವರ ತಪ್ಪೇನು ಇಲ್ಲ ಎಂದು ಮೃತನ ಪೋಷಕರು ಹೇಳಿಕೆ ನೀಡಿದ್ದಾರೆ.

Student commit suicide who denied for attend examination

ಹೀಗಾಗಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದೂ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಇದಕ್ಕೆ ಹಲವು ಕಾರಣಗಳಿವೆ. ಇದರಿಂದ ನನ್ನ ಹಾಜರಾತಿ ಕಡಿಮೆಯಾಗಿದೆ.

ಬ್ಲೂವ್ಹೇಲ್ ಆತ್ಮಹತ್ಯೆ ಕೂಪಕ್ಕೆ ಕಲಬುರಗಿಯ ಬಾಲಕ ಬಲಿ ಬ್ಲೂವ್ಹೇಲ್ ಆತ್ಮಹತ್ಯೆ ಕೂಪಕ್ಕೆ ಕಲಬುರಗಿಯ ಬಾಲಕ ಬಲಿ

ಬೆಳಗ್ಗೆ 8.30ಕ್ಕೆ ಮೊದಲ ತರಗತಿ ಶುರುವಾಗುತ್ತಿತ್ತು, ಹತ್ತು ನಿಮಿಷ ತಡವಾಗಿ ಹೋದರೆ ಪ್ರಾಧ್ಯಾಪಕರು ತರಗತಿಗೆ ಸೇರಿಸುತ್ತಿರಲಿಲ್ಲ, ಅಕ್ಟೋಬರ್ ತಿಂಗಳಲ್ಲಿ ನಾನು ಆನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದೆ.

ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಈ ವಿಚಾರ ಎಲ್ಲರಿಗೂ ಗೊತ್ತಿತ್ತು, ತರಗತಿ ಹಾಜರಾಗದ ಕಾರಣ ಯೋಜನಾ ವರದಿಗಳನ್ನು ಸಿದ್ಧಪಡಿಸಲು ಸಹಪಾಠಿಗಳ ನೆರವು ಕೇಳಿದ್ದೆ, ಅದಕ್ಕೆ ಯಾರೂ ಸಹಾಯ ಮಾಡಿರಲಿಲ್ಲ, ಓದುವುದು ಕೂಡ ಕಷ್ಟವಾಗಿತ್ತು ಎಂದು ಡೆತ್ ನೋಟ್‌ನಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.

English summary
Frustrated student who was denied for examination by the college authorities has committed suicide in JB Nagar on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X