ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ವ್ಯವಸ್ಥೆ
ಬೆಂಗಳೂರು, ಫೆ. 27: ಇನ್ನು ಮುಂದೆ ವಿದ್ಯಾರ್ಥಿಗಳು ಸಹ ಪೊಲೀಸ್ ಶಿಸ್ತಿನಲ್ಲಿ ಸಂಭ್ರಮಿಸಬಹುದು. ಎನ್‌ಸಿಸಿ ಮಾದರಿಯಲ್ಲಿಯೇ ಬೆಂಗಳೂರು ಪೊಲೀಸರು ಆರಂಭಿಸಿರುವ ಸ್ಪೊಡೆಂಟ್ ಪೊಲೀಸ್ ಕೆಡೆಟ್‌ಗೆ (ಎಸ್‌ಪಿಸಿ) ಮಾ.2ರಂದು ಕಂಠೀರವ ಕ್ರೀಡಾಂಗಣದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ.
ಕೇರಳದಲ್ಲಿ ಯಶಸ್ವಿಯಾಗಿರುವ ಯೋಜನೆಯನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ರಾಜ್ಯದಲ್ಲೂ ಜಾರಿಗೆ ತ್ರ್ಲಾಗುತ್ಪ್ತಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರಿಶೇಖರನ್ ಅವರನ್ನು ಯೋಜನೆಯ ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಅದರಂತೆ ಕೇರಳಕ್ಕೆ ತೆರಳಿ ಅಧ್ಯಯನ ನಡೆಸಿದ ಹರಿಶೇಖರನ್ ವರದಿ ಅನ್ವಯ ಯೋಜನೆ ರೂಪಿಸಲಾಗಿದೆ.[ಬೆಂಗಳೂರಿನಲ್ಲಿ ನೀರಿಗೆ ಎಷ್ಟು ಹಣ ನೀಡುತ್ತೀರಿ?]

ಪ್ರೌಢಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪೊಲೀಸ್ ತರಬೇತಿ ನೀಡುವ ಈ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ 1.8 ಕೋಟಿ ರೂ. ಅನುದಾನ ನೀಡಿತ್ತು. ಅನುದಾನಿತ ಹಾಗೂ ಬಿಬಿಎಂಪಿ ಪ್ರೌಢಶಾಲೆ ಸೇರಿದಂತೆ 35 ಶಾಲೆಗಳ 1,500 ವಿದ್ಯಾರ್ಥಿಗಳನ್ನು ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರನ್ನು ಸಮುದಾಯ ಪೊಲೀಸ್ ಅಧಿಕಾರಿ (ಸಿಪಿಒ) ಹಾಗೂ ಸಹಾಯಕ ಸಮುದಾಯ ಪೊಲೀಸ್ ಅಧಿಕಾರಿಯನ್ನಾಗಿ (ಎಸಿಪಿಒ) ನೇಮಕ ಮಾಡಲಾಗಿದ್ದು ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.
ಆಯ್ಕೆ ಮತ್ತು ತರಬೇತಿ ಹೇಗೆ?
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಂದ ವಿದ್ಯಾರ್ಥೀಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 8 ಮತ್ತು 9ನೇ ತರಗತಿಯ 44 ವಿದ್ಯಾರ್ಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ತೆಗೆದುಕೊಳ್ಳಲಾಗಿದೆ. ಬಳಿಕ 22 ಮಂದಿಯ ಎರಡು ತುಕಡಿಗಳನ್ನಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪೊಲೀಸ್ ಕಾರ್ಯವೈಖರಿ ಬಗ್ಗೆ ಮೊದಲು ತರಬೇತಿ ನೀಡಲಾಗುತ್ತದೆ. ಬಳಿಕ ಸಿಪಿಒ ಮತ್ತು ಎಸಿಪಿಒಗಳು ಮಕ್ಕಳಿಗೆ ಆ ವಿಷಯ ಬೋಧನೆ ಮಾಡುತ್ತಾರೆ. ರಜಾ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಪೊಲಿಸ್ ಠಾಣೆ, ನ್ಯಾಯಾಲಯ, ಬಿಬಿಎಂಪಿ, ಕಂದಾಯ ಇಲಾಖೆಯ ಕಚೇರಿ ಮತ್ತು ಕಾರಾಗೃಹಗಳಿಗೆ ಕರೆದೊಯ್ದು, ಅಲ್ಲಿನ ವ್ಯವಸ್ಥೆ ಹಾಗೂ ಕಾರ್ಯವೈಖರಿ ಬಗ್ಗೆ ಅರಿವು ಮೂಡಿಸುವುದೂ ಯೋಜನೆಯ ಭಾಗವಾಗಿದೆ.












Click it and Unblock the Notifications