ಲಾಲ್‌ಬಾಗ್ ದುಬಾರಿ ಶುಲ್ಕ ನಿಗದಿಗೆ ಪುಷ್ಪ ಪ್ರಿಯರ ಭಾರಿ ವಿರೋಧ
ಬೆಂಗಳೂರು, ಆಗಸ್ಟ್ 1: ಲಾಲ್‌ಬಾಗ್‌ನಲ್ಲಿ ಆ.4ರಿಂದ ಆರಂಭವಾಗಲಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದರಿಂದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
2014ರಿಂದ ಇಲ್ಲಿಯವರೆಗೆ ಒಟ್ಟು 3 ಬಾರಿ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ಇದೀಗ 70 ರೂ. ತಲುಪಿದೆ. ಪ್ರತಿ ಎರಡು ವರ್ಷಗಳಿಗೆ ವಯಸ್ಕರಿಗೆ 10 ರೂ.ನಂತೆ ಏರಿಕೆ ಮಾಡಲಾಗುತ್ತದೆ. ಈ ವರ್ಷ ಜಿಎಸ್‌ಸ್ಟಿ ಶೇ.18ರಷ್ಟು ವಿಧಿಸಿರುವ ಕಾರಣ ಪ್ರವೇಶ ಶುಲ್ಕವನ್ನು ರಜೆ ಇತರೆ ದಿನಗಳಲ್ಲಿ 70 ರೂ. ನಿಗದಿಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನ ಆರು ತಿಂಗಳಿಗೊಮ್ಮೆ 15-20 ಲಕ್ಷ ರೂ. ಗಳಿಸುತ್ತಿದೆ. ಪ್ರದರ್ಶನದ ವೇಳೆ ಟಿಕೆಟ್ ದುಡ್ಡಿನ ಜತೆಗೆ 100 ಕ್ಕೂ ಅಧಿಕ ಮಳಿಗೆಗಳಿಂದ ಲಕ್ಷಾಂತರ ರೂ,ಹಣ ಸಂಗ್ರಹವಾಗುತ್ತದೆ. ಅನೇಕ ಕಡೆಯಿಂದ ಹಣ ಹರಿದುಬರುತ್ತದೆ.

ಕಳೆದ ವರ್ಷ ಆಗಸ್ಟ್‌ನಿಂದಲೇ ಲಲ್ ಬಾಗ್ ಪ್ರವೇಶ ಶುಲ್ಕದ ಜತೆಗೆ ಜಿಎಸ್‌ಸ್ಟಿ ಶುಲ್ಕವೂ ಅನ್ವಯವಾಗಿದೆ. ಆದರೆ ಆಗಸ್ಟ್ ಮತ್ತು ಜನವರಿಯ ಪ್ರದರ್ಶನದ ವೇಳೆ ಜಿಎಸ್‌ಸ್ಟಿ ಪಾವತಿಸದ ಕಾರಣ ತೆರಿಗೆ ಇಲಾಖೆಯಿಂದ ಇದೀಗ ಕೋಟಿ ತೆರಿಗೆ ಹಣ ಪಾವತಿಸುವಂತೆ ಆಯೋಜಕರಿಗೆ ನೋಟಿಸ್ ನೀಡಲಾಗಿದೆ.
2016-17ರ ಜನವರಿ ಮತ್ತು ಆಗಸ್ಟ್ ಪ್ರದರ್ಶನಗಳಲ್ಲಿ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 50 ರೂ. ಹಾಗೂ ರಜಾ ದಿನಗಳಲ್ಲಿ 60 ರೂ. ಇತ್ತು. ಮಕ್ಕಳಿಗೆ 10 ರೂ.ಗಳನ್ನು ನಿಗದಿಪಡಿಸಲಾಗಿತ್ತು.
ಇದೀಗ ಸಾಮಾನ್ಯ ದಿನಗಳಲ್ಲಿ ಒಳಗೊಂಡಂತೆ ಎಲ್ಲಾ ದಿನಗಳಲ್ಲೂ 70 ರೂ. ಹೆಚ್ಚಿಸಲಾಗಿದೆ. ಮಕ್ಕಳಿಗೆ 20 ರೂ. ವಿಧಿಸಲಾಗಿದೆ ಇದೀಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ 10 ರೂ.ಗಳನ್ನು ಏರಿಸಬಹುದಾಗಿತ್ತು, ಕೆಲವು ಪುಷ್ಪ ಪ್ರಿಯರು ಪ್ರತಿ ನಿತ್ಯವೂ ಬರುತ್ತಾರೆ ಈ ಶುಲ್ಕ ಹೊರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications