ಈ ಕೆಲಸ ಮಾಡಿ, ಇಲ್ಲವೇ ದಂಡ ಕಟ್ಟಿ: ವಾಹನ ಮಾಲೀಕರಿಗೆ ಹೊಸ ರೂಲ್ಸ್‌, ಏನದು?

ಸಿಲಿಕಾನ್‌ ಸಿಟಿ ಬೆಂಗಳೂರು ಮಂದಿಗೆ ಟ್ರಾಫಿಕ್‌ ಪೊಲೀಸರು ಹೊಸ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈಗಾಗಲೇ ಟ್ರಾಫಿಕ್‌ನಿಂದ ತುಂಬಿ ತುಳುಕಾಡುತ್ತಿರುವ ಬೆಂಗಳೂರನ್ನು ಹತೋಟಿಗೆ ತರುವ ಉದ್ದೇಶದಿಂದ ಹಲವು ಕ್ರಮಗಳನ್ನು ತೆಗೆಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಪೊಲೀಸರು ವಾಹನ ಮಾಲೀಕರಿಗೆ ಶಾಕ್‌ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಪ್ರಮಾಣದ ದಂಡ ವಸೂಲಿ ನಡೆಯುತ್ತಿದ್ದು, ಇದರೊಂದಿಗೆ ಇನ್ನು ಮುಂದೆ ಮತ್ತೊಂದು ವಿಧಾನದಲ್ಲಿ ದಂಡ ಕಟ್ಟಿಸಿಕೊಳ್ಳಲು ಬೆಂಗಳೂರು ಟ್ರಾಫಿಕ್‌ ಪೊಲೀಸರು ರೆಡಿಯಾಗಿದ್ದಾರೆ. ಈ ಕೆಲಸ ಮಾಡಿ ಇಲ್ಲವೇ ದಂಡ ಕಟ್ಟಿ ಎಂದು ನೇರವಾಗಿ ಎಚ್ಚರಿಕೆಯೂ ನೀಡಿದ್ದಾರೆ.

ಹೌದು, ಬೆಂಗಳೂರು ಎಲ್ಲ ರೀತಿಯಲ್ಲೂ ಬೆಳವಣಿಗೆ ಕಾಣುತ್ತಿದೆ. ಅದೇ ರೀತಿ ಟ್ರಾಫಿಕ್‌ ವಿಚಾರದಲ್ಲೂ ದಿನದಿಂದ ದಿನಕ್ಕೆ ಮುಂದಡಿ ಇಡುತ್ತಿದೆ. ಬೆಂಗಳೂರಿನಲ್ಲಿರುವ ಜನಸಂಖ್ಯೆಗೆ ಸರಿಸಮಾನವಾಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳಲ್ಲಿ ತುಂಬಿ ತುಳುಕುತ್ತಿವೆ. ಈಗಾಗಲೇ ಟ್ರಾಫಿಕ್‌ ನಿಯಮ ಉಲ್ಲಂಘಿಸುತ್ತಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ದಂಡ ವಿಧಿಸುವ ಕೆಲಸ ನಡೆಯುತ್ತಿದೆ. ಈಗ ಪಾರ್ಕಿಂಗ್‌ ವಿಚಾರದಲ್ಲೂ ಪೊಲೀಸರು ಮಾಸ್ಟರ್‌ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್‌ ನಿಯಂತ್ರಿಸುವ ಉದ್ದೇಶದೊಂದಿಗೆ ಟೋಯಿಂಗ್‌ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

strict-towing-resumes-in-bengaluru-fines-for-illegal-parking

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಚಾರ ಪೊಲೀಸರು, ಬೆಂಗಳೂರಿನಲ್ಲಿ 1.4 ಕೋಟಿ ಜನರು, 1.2 ಕೋಟಿ ವಾಹನಗಳಿವೆ ಎಂದಿದ್ದಾರೆ. ಬೆಂಗಳೂರಿನ ರಸ್ತೆಗಳು ತುಂಬಿ ತುಳುಕುತ್ತಿವೆ. ಇದಕ್ಕಾಗಿ ನಾವು ಕಟ್ಟುನಿಟ್ಟಾದ ಅಕ್ರಮ ಪಾರ್ಕಿಂಗ್ ದಂಡವನ್ನು ಜಾರಿಗೆ ತರುತ್ತಿದ್ದೇವೆ. ಜೊತೆಗೆ ನಗರವ್ಯಾಪಿ ಟೋಯಿಂಗ್ ಅನ್ನು ಮತ್ತೆ ಆರಂಭಿಸುತ್ತಿದ್ದೇವೆ. ಇದರಿಂದ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ. ನಿಮ್ಮ ವಾಹನವನ್ನು ಜವಾಬ್ದಾರಿಯಿಂದ ಪಾರ್ಕ್ ಮಾಡಿ, ಇಲ್ಲವೇ ದಂಡ ಪಾವತಿಸಿ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ಬೆಂಗಳೂರಿನಾದ್ಯಂತ ಭಾರಿ ವಿರೋಧ ಕೇಳಿಬಂದಿದ್ದರಿಂದ ವಾಹನಗಳ ಟೋಯಿಂಗ್‌ ನಿಲ್ಲಿಸಲಾಗಿತ್ತು. ಟೋಯಿಂಗ್‌ ಅನ್ನು ದಂಧೆ ರೀತಿ ನಡೆಸುತ್ತಿದ್ದು, ಸುಖಾಸುಮ್ಮನೆ ವಾಹನ ಮಾಲೀಕರ ಜೊತೆ ಕಿರಿಕ್‌, ಗಲಾಟೆಗಳು ಹೆಚ್ಚಾಗಿದ್ದವು. ವಾಹನಗಳನ್ನು ಮನಬಂದಂತೆ ಎತ್ತಾಕೊಂಡು ಹೋಗಿ ಡ್ಯಾಮೇಜ್‌ ಮಾಡುತ್ತಿದ್ದ ಆರೋಪವೂ ಇತ್ತು. ಇದೀಗ ಮತ್ತೆ ವಾಹನಗಳ ಟೋಯಿಂಗ್ ವ್ಯವಸ್ಥೆ ಜಾರಿ ಆಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ. ಆಗಸ್ಟ್ ತಿಂಗಳಿನಿಂದಲೇ ಮತ್ತೆ ಟೋಯಿಂಗ್ ಆರಂಭಿಸುತ್ತೇವೆ, ಈ ಬಾರಿ ಇಲಾಖೆಯಿಂದಲೇ ಟೋಯಿಂಗ್ ನಿರ್ವಹಣೆ ಮಾಡಲಿದ್ದು, ಖಾಸಗಿಯವರಿಗೆ ಗುತ್ತಿಗೆ ಕೊಡುವುದಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.

ರಸ್ತೆಗಳಲ್ಲಿ ಜಗಳ ಆಡಬೇಡಿ

ಇತ್ತೀಚೆಗೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲೇ ವಾಹನ ಮಾಲೀಕರ ನಡುವೆ ಗಲಾಟೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಈ ಬಗ್ಗೆಯೂ ಸಲಹೆ ನೀಡಿದ್ದಾರೆ. ಒಂದು ಸಣ್ಣ ಹಾರ್ನ್‌ನಿಂದ ಅಥವಾ ಪರಸ್ಪರ ದಿಟ್ಟಿಸಿ ನೋಡುವುದರಿಂದ ಆರಂಭವಾಗುತ್ತದೆ. ನಂತರ ಅದು ರಸ್ತೆಯ ಮೇಲಿನ ಜಗಳವಾಗಿ ವಿಕೋಪಕ್ಕೆ ತಿರುಗುತ್ತದೆ. ಒಂದು ಕ್ಷಣ ಶಾಂತವಾಗಿ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ. ರಸ್ತೆಯ ಮೇಲಿನ ಕೋಪವು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+