ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಾಜಕಾಲುವೆ ಕಾಮಗಾರಿ ಸೆಂಟ್ರಿಂಗ್ ಕುಸಿತ, 8 ಕಾರ್ಮಿಕರಿಗೆ ಗಾಯ

|
Google Oneindia Kannada News

ಬೆಂಗಳೂರು, ಮೇ 24: ಬೆಂಗಳೂರಿನ ರಾಜಕಾಲುವೆ ತಡೆಗೋಡಿ ನಿರ್ಮಾಣ ಮತ್ತು ಮೊಲ್ಡಿಂಗ್ ಗೆ ಹಾಕಲಾಗಿದ್ದ ಸೆಂಟ್ರಿಂಗ್ ಕುಸಿದು ಎಂಟು ಜನ ಗಾಯಗೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರ ಸಮೀಪದ ಕಾಳಿದಾಸ ಲೇಔಟ್‌ನಲ್ಲಿ ನಡೆದಿದೆ.

ಕಾಳಿದಾಸ ಬಸ್ ನಿಲ್ದಾಣ ಸಮೀಪದಲ್ಲಿಯ ರಾಜಕಾಲುವೆ ತಡೆಗೋಡೆ ಮತ್ತು ಮೊಲ್ಡಿಂಗ್ ಕಾಮಗಾರಿ ಪ್ರಗತಿಯಲ್ಲಿತ್ತು. ಸಾಕಷ್ಟು ನೀರು ಹರಿಯುವ ರಾಜಕಾಲುವೆಯಾಗಿದ್ದರಿಂದ ಜಾಗೃತಯಿಂದ ಬಿಬಿಎಂಪಿ ಕಾಮಗಾರಿಯನ್ನು ನಡೆಸಬೇಕಿತ್ತು. ಸೆಂಟ್ರಿಂಗ್ ಹಾಕಿ ಕಬ್ಬಿಣವನ್ನು ಕಟ್ಟಿ ಸಿಮೆಂಟ್ ಹಾಕುವ ವೇಳೆಯಲ್ಲಿ ಪೂರ್ತಿಯಾಗಿ ಕುಸಿದಿದ್ದು ಎಂಟು ಜನ ಕಾರ್ಮಿಕರಿಗೆ ಗಾಯವಾಗಿದ್ದು. ಈ ಪೈಕಿ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.

ಕಬ್ಬಿಣದ ಸರಳುಗಳ ನಡುವೆ ಸಿಲಕಿದ ಒರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಾಂಕ್ರಿಟ್ ಕಾಮಗಾರಿ ವೇಳೆಯಲ್ಲಿ ಇದ್ದಕ್ಕಿದ್ದಂತೆ ಸ್ಲಾಬ್ ಕುಸಿದು ಬಿತ್ತು. ತಕ್ಷಣಕ್ಕೆ ಸ್ಥಳೀಯರ ನೆರವಿನಿಂದ ಸರಳಿನ ನಡುವೆ ಸಿಲುಕಿದವರನ್ನು ರಕ್ಷಣೆಯನ್ನು ಮಾಡಲಾಗಿದೆ. ಹಲವರಿಗೆ ತರುಚಿದ ಗಾಯಗಳಾಗಿವೆ. ಮೇಲೆಳಲು ಸಾಧ್ಯವಾಗದ ಕಾರ್ಮಿಕನೊಬ್ಬನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದೇವೆ. ದೇವರ ದಯೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.

Bengaluru: Storm Water Drain Centring Collapse: 8 Workers Injured in Kalidasa Layout

ಕಲ್ಕತ್ತಾ ಮೂಲದ ಖಾಸಿಂ (24) ಸ್ಥಿತಿ ಗಂಭೀರವಾಗಿದ್ದು. ಆಸಿಬುಲ್, ಮತ್ತು ಶಿವಪ್ರಸಾದ್‌ಗೆ ಸಣ್ಣಪುಟ್ಟಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Recommended Video

Virat ಮಾಡಿದ ತಪ್ಪನ್ನು ಡುಪ್ಲೆಸಿಸ್ ಮಾಡಬಾರದು ಎಂದ Virender Sehwag |Oneindia Kannada

English summary
Bbmp storm water drain work progress in kalidasa layout. Eight workers injured in centring collapse, one person is serious know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X