ಬೆಂಗಳೂರಲ್ಲಿ ಮಳೆ: ಎಲ್ಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?
ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರಿನಲ್ಲಿ ಸೆ. 26ರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಎಲ್ಲೆಲ್ಲೂ ನೀರೋ ನೀರು ಎಂಬಂತಾಗಿದೆ. ಏತನ್ಮಧ್ಯೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಸಮಿತಿಯು ಬೆಂಗಳೂರಿನ ವಿವಿಧ ಪ್ರಾಂತ್ಯಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣದ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಮಾಹಿತಿಯಂತೆ, ಆವಲಹಳ್ಳಿಯಲ್ಲಿ 193 ಮಿ.ಮೀ ಮಳೆಯಾಗಿದ್ದು, ಬೆಂಗಳೂರು ಉತ್ತರ ಭಾಗದಲ್ಲಿ 148 ಮಿ.ಮೀ. ಮಳೆ ಬಿದ್ದಿದೆ. ಇನ್ನು, ರಾಜರಾಜೇಶ್ವರಿ ನಗರದಲ್ಲಿ 148 ಮಿ.ಮೀ. ಮಳೆಯಾಗಿದ್ದರೆ, ಬಸವಪುರದಲ್ಲಿ 125 ಮಿ.ಮೀ. ಮಳೆಯಾಗಿದೆ.

ಇನ್ನುಳಿದಂತೆ, ದೊಡ್ಡಬೊಮ್ಮಸಂದ್ರದಲ್ಲಿ 124.5, ಹೆಮ್ಮಿಗೆ ಪುರದಲ್ಲಿ 138.5 ಮಿ.ಮೀ, ಆನೇಕಲ್ ನಲ್ಲಿ 64.5 ಮಿ.ಮೀ, ಕೊನೇನ ಅಗ್ರಹಾರದಲ್ಲಿ 64.5 ಮಿ.ಮೀ., ಮಾರತ್ ಹಳ್ಳಿಯಲ್ಲಿ 64.5 ಮಿ.ಮೀ. ಮಳೆಯಾಗಿದೆ.












Click it and Unblock the Notifications