• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಗಲಭೆ: ಸಿಎಂ, ಡಿಜಿಪಿ ತುರ್ತು ಭೇಟಿ

|

ಬೆಂಗಳೂರು, ಆ. 12: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಾಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್

   R Ashok ರಾತ್ರಿ KG Halli , DJ Halliಗೆ ರಾತ್ರಿ ಹೋದಾಗ ಹೇಗಿತ್ತು ಗೊತ್ತಾ | Oneindia Kannada

   ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಸಿಎಂ ಅಧಿಕೃಕ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಪ್ರವೀಣ್ ಸೂದ್ ಭೇಟಿ ಮಾಡಿದರು.

   ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಘರ್ಷಣೆ: ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

   ಇಡೀ ಪ್ರಕರಣಗ ಬಗ್ಗೆ ಸಂಪೂರ್ಣ ಪ್ರಾಥಮಿಕ ವರದಿಯನ್ನು ಸೂದ್ ಅವರು ಸಿಎಂಗೆ ನೀಡಿದ್ದಾರೆ. ಗಲಭೆ ಸೃಷ್ಟಿಸಿದವರ ಬಂಧನ, ಪ್ರಚೋದನೆ ನೀಡಿದವರ ಹುಡುಕಾಟ, ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮದ ಬಗ್ಗೆ ವರದಿ ನೀಡಿದ್ದಾರೆ. ಇದರೊಂದಿಗೆ ಭದ್ರತೆಗೆ ಸಂಬಂಧಿಸಿದಂತೆ ಗೌಪ್ಯ ವಿಚಾರಗಳನ್ನು ಸಿಎಂ ಅವರಿಗೆ ಡಿಜಿಪಿ ವಿವರಿಸಿದ್ದು ವಿವರಗಳು ಬಹಿರಂಗವಾಗಿಲ್ಲ.

   ಇದೇ ವೇಳೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಸಿಎಂ ಯಡಿಯೂರಪ್ಪ ಕೊಟ್ಟಿದ್ದಾರೆ. ತಕ್ಷಣ ಎಲ್ಲ ತಪ್ಪಿತಸ್ಥರನ್ಬು ಬಂಧಿಸಿ. ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ, ಯಾರೇ ಇದರಲ್ಲಿ ಭಾಗಿಯಾಗಿದ್ದರೂ ಅವರನ್ನು ಕೂಡಲೇ ಬಂಧಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

   ಶಾಸಕರ ನಿವಾಸಕ್ಕೆ ಭದ್ರತೆ ಕೊಡಿ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಭದ್ರತೆ ಒದಗಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ. ಶಾಸಕರು ಹಾಗೂ ಅವರ ಕುಟುಂಭಕ್ಕೆ ಸೂಕ್ತ ಭದ್ರತೆ ಕೊಡಬೇಕು. ಭದ್ರತೆಯಲ್ಲಿ ಯಾವುದೇ ಲೋಪವಾಗಬಾರದು. ದುಷ್ಕರ್ಮಿಗಳು ಯಾರೇ ಆಗಿದ್ದರೂ ಹೆಡೆಮುರಿ ಕಟ್ಟಿ ಎಂದು ಕಠಿಣ ಆದೇಶವನ್ನು ಸಿಎಂ ಡಿಜಿಪಿ ಅವರಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ.

   English summary
   State Director General Of Police (DGP) Praveen Sood met Chief Minister B.S. Yediyurappa and gave full information about KG Halli incident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X