ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ-ಬಿಎಂಟಿಸಿ ಸಂಚಾರಕ್ಕೆ ಕಾಮನ್‌ ಫೇರ್ ಕಾರ್ಡ್ ಜಾರಿಗೆ ಚಿಂತನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಮೆಟ್ರೋ ಹಾಗೂ ಬಿಎಂಟಿಸಿ ನಡುವೆ ಸಂಚರಿಸಲು ಕಾಮನ್‌ಫೇರ್‌ ಕಾರ್ಡ್‌ ಪರಿಚಯಿಸಲು ಚಿಂತಿಸಿದ್ದು, ಉಪಚುನಾವಣೆ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

ಬಿಎಂ‌ಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ನಿತ್ಯ ಮೆಟ್ರೋದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಆರು ಬೋಗಿಯನ್ನು ಹಂತ ಹಂತವಾಗಿ ಮಾಡುವುದರಿಂದ ಈ ಸಂಖ್ಯೆ ದ್ವಿಗುಣವಾಗಲಿದೆ ಎಂದರು.

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ! ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!

ಬಿಎಂಟಿಸಿ ಹಾಗೂ‌ ಮೆಟ್ರೋನಲ್ಲಿ ಸಂಚರಿಸಲು ಒಂದೇ ಕಾರ್ಡ್‌ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.

State govt thinking to introduce common travel card for BMTC and Namma Metro

ಜೊತೆಗೆ, ಬಿಎಂಟಿಸಿ,ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ,ಮೆಟ್ರೋ ಎಲ್ಲ ಮೆಟ್ರೋ ಪಾಲಿಟಿಕ್ ನಿಗಮಗಳ ಸಮನ್ವಯತೆ ಕಾಪಾಡಲು ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಎಂದರು.

ಮೆಟ್ರೋ ನಿಗಮದಿಂದ ತಿಂಗಳಿಗೆ 30 ಕೋಟಿ ಆದಾಯ ಬರುತ್ತಿದ್ದು, 24 ಕೋಟಿ ರೂ. ವೆಚ್ಚವಾಗುತ್ತಿದೆ.‌ ಸೆಕ್ಯೂರಿಟಿ, ಟಿಕೆಟ್‌ ವಿತರಕರು ಸೇರಿದಂತೆ ಅನಗತ್ಯ ಮಾನವಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ, ತಿಂಗಳಿಗೆ ಕನಿಷ್ಠ 5 ಕೋಟಿ ರೂ. ವೆಚ್ಚ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು.

ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು

ಮೆಟ್ರೋ ಎರಡನೇ ಹಂತ 2020 ರವೇಳೆಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಸಂಪೂರ್ಷವಾಗಲಿದೆ. ವೈಟ್‌ಫೀಲ್ಡ್‌, ಆರ್‌ವಿ ರಸ್ತೆ, ಬೊಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ , ನಾಗವಾರ ಮಾರ್ಗ 2023 ಕ್ಕೆ ಮುಗಿಯಲಿದೆ. ಈ ಹಂತಕ್ಕೆ 26,405 ಕೋಟಿ ರು. ವೆಚ್ಚವಾಗಲಿದೆ.‌ಆದರೆ ಪೂರ್ಣಗೊಳ್ಳುವ ಒಳಗಾಗಿ 32 ಸಾವಿರ ಕೋಟಿಗೆ ತಲುಪಬಹುದು ಎಂದರು.

ಏರ್‌ಪೋರ್ಟ್‌ ಮಾರ್ಗದ ಮೆಟ್ರೋ ನಿರ್ಮಾಣದ ವಿಚಾರ ಇನ್ನು 15 ದಿನದೊಳಗೆ ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗಲಿದ್ದೇವೆ ಎಂದು ಮಾಹಿತಿ ನೀಡಿದರು.

English summary
Deputy chief minister Dr.G. Parameshwara has said that the state govt is thinking to introduce common travel card for BMTC and Namma Metro to ease the transportation in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X