ರಾಜ್ಯದಲ್ಲಿ ಸರ್ಕಾರಿ ಕೇಬಲ್ ಸೇವೆ ಆರಂಭಿಸ್ತೇವೆ: ಬೇಗ್
ಮಂಗಳೂರು, ಡಿ. 9: ರಾಜ್ಯ ಸರ್ಕಾರವೇ ಕೇಬಲ್ ಟಿವಿ ಸೇವೆ ಆರಂಭಿಸಲು ಯೋಚಿಸುತ್ತಿದೆ... ಹೀಗೆಂದು ಹೇಳಿದವರು ರಾಜ್ಯದ ವಾರ್ತಾ ಸಚಿವ ಆರ್. ರೋಷನ್ ಬೇಗ್. ಹಿಂದೊಮ್ಮೆ ಈ ಕುರಿತು ಪ್ರಸ್ತಾಪಿಸಿದ್ದ ರೋಷನ್ ಬೇಗ್ ಪುನರುಚ್ಛರಿಸಿದ್ದಾರೆ. [ಅಗ್ಗದ ದರದಲ್ಲಿ ಸರ್ಕಾರದಿಂದ ಕೇಬಲ್ ಸೇವೆ]
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಸಚಿವರು ಈ ವಿಷಯ ತಿಳಿಸಿದರು. ಕೇಬಲ್ ಟಿವಿ ನಿರ್ವಾಹಕರು ಪ್ರತಿ ಮನೆಗಳಿಂದ ಮಾಸಿಕ 400ರಿಂದ 500 ರೂ. ವಸೂಲಿ ಮಾಡುತ್ತಾರೆ. ಗ್ರಾಹಕರು ಇಚ್ಛಿಸದ ಚಾನಲ್‌ಗಳನ್ನೂ ಕೊಡುತ್ತಿದ್ದಾರೆ ಎಂಬ ದೂರು ಬಂದಿದೆ. ಆದ್ದರಿಂದ ಸರ್ಕಾರಿ ಕೇಬಲ್ ಟಿವಿ ಸೇವೆ ಆರಂಭಿಸಲು ಯೋಚಿಸುತ್ತಿದೆ ಎಂದು ತಿಳಿಸಿದರು. [ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಿ]

ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಈಗಾಗಲೇ ಪ್ರತಿ ಮನೆಗೆ ಮಾಸಿಕ 100 ರೂ. ಶುಲ್ಕಕ್ಕೆ ಕೇಬಲ್ ಸೇವೆ ನೀಡುತ್ತಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲು ಯೋಜಿಸಲಾಗಿದೆ ಎಂದು ರೋಶನ್ ಬೇಗ್ ತಿಳಿಸಿದರು. [ಹಲವೆಡೆ ಟಿವಿ9, ನ್ಯೂಸ್ 9 ಪ್ರಸಾರ ಇಲ್ಲ]
ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಆದ್ದರಿಂದ ಶೀಘ್ರ ಕೇಂದ್ರದ ಮಾಹಿತಿ ಮತ್ತು ವಾರ್ತಾ ಪ್ರಸಾರ ಇಲಾಖೆ ಸಚಿವ ರವಿಶಂಕರ ಪ್ರಸಾದ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ರೋಷನ್ ಬೇಗ್ ತಿಳಿಸಿದ್ದಾರೆ.












Click it and Unblock the Notifications