ಅಮಿತ್ ಷಾ ಆಜ್ಞೆಯಂತೆ ಗಲಭೆ ಮಾಡುತ್ತಿರುವ ಬಿಜೆಪಿ: ಡಿಕೆಶಿ

ಬೆಂಗಳೂರು, ಡಿಸೆಂಬರ್ 15: ಬಿಜೆಪಿ ಪಕ್ಷ ಸುಳ್ಳಿನ ಕಂತೆ ಎಂದು ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಮಿತ್ ಷಾ ಆದೇಶದ ಪ್ರಕಾರ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ, ಅವರು ಗಲಭೆ ಮಾಡಲು ಆದೇಶ ನೀಡಿದ್ದಾರೆಂದು ಸ್ವತಃ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿರುವುದನ್ನು ರಾಜ್ಯವೇ ನೋಡಿದೆ ಎಂದರು.

State BJP fallowing orders of Amith shah who told to create riots:DKS

ಅಧಿಕೃತ ಪ್ರತಿಪಕ್ಷ ಮುಖಂಡ ಈಶ್ವರಪ್ಪ ಸುಳ್ಳನ್ನ ಪದೇ ಪದೇ ಹೇಳಿ ಅಂತಾ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಇದೀಗ ಜೈಲ್ ಭರೋ ಅನ್ನೋ ಹೊಸ ನಾಟಕ ಶುರು ಮಾಡಲು ಹೊರಟಿದ್ದಾರೆ. ನಾಲ್ಕೂವರೆ ವರ್ಷ ಸುಮ್ಮನಿದ್ದ ಬಿಜೆಪಿ ಮುಖಂಡರು ಇದೀಗ ಹೋರಾಟ ಶುರು ಮಾಡಿದ್ಯಾಕೆ ? ಎಂದು ಅವರು ಪ್ರಶ್ನಿಸಿದರು.ಗಲಾಟೆ, ಗಲಭೆ, ಕೀಳು ಮಾತುಗಳೇ ಬಿಜೆಪಿ ಸಂಸ್ಕೃತಿ ತೋರಿಸುತ್ತೆ ಎಂದು ಅವರು ಬಿಜೆಪಿ ಮೇಲೆ ಹರಿಹಾಯ್ದರು.

ಅದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಪಕ್ಷದಿಂದ ರಾಜ್ಯದಲ್ಲಿ ಎರಡು ಯಾತ್ರೆ ಮಾಡ್ತಿದ್ದೇವೆ. ಪಕ್ಷದಲ್ಲಿ ಯಾವುದೇ ಆಂತರಿಕ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+