ಬೆಳಗ್ಗೆ ಕೊಲೆ, ಮಧ್ಯಾಹ್ನ ಆರೋಪಿಗಳು ಅರೆಸ್ಟ್

ಬೆಂಗಳೂರು, ಡಿ.17 : ಜಾಲಹಳ್ಳಿಯಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಟೋನಿ ವಿಲ್ಸನ್ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಶವ ಸಿಕ್ಕಿ ಒಂದು ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ. ಕಟ್ಟಡ ಸಾಮಾಗ್ರಿಗಳನ್ನು ಕದಿಯಲು ಹೋದ ಟೋನಿಯನ್ನು ಕಟ್ಟಡದ ಮಾಲೀಕರು ಕೊಲೆ ಮಾಡಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸೆಂಟ್‌ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಟೋನಿ ವಿಲ್ಸನ್ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಓದಿನ ಜೊತೆಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಸಹ ಮಾಡುತ್ತಿದ್ದನು. ಮಂಗಳವಾರ ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ಬೆಳಗ್ಗೆ ಹೊರಟಿದ್ದನು. ಸಂಜೆ ಜಾಲಹಳ್ಳಿ ಬಳಿ ನಿರ್ಮಾಣ ಹಂತದ ಕಟ್ಟಡಕ್ಕೆ ಕದಿಯಲು ಹೋದಾಗ ಅಲ್ಲಿನ ಮಾಲೀಕರು ರಾಡ್‌ನಿಂದ ಹೊಡೆದು ಆತನನ್ನು ಹತ್ಯೆ ಮಾಡಿ, ಶವವನ್ನು ರಸ್ತೆಯಲ್ಲಿ ಎಸೆದಿದ್ದರು.

ಹಿಂದಿನ ಸುದ್ದಿ : ಬೆಂಗಳೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಕೊಲೆ ಮಾಡಿ ಜಾಲಹಳ್ಳಿ ಬಳಿ ರಸ್ತೆಯಲ್ಲಿ ಶವವನ್ನು ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆಯಾದ ವಿದ್ಯಾರ್ಥಿಯನ್ನು ಶಿವಾಜಿನಗರದ ಸೆಂಟ್ ಜೋಸೆಫ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಟೋನಿ ವಿಲ್ಸನ್ (17) ಎಂದು ಗುರುತಿಸಲಾಗಿದೆ. ಜಾಲಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಬುಧವಾರ ಬೆಳಗ್ಗೆ ವಿಲ್ಸನ್ ಶವ ಪತ್ತೆಯಾಗಿದೆ.

Jalahalli

ವಿಲ್ಸನ್ ಶವದ ಮುಖ ಮತ್ತು ಕುತ್ತಿಗೆಯ ಬಳಿ ಗಾಯಗಳಾಗಿದ್ದು, ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಮನೆ ಬಿಟ್ಟು ಹೋದ ವಿಲ್ಸನ್ ವಾಪಸ್‌ ಬಂದಿರಲಿಲ್ಲ. ವಿಲ್ಸನ್ ಗಂಗಮ್ಮನ ಗುಡಿ ಸಮೀಪದ ಸಿದ್ಧಾರ್ಥ ನಗರದಲ್ಲಿ ವಾಸವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+