ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಶ್ರೀನಗರದಿಂದ ಮೇಲುಕೋಟೆಗೆ ನಿತ್ಯ 2 ಉಚಿತ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಬೆಂಗಳೂರಿನಲ್ಲಿರುವ ಶ್ರೀನಗರದಲ್ಲಿ ಮಂಡ್ಯಜಿಲ್ಲೆಯ ಜನರೇ ಅಧಿಕವಾಗಿದ್ದಾರೆ. ಶ್ರೀನಗರ ಸುತ್ತಮುತ್ತಲು ನಾಗಮಂಗಲ, ಮೇಲುಕೋಟೆ ಸುತ್ತಮುತ್ತಲಿಂದ ವಲಸೆ ಬಂದವರು ಮತ್ತು ಕೆಲಸದ ನಿಮಿತ್ತ ಬಂದವರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇದಕ್ಕಾಗಿಯೇ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಶ್ರೀನಗರದಿಂದ ಮೇಲುಕೋಟೆಗೆ ಬಸ್ ಸಂಚಾರವನ್ನು ನಡೆಸುತ್ತಿದೆ. ಇದೀಗ ಮೇಲುಕೋಟೆಗೆ ನಿತ್ಯ ಎರಡು ಬಸ್‌ ಉಚಿತವಾಗಿ ಸಂಚರಿಸಲಿವೆ.

ಅರಮನೆ ಶಂಕರ್ ಸೇವಾ ಪ್ರತಿಷ್ಠಾನ ಮತ್ತು ರಾಜು ಎಂಟರ್‍‌ಪ್ರೈಸಸ್‌ನಿಂದ ಉಚಿತವಾಗಿ ಮೇಲುಕೋಟೆಗೆ ಬಸ್‌ ಸೇವೆಯನ್ನು ಆರಂಭಿಸಲಾಗಿದೆ. ಬೆಳಗ್ಗೆ ಶ್ರೀನಗರದಿಂದ ಹೊರಡುವ ಎರಡು ಬಸ್‌ ಮೇಲುಕೋಟೆಯನ್ನು ತಲುಪಲಿದೆ. ಮೇಲುಕೋಟೆಯಿಂದ ಸಂಜೆ ಹೊರಡುವ ಬಸ್ ರಾತ್ರಿ ಶ್ರೀನಗರಕ್ಕೆ ವಾಪಸ್‌ ಬರಲಿದೆ. ಈ ಬಸ್‌ಗಳಲ್ಲಿನ ಪ್ರಯಾಣ ಸಂಪೂರ್ಣ ಉಚಿತವಾಗಿ ಜನರಿಗೆ ಲಭ್ಯವಾಗಲಿದೆ.

ಮೇಲುಕೋಟೆ ದೇವಾಲಯ; ಸಲಾಂ ಆರತಿ ಹೆಸರು ಬದಲು!ಮೇಲುಕೋಟೆ ದೇವಾಲಯ; ಸಲಾಂ ಆರತಿ ಹೆಸರು ಬದಲು!

ಬೆಂಗಳೂರಿನ ಶ್ರೀನಗರದಿಂದ ಉಚಿತ ಬಸ್‌ ಸೇವೆಯನ್ನು ಒದಗಿಸಲು ಮುಖ್ಯ ಉದ್ದೇಶ ಜನಸೇವೆಯನ್ನು ಮಾಡುವುದಾಗಿದೆ. ಮೇಲುಕೋಟೆಯ ಚಲುವನಾರಾಯಣ ಸ್ವಾಮಿಯ ಸನ್ನಿಧಿಗೆ ಸೇವೆಯನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಜನರಿಗೆ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರ ಖರ್ಚು ವೆಚ್ಚವನ್ನು ಅರಮನೆ ಶಂಕರ್ ಸೇವಾ ಪ್ರತಿಷ್ಠಾನ ಮತ್ತು ರಾಜು ಎಂಟರ್‍‌ ಪ್ರೈಸಸ್ ನಿಭಾಯಿಸಲಿದೆ.

 ಮೇಲುಕೋಟೆಗೆ ಉಚಿತ ಬಸ್‌ ಸೇವೆ

ಮೇಲುಕೋಟೆಗೆ ಉಚಿತ ಬಸ್‌ ಸೇವೆ

ಮೇಲುಕೋಟೆಗೆ ಉಚಿತ ಬಸ್‌ ಸೇವೆ ಆರಂಭವಾಗಿದೆ. ಶ್ರೀನಗರದಿಂದ ಪ್ರತಿದಿನ ಬೆಳಗ್ಗೆ 7 ಘಂಟೆಗೆ ಹೊರಡುವ ಉಚಿತ ಬಸ್ ಬೆಳ್ಳೂರು ಕ್ರಾಸ್ , ನಾಗಮಂಗಲದ ಮಾರ್ಗವಾಗಿ ಮೇಲುಕೋಟೆಗೆ ಹೋಗಲಿದೆ. ಬೆಳಗ್ಗೆ 7 ಕ್ಕೆ ಹೊರಡುವ ಬಸ್‌ ಮೇಲುಕೋಟೆಗೆ ತಲುಪಿದ ಬಳಿಕ ಜನರು ಮೇಲುಕೋಟೆಯ ಶ್ರೀ ಚಲುವನಾರಾಯಣ ಮತ್ತು ಯೋಗನರಸಿಂಹ ಸ್ವಾಮಿ ದರ್ಶನವನ್ನು ಪಡೆದು ಮಧ್ಯಾಹ್ನ 3 ಗಂಟೆಗೆ ವಾಪಸ್ ಆದರೆ ಅದೇ ಬಸ್ ಪುನಃ ಜನರನ್ನು ವಾಪಸ್‌ ಬೆಂಗಳೂರಿನ ಶ್ರೀನಗರಕ್ಕೆ ಕರೆದುಕೊಂಡು ಬರಲಿದೆ.

 ಮೇಲುಕೋಟೆಯಿಂದ ಎಷ್ಟುಗಂಟೆ ವಾಪಸ್‌

ಮೇಲುಕೋಟೆಯಿಂದ ಎಷ್ಟುಗಂಟೆ ವಾಪಸ್‌

ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಮೇಲುಕೋಟೆಗೆ ಹೊರಡುವ ಮತ್ತೊಂದು ಬಸ್ ರಾಮನಗರ, ಮಂಡ್ಯ, ಶಿವಳ್ಳಿ, ಜಕ್ಕನಹಳ್ಳಿ, ಮಾರ್ಗವಾಗಿ ಮೇಲುಕೋಟೆಯನ್ನು ತಲುಪಲಿದೆ. ಸುಮಾರು 12 ಗಂಟೆಗೆ ಮೇಲುಕೋಟೆಯನ್ನು ತಲುಪಲಿರುವ ಬಸ್‌ ಮತ್ತೆ 4 ಗಂಟೆಗೆ ವಾಪಸ್‌ ಹೊರಡಲಿದ್ದು ರಾತ್ರಿ 8 ರಿಂದ 9 ಗಂಟೆಗಳೊಳಗೆ ಬೆಂಗಳೂರಿಗೆ ವಾಪಸ್‌ ಆಗಲಿದೆ.

 ಮೇಲುಕೋಟೆ ಪ್ರವಾಸಿ ತಾಣ

ಮೇಲುಕೋಟೆ ಪ್ರವಾಸಿ ತಾಣ

ಬೆಂಗಳೂರಿನ ಶ್ರೀನಗರದಿಂದ ಮೇಲುಕೋಟೆಗೆ ಹೋಗುವ ಜನರು ಒನ್‌ ಡೇ ಟ್ರಿಪ್ ಅನುಭವವನ್ನು ಪಡೆಯಬಹುದು. ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿ, ಯೋಗನರಸ್ವಾಮಿ ದೇವಸ್ಥಾನ, ಗಣೇಶ ಕಟ್ಟೆ, ಅಕ್ಕತಂಗಿ ಕೋಳ, ರಾಯಗೋಪುರ, ಧನುಷ್ಕೋಟಿ, (ರಾಮ ಬಾಣ ಬಿಟ್ಟಿರುವುದು) ಸ್ಥಳಗಳನ್ನು ನೋಡಬಹುದಾಗಿದೆ. ಸಮಯ ಸಿಕ್ಕರೆ ವಿಸ್ತಾರವಾದ ತೊಣ್ಣೂರು ಕೆರೆಯನ್ನು ವೀಕ್ಷಿಸಬಹುದಾಗಿದೆ.

 ಜನರಿಗೆ ಅನುಕೂಲವಾಗುವ ಬಸ್ ಸೇವೆ

ಜನರಿಗೆ ಅನುಕೂಲವಾಗುವ ಬಸ್ ಸೇವೆ

ಮೇಲುಕೋಟೆಗೆ ಲಕ್ಷಾಂತರ ಜನ ಬರುತ್ತಾರೆ. ಇನ್ನು ದೇಶದ ವಿವಿಧ ಬಾಗಗಳಿಂದಲು ಮೇಲುಕೋಟೆ ಚಲುವನಾರಾಯಣನ ದರ್ಶನವನ್ನು ಪಡೆಯಲು ಬರುತ್ತಾರೆ. ಇನ್ನು ಶ್ರೀನಗರದ ಸುತ್ತಲು ಹೆಚ್ಚಾಗಿ ನಾಗಮಂಗಲ ಮತ್ತು ಮೇಲುಕೋಟೆಯ ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರು ವಲಸೆ ಬಂದು ನೆಲೆಸಿದ್ದಾರೆ. ಅದೆಷ್ಟೋ ಜನರು ಬಾಡಿಗೆ ಮನೆಯನ್ನು ಪಡೆದುಕೊಂಡು ಜೀವನವನ್ನು ನಡೆಸುತ್ತಿದ್ದಾರೆ. "ಉಚಿತ ಬಸ್ ಸೇವೆಯನ್ನು ಒದಗಿಸಿರುವುದು ನಮಗೆ ಬಹಳ ಹರ್ಷವನ್ನು ತಂದಿದೆ ನಾವು ಮೇಲುಕೋಟೆಗೆ ಹೋಗಿ ಬರಲು ಅನುಕೂಲವಾಗಲಿದೆ" ಎಂದು ಮೇಲುಕೋಟೆ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿರುವ ಯೋಗೇಶ್ ಎಂಬುವವರು ಸತಸ ವ್ಯಕ್ತಪಡಿಸಿದ್ದಾರೆ.

English summary
A free bus service to Melukote has been started by Palace Shankar Seva Pratishthana and Raju Enterprises. Two buses leaving Srinagar will reach Melukote in the morning. The bus leaving Melukote in the evening will return to Srinagar at night. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X