ಅಂದೇ ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದರು ಸ್ವಾಮಿಜಿ: ಎಲ್ಲವೂ ಇವರು ಹೇಳಿದಂತೆ ಆಗುತ್ತಿದೆ

ದರ್ಶನ್‌ ಅವರ ಒಂದು ವಿಡಿಯೋ ಈಗ ಸಖತ್‌ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ದರ್ಶನ್‌, ತಾನು 2011ರಲ್ಲಿ ಇದ್ದ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ವೇಳೆ ನಟ ಅಲ್ಲಿ ಕೊಲೆ ಗಾರರನ್ನು ಸಹ ಮಾತನಾಡಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಕೊಲೆ ಮಾಡಿದ ಮೇಲೆ ಅಪರಾಧಿಗಳು ಪಶ್ಚಾತಾಪ ಪಡುತ್ತಾರೆ. ಕೃತ್ಯ ಎಸೆಗುವ ಮುನ್ನ ಆ ಒಂದು ಕ್ಷಣ ಯೋಚನೆ ಮಾಡಿದ್ದರೆ ಎಂಬ ಕಲ್ಪನೆ ಆ ಮೇಲೆ ಬಹುವಾಗಿ ಕಾಡುತ್ತದೆ ಎಂದು ದರ್ಶನ್‌ ಹೇಳಿದ್ದರು. ಈ ಮೇಲಿನ ಸಾಲುಗಳು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ, ತಮ್ಮ ಅನುಭವವನ್ನು ಒಮ್ಮೆ ನೆನಪಿಸಿಕೊಂಡಿದ್ದರೂ ಸಾಕಿತ್ತು. ಇಂದು ಈ ಸ್ಥಿತಿ ಬರ್ತಾ ಇರಲಿಲ್ಲ.

Sri Siddhalinga Shivacharya Swamiji s Prediction About Kannada Star Darshan Comes True

ಮನುಷ್ಯರಿಗೆ ದೇವರು ಎರಡು ಕಿವಿಗಳನ್ನು ಕೊಟ್ಟಿದ್ದಾನೆ. ಯಾರಾದರೂ ಏನಾದರೂ ಹೇಳಿದರೆ ಕೇಳಿಸಿಕೊಳ್ಳಲು. ಆದರೆ, ಹೇಳಿದನ್ನು ಕೇಳಿ, ತನಗೆ ಅನುಕೂಲವಾಗುವುದಿದ್ದರೆ ಮಾತ್ರ ತೆಗೆದುಕೊಂಡು, ಬೇಡವಾಗಿದ್ದನ್ನು ಇನ್ನೊಂದು ಕಿವಿಯಿಂದ ಬಿಟ್ಟು ಬಿಡುವ ಬುದ್ಧಿಯನ್ನು ಕೊಟ್ಟಿದ್ದಾನೆ. ಆದರೆ ದರ್ಶನ್‌ ಹೀಗೆ ಮಾಡಲಿಲ್ಲ. ತಮ್ಮ ಹಿಂಬಾಲಕರು ಹೇಳುವುದನ್ನು ಸರಿ ಎಂದು ತಿಳಿದು ಮುಂದೆ ಸಾಗುತ್ತಿದ್ದರು. ಸಜ್ಜನರ ಸಂಗ ಹೆಜ್ಜೆನು ಸವಿದಂತೆ ಎಂಬ ಸುಭಾಷಿತ ದರ್ಶನ್‌ಗೆ ತಡವಾಗಿಯೂ ಅರ್ಥವಾಗಲಿಲ್ಲ. ಅವರು ಕೇಳಿದ್ದರೆ ಇಂದು ಇವರಿಗೆ ಈ ಪರಿಸ್ಥಿತಿ ಬರುತ್ತಾ ಇರಲಿಲ್ಲ.

ದರ್ಶನ್‌ ಬಗ್ಗೆ ಶ್ರೀ ಭಷಿಷ್ಯ

ದರ್ಶನ್‌ ಒಬ್ಬ ಸೆಲೆಬ್ರಿಟಿ. ಅವರ ಬಗ್ಗೆ ಹಲವರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹೇಳುತ್ತಾರೆ. ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದರು. ಈಗ ದರ್ಶನ್‌ ಪ್ರಕರಣ ನೋಡಿದರೆ, ಎಲ್ಲವೂ ಸರಿ ಹೊಂದುವಂತೆ ಕಾಣುತ್ತಿದೆ. ಈ ಸವಂತ್ಸರ ವಿಶೇಷತೆಯನ್ನು ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಹೇಳಿದ್ದರು. ಇನ್ನು ಇದೇ ವೇಳೆ ನಟ ದರ್ಶನ್‌ ಅವರಿಗೆ ಹೆಚ್ಚು ಅನಾಹುತಗಳು ಕಾದಿವೆ ಎಂದು ತಿಳಿಸಿದ್ದರು.

ಶ್ರೀಗಳು ಹೇಳಿದ್ದೇನು?

ದರ್ಶನ್‌ ಒಬ್ಬ ಪ್ರತಿಭಾನ್ವಿತ ನಟ. ಅವರ ಪ್ರಖ್ಯಾತಿ, ಅವರು ಸಂಪಾದಿಸಿರುವ ಅಭಿಮಾನಿಗಳ ಬಗ್ಗೆ ನಮಗೆಲ್ಲಾ ಮೆಚ್ಚುಗೆ ಇದೆ. ಆದರೆ ಈ ವರ್ಷ ದರ್ಶನ್‌ ಅವರಿಗೆ ಆಪತ್ತು ಕಾದಿದೆ. ಶತ್ರುಗಳ ತೊಂದರೆಯನ್ನು ಅನುಭವಿಸಲಿದ್ದಾರೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು. ದರ್ಶನ್‌ ವಿಚಾರವಾಗಿ ಮುಂದುವರೆದ ಮಾತನಾಡಿದ ಸ್ವಾಮಿಗಳು, ಮಾನಸಿಕ ಕಿರುಕುಳ ಅನುಭವಿಸುತ್ತಾರೆ. ಅನಾರೋಗ್ಯ ಪೀಡಿತರಾಗುತ್ತಾರೆ. ಮಾನ ಮೂರು ಕಾಸಿಗೆ ಹರಾಜಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆಯ ಸಂದೇಶವನ್ನು ನುಡಿದಿದ್ದರು.

Sri Siddhalinga Shivacharya Swamiji s Prediction About Kannada Star Darshan Comes True

ದರ್ಶನ್‌ ನಮ್ಮ ನಿಮ್ಮ ಮಾತುಗಳನ್ನು ಕೇಳುವುದನ್ನು ಬಿಡಿ, ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ ಈ ರೀತಿ ಕಷ್ಟದಿಂದ ಬಚಾವ್‌ ಆಗಬಹುದಿತ್ತು.

ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾರೆ. ಅವರ ಕಸ್ಟಡಿಯ ಅವಧಿ ಇಂದು (ಜೂನ್ 20) ಕೊನೆಗೊಳ್ಳಲಿದೆ. ದರ್ಶನ್‌, ಪ್ರೇಯಸಿ ಪವಿತ್ರಾ ಗೌಡರಿಗೆ ಅಸಭ್ಯ ಮೆಸೇಜ್‌ ಕಳುಹಿಸಿದ್ದ ರೇಣುಕಾಸ್ವಾಮಿ ಅವರನ್ನು, ಅಭಿಮಾನಿಗಳ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅಲ್ಲದೆ ಪಟ್ಟಣಗೆರೆ ಶೆಡ್ಡನಲ್ಲಿ ಚಿತ್ರ ವಿಚಿತ್ರ ಹಿಂಸೆಯನ್ನು ನೀಡಿ ಕೊಲೆ ಮಾಡಿ, ಶವವನ್ನು ಸಮನಹಳ್ಳಿ ಮೋರಿಗೆ ಬೀಸಾಡಿದ್ದರು.

ಪಕ್ಕದ ಅಪಾರ್ಟಮೆಂಟ್‌ ವಾಚಮನ್‌ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸುವ ಮುನ್ನವೇ ಮೂವರು ಆರೋಪಿಗಳು ತಾವೆ ಕೊಲೆ ಮಾಡಿದ್ದಾಗಿ ಸರೆಂಡರ್‌ ಆಗಿದ್ದಾರೆ. ತನಿಖೆ ನಡೆಸುವ ವೇಳೆ ಸತ್ಯ ಬಯಲಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+