ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿದೆ ಹಸಿರು ಮೆಟ್ರೋ!

ಬೆಂಗಳೂರು, ಏಪ್ರಿಲ್ 05: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಅದರಲ್ಲೂ ನೇರಳೆ ಮಾರ್ಗ ಅಂದರೆ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯಲ್ಲಿ ಪ್ರಯಾಣಿಕರ ಸಂಖ್ಯೆ ಅತಿಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಹಾಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ನೇರಳೆ ಮಾರ್ಗದಲ್ಲಿ ಹಸಿರು ರೈಲುಗಳ ಆಗಮನವಾಗಿದೆ. ಬೆಳಗ್ಗೆ 8.30ರಿಂದ 10.30 ಹಾಗೂ ಸಂಜೆ 4ರಿಂದ 8ಗಂಟೆಯ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಪೀಕ್ ಅವಧಿಯಲ್ಲಿ ಕಚೇರಿಗೆ ತೆರಳುವವರ ಸಂಖ್ಯೆ ಹೆಚ್ಚಿರುವುದರಿಂದ ರೈಲುಗಳು ಜನರಿಂದ ತುಂಬಿ ಹೋಗುತ್ತಿದೆ.

ಲಭ್ಯವಿರುವ 50 ರೈಲುಗಳಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ(ನೇರಳೆ) ಮಾರ್ಗದಲ್ಲಿ 18 ಹಾಗೂ ನಾಗಸಂದ್ರ-ಯಲಚೇನಹಳ್ಳಿ (ಹಸಿರು) ಮಾರ್ಗದಲ್ಲಿ 11 ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಆದರೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಹೆಚ್ಚು ಪ್ರಯಾಣಿಕರಿರುವುದರಿಂದ ಹಸಿರು ಮಾರ್ಗದಲ್ಲಿ ಚಲಿಸುವ ರೈಲುಗಳನ್ನು ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆಗೊಳಿಸಲಾಗುತ್ತಿದೆ.

Spotted: Flash on green on purple line

ಪ್ರತಿ ದಿನ ಎರಡರಿಂದ ಮೂರು ರೈಲುಗಳನ್ನು ನೇರಳೆ ಮಾರ್ಗದಲ್ಲಿ ಚಲಾಯಿಸಲಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ರಷ್ ಕಡಿಮೆಯಾಗಿದೆ. 50 ರೈಲುಗಳ ಪೈಕಿ ಒಂದು ರೈಲನ್ನು ಹೊಸ ಮೂರು ಬೋಗಿಗೆ ಜೋಡಿಸಿ ಆರು ಬೋಗಗಳನ್ನಾಗಿ ಪರಿವರ್ತಿಸಲಾಗಿದೆ. ಈ ರೈಲು ಬೈಯಪ್ಪನಹಳ್ಳಿ ಡಿಪೊದಲ್ಲಿ ಪರೀಕ್ಷಾರ್ಥ ಸಂಚಾರದಲ್ಲಿದೆ.

ಒಂದು ಬೋಗಿಯಲ್ಲಿ 975ಮಂದಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು ಎಂಬ ನಿಯಮವಿದೆ. ಆದರೆ ಪೀಕ್ ಅವಧಿಯಲ್ಲಿ ಒಂದು ಬೋಗಿಯಲ್ಲಿ ಸರಾಸರಿ ಒಂದು ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ದಟ್ಟಣೆಯಿಂದಾಗಿ ಅನೇಕರು ಪ್ಲಾಟ್‌ಫಾರಂ ಗೆ ಬಂದರೂ ರೈಲು ಹತ್ತಲಾಗದೆ ಮತ್ತೊಂದು ರೈಲಿಗೆ ಕಾಯಬೇಕಾಗಿದೆ. ಆರು ಬೋಗಿಗಳ ಜೋಡಣೆ ನಂತರ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುವ ನಿರೀಕ್ಚೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+