• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬೆಂಗಳೂರಲ್ಲಿ ಶೀಘ್ರ ಸೈಬರ್‌ಕ್ರೈಂ ತಡೆಗೆ ತರಬೇತಿ ಕೇಂದ್ರ ಆರಂಭ'

|

ಬೆಂಗಳೂರು, ನವೆಂಬರ್ 17: ಸೈಬರ್ ಪ್ರಕರಣಗಳಿಗೆ ಮಟ್ಟ ಹಾಕಲು ಬೆಂಗಳೂರಲ್ಲಿ ಹೊಸ ವಿಶೇಷ ಸೈಬರ್ ಠಾಣೆಗಳು ಶೀಘ್ರ ಆರಂಭಗೊಳಿಸಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿವೆ ಇದನ್ನು ನಿಯಂತ್ರಿಸಲು ಕೇವಲ ಒಂದು ಠಾಣೆಯಿಂದ ಸಾಧ್ಯವಾಗುತ್ತಿರಲಿಲ್ಲ. ಇದೀಗ ಹೊಸ ಎಂಟು ಠಾಣೆಗಳು ಆರಂಭವಾಗಲಿದ್ದು ಶೀಘ್ರವೇ ದೂರು ಆಧರಿಸಿ ಪ್ರಕರಣದ ಪತ್ತೆಗೆ ಮುಂದಾಗಲಿದ್ದಾರೆ.

ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ

ಈ ಕುರಿತು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಮಾಹಿತಿ ನೀಡಿದ್ದು ಇನ್ಫೋಸಿಸ್ ಸಹಾಯದಿಂದ 22 ಕೋಟಿ ವೆಚ್ಚದಲ್ಲಿ ಸೈಬರ್ ಕ್ರೈಂ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಗೃಹ ಯೋಜನೆ ಅಡಿ 11 ಸಾವಿರ ಕಟ್ಟಡ ನಿರ್ಮಿಸಿ ಅನೇಕ ಕಡೆಗಳಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಅದೇ ರೀತಿ ಇನಷ್ಟು‌ ಮನೆಗಳನ್ನು ನಿರ್ಮಿಸಲಾಗುತ್ತಿದೆ. 1 ಲಕ್ಷ 6 ಸಾವಿರ ಸಿಬ್ಬಂದಿಗೆ ಮನೆ ನೀಡುವ ಚಿಂತನೆ ನಡೆಸಲಾಗಿದೆ ಎಂದರು.

ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್

ಕಳೆದ ವರ್ಷ 23 ಸಾವಿರ ಸಿಬ್ಬಂದಿಯನ್ನು ನೇಮಿಸಿದ್ದು, ಈ ವರ್ಷ ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಿದ್ದೇವೆ. ಮುಂದಿನ ಐದು ವರ್ಷದಲ್ಲಿ 20 ಸಾವಿರಕ್ಕೂ ಅಧಿಕ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ ಎಂದರು ಹೇಳಿದರು.

ಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿ

ಸೈಬರ್, ಆರ್ಥಿಕ ವಂಚನೆಗಳ ಹಾಗೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿದೆ. ದಿನನಿತ್ಯ ಠಾಣೆಯಲ್ಲಿ ನೂರಾರು ದೂರುಗಳು ದಾಖಲಾಗುತ್ತಿವೆ. 10ರಿಂದ 30 ಎಫ್‌ಐಆರ್ ದಾಖಲಾಗುತ್ತಿದೆ ಈ ಅಪರಾಧ ನಿಯಂತ್ರಣಕ್ಕಾಗಿ ಹೊಸ ಠಾಣೆಗಳನ್ನು ತೆರೆಯಲು ಮನವಿ ಮಾಡಲಾಗಿದೆ.

English summary
State government will start special cyber police station In Bengaluru help of Infosys foundation, to control cyber frauds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X