• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

|
   ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್ | Oneindia Kannada

   ಬೆಂಗಳೂರು, ಜುಲೈ 29: ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಕೆಆರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

   ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಬಿಎಸ್‌ವೈ ವಿಶ್ವಾಸಮತ ಹಾಗೂ ಹಣಕಾಸು ವಿಧೇಯಕ, ಪೂರಕ ಬಿಜೆಟ್ ಅಂಗೀಕಾರ ಮಾಡಿದ ಬಳಿಕ ವಿಧಾಯದ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

   LIVE: ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

   14 ತಿಂಗಳ ಕಾಲ ಸರ್ವಾನುಮತದಿಂದ ಆಯ್ಕ ಯಾಗಿ ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದ್ದೇನೆ, ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಿದ್ದೇನೆ.

   ಸೋನಿಯಾಗಾಂಧಿ..ರಾಹುಲ್ ಗಾಂಧಿ ಸೂಚನೆಯಂತೆ ಸ್ಪೀಕರ್ ಸ್ಥಾನ ಅಲಂಕರಿಸಿದ್ದೆ, ಇಡೀ ಸದನ ಸರ್ವಾನುಮತದಿಂದ ಆರಿಸಿತ್ತು. 14 ತಿಂಗಳಲ್ಲಿ ಸಿಬ್ಬಂದಿ.. ಅಧಿಕಾರಿಗಳು ಸಹಕರಿಸಿದ್ದಾರೆ, ಕೋಪದಿಂದ ಮಾತನಾಡಿದ್ರೆ ತಪ್ಪು ತಿಳಿಯಬೇಡಿ ಎಂದು ಭಾವುಕ ನುಡಿಗಳನ್ನಾಡಿದರು.

   ಈ ದೇಶದ ಭ್ರಷ್ಟಾಚಾರದ ಮೂಲ ಚುನಾವಣೆ ವ್ಯವಸ್ಥೆ, ಅದನ್ನು ಸರಿ ಮಾಡದೆ ಭ್ರಷ್ಟಾಚಾರದ ಮಾತನಾಡಿದರೆ ಅದು ಕಾಟಾಚಾರವಾಗುತ್ತದೆ, ಬದ್ಧತೆಯ ಮಾತು ಆಗುವುದಿಲ್ಲ, ಶ್ರೀಸಾಮಾನ್ಯ ಚುನಾವಣೆಯಲ್ಲಿ ಭಾಗವಹಿಸುವಂತಾಗಬೇಕು ಅದಕ್ಕಾಗಿ ಎಲೆಕ್ಟ್ರೋರಲ್ ರಿಫಾರ್ಮ್ಸ್ ಆಗಬೇಕು ಎಂದು ಕಿವಿಮಾತು ಹೇಳಿದರು.

   ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್

   ಈಗ ನನ್ನ ಬಳಿ 380 ಕೋಟಿ ರೂ ಆಸ್ತಿ ಇದೆ ಎಂದರೆ ಅದು ಹೇಗೆ ಬಂತು ಎಂದು ಪ್ರಶ್ನೆ ಮಾಡಬೇಕು, ಮುಂದಿನ ವರ್ಷ ಅದು 900 ಕೋಟಿಗೂ ಅಧಿಕ ತಲುಪಬಹುದು, ಓ ಅವರ ಆಸ್ತಿ ಅಷ್ಟಿದೆಯೇ ಎಂದು ಕೇಳುವ ಬದಲು ತನಿಖೆ ನಡೆಸಬೇಕು. ಯಾರ ಬಳಿ ಎಷ್ಟು ಆಸ್ತಿ ಇದೆ ಎನ್ನುವ ತಣಿಕೆ ತಕ್ಷಣವೇ ನಡೆಸಬೇಕು. ಕೆಲಸಕ್ಕೆ ಬಾರದಂತಹ ಪ್ರಾವಿಡೆಂಟ್ಸ್ ಇಡಬಾರದು, ತಕ್ಷಣ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.

   ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಅಂದಿನ ವಿಪಕ್ಷಗಳು, ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ಪಕ್ಷಗಳು ವೈಯಕ್ತಿಕ, ಕೌಟುಂಬಿಕ ಒಡೆತನಕ್ಕೆ ಬಿದ್ದು ಪಕ್ಷಗಳ ಸಾಂಸ್ಥಿಕತೆಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು, 10 ನೇ ಪರಿಚ್ಛೇದವನ್ನು ರೀ ಲುಕ್ ಮಾಡುವ ಕುರಿತು ನಾವು ಒತ್ತಡ ಹೇರಬೇಕಿದೆ ಎಂದರು.

   ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಸೋಮವಾರದ ಸದನದಲ್ಲಿ ನಿಮಗೆ ಅಚ್ಚರಿ ಕಾದಿದೆ , ಏನೋ ಹೇಳಬೇಕು ಎಂದುಕೊಂಡಿದ್ದೇನೆ ಎಂಬುದನ್ನು ಸದನದಲ್ಲೇ ಹೇಳುತ್ತೇನೆ, ನನ್ನ ನಾಲ್ಕು ದಶಕದ ರಾಜಕೀಯ ಜೀವನದ ಅಂತಿಮ ಘಟ್ಟಕ್ಕೆ ಬಂದಿದ್ದೇನೆ ಸದನವನ್ನು ಯಾರೂ ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

   ಕಳೆದ ಗುರುವಾರದ ಸುದ್ದಿಗೋಷ್ಠಿಯಲ್ಲೂ ಸ್ಪೀಕರ್ ಸ್ಥಾನದಿಂದ ನಿರ್ಗಮಿಸುವ ಬಗ್ಗೆ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದ ಅವರು , ಹೊಸ ಸರ್ಕಾರ ರಚನೆಯಾದ ಬಳಿಕವೂ ನನ್ನ ಮೇಲೆ ಅವರಿಗೆ ವಿಶ್ವಾಸ ಇಲ್ಲದಿದ್ದರೆ ಸ್ಪೀಕರ್ ಬದಲಾವಣೆಗೆ ಅವಿಶ್ವಾಸಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಆದರೆ ಗೌರವದಿಂದ ಬದುಕುವ ನಾನು ಅಲ್ಲಿಯವರೆಗೂ ಕಾಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು ಈಗ ಅವರ ರಾಜೀನಾಮೆ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.

   English summary
   Karnataka Assembly Speaker KR Ramesh Kumar resigned. He announced his resignation as Karnataka Assembly Speaker soon after BS Yediyurappa government won floor test in the house.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X