ಸ್ಪೀಕರ್ ರಮೇಶ್‌ ಕುಮಾರ್ ವಿರುದ್ಧ ಗುಡುಗಿದ ಶೋಭಾ

ಬೆಂಗಳೂರು, ಜುಲೈ 15: ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಸ್ಪೀಕರ್ ರಮೇಶ್ ಕುಮಾರ್ ವರ್ತಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್‌ನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಶಾಸಕರು ರಾಜೀನಾಮೆ ಕೊಟ್ಟಾಗಿದೆ.

ಅದನ್ನು ಒಪ್ಪಿಕೊಳ್ಳಲು ಇಷ್ಟು ಸಮಯ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಸ್ಪೀಕರ್ ಎಂದಿಗೂ ಯಾವುದೋ ಒಂದು ಪಕ್ಷದ ಹಿತವನ್ನು ಮಾತ್ರ ನೋಡಬಾರದು ಎಂದು ಗುಡುಗಿದ್ದಾರೆ.

Speaker behaves like Congress Agent says Shobha

ಭರತನಾಟ್ಯ, ಯಕ್ಷಗಾನ, ಮತ್ತು ನೃತ್ಯಗಳಿಂದ ಅನೇಕ ಮಂದಿ ದೇವರನ್ನು ಒಲಿಸಿಕೊಂಡಿದ್ದಾರೆ. ಇಂತಹ ನೃತ್ಯದ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವಹೇಳನಕಾರಿ ಹಾಗೂ ಹಗುರವಾಗಿ ಮಾತನಾಡಿದ್ದಾರೆ , ಅವರು ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಸ್ಪೀಕರ್ ಸ್ಥಾನದಲ್ಲಿರುವ ರಮೇಶ್ ಕುಮಾರ್ ಅವರು ನೃತ್ಯಗಾರ್ತಿಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ಅವರು ಕಾಂಗ್ರೆಸ್ ಏಜೆಂಟ್ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+