Railway: ಪ್ರಯಾಣಿಕರೇ ಗಮನಿಸಿ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯ, ರದ್ದಾದ ರೈಲುಗಳ ಪಟ್ಟಿ
ಬೆಂಗಳೂರು, ಜುಲೈ 15: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹಲವು ರೈಲುಗಳ ಸಂಚಾರವು ಎಂದಿನಂತೆ ಇರದೇ ರದ್ದುಗೊಂಡಿವೆ. ಮುಂದಿನ ಒಂದು ವಾರದಲ್ಲಿ ಎರಡು ದಿನ ತುರ್ತು ಕಾಮಗಾರಿ ಪ್ರಯುಕ್ತ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಗಮನಿಸಿ ಸಂಚರಿಸಬೇಕು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನೈಋತ್ಯ ರೈಲ್ವೆ ವಲಯವು ರದ್ದಾದ, ಭಾಗಶಃ ರದ್ದಾದ ರೈಲುಗಳು, ನಿಲುಗಡೆ ರದ್ದಿನ ರೈಲುಗಳು, ಕಾರಣ, ದಿನಾಂಕ ಮತ್ತು ಸಮಯದ ಪಟ್ಟಿ ನೀಡಿದ್ದಾರೆ. ಅದರ ಮಾಹಿತಿ ಇಲ್ಲಿದೆ.

ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (62) ಕಾಮಗಾರಿ ಜುಲೈ 18 ಮತ್ತು 25 ರಂದು ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಓಡಾಡುವ ವಿವಿಧ ರೈಲುಗಳ ಸಂಚಾರ ರದ್ಗೊಳಿಸಲಾಗಿದೆ.
ರದ್ದಾದ ರೈಲುಗಳು ಮತ್ತು ಗಾಡಿ ಸಂಖ್ಯೆ ವಿವರ
ತುಮಕೂರು-ಚಾಮರಾಜನಗರ ರೈಲು (ಸಂಖ್ಯೆ 07346), ಚಾಮರಾಜನಗರ-ಮೈಸೂರು ರೈಲು (ಸಂಖ್ಯೆ07328), ಚಾಮರಾಜನಗರ-ಯಶವಂತಪುರ ರೈಲು (ಸಂಖ್ಯೆ 16239), ಯಶವಂತಪುರ-ಚಾಮರಾಜನಗರ ರೈಲು (ಗಾಡಿ ಸಂಖ್ಯೆ 16240), ತುಮಕೂರು- ಕೆಎಸ್‌ಆರ್ ಬೆಂಗಳೂರು ರೈಲು (ಸಂಖ್ಯೆ 06576), ಕೆಎಸ್‌ಆರ್‌ಬೆಂಗಳೂರಿನಿಂದ ತುಮಕೂರಿಗೆ ಹೊರಡುವ ರೈಲು (ಸಂಖ್ಯೆ 06575), ಶಿವಮೊಗ್ಗ-7ಟೌನ್-9 ಯಶವಂತಪುರ ತೆರಳುವ (ಸಂಖ್ಯೆ 16580) ರೈಲುಗಳನ್ನು ಮುಂದಿನ ಜುಲೈ 18 ಮತ್ತು 25 ರಂದು ಸಂಚಾರ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ.

ಭಾಗಶಃ ರದ್ದಾದ ರೈಲುಗಳು ಯಾವವು?
ತುರ್ತು ರೈಲ್ವೆ ಕ್ರಾಸಿಂಗ್ ಕಾಮಗಾರಿ ಸಂಬಂಧ ಜುಲೈ 18 ಮತ್ತು 25 ರಂದು ಬೆಂಗಳೂರು ಮೆಜೆಸ್ಟಿಕ್ (KSR) ರೈಲು ನಿಲ್ದಾಣದಿಂದ ತುಮಕೂರಿಗೆ ಹೊರಡುವ (ಸಂಖ್ಯೆ 06571/06572) ರೈಲುಗಳನ್ನು ಹಿರೇಹಳಿ - ತುಮಕೂರು ನಡುವೆ ರಸ್ತೆ ರದ್ದುಗೊಳಿಸಲಾಗಿದೆ.
ಇನ್ನೂ ಅದೇ ರೀತಿ ತಾಳಗುಪ್ಪ-ಕೆಎಸ್‌ಆರ್‌ಬೆಂಗಳೂರು ರೈಲು (ಸಂಖ್ಯೆ 20652), ಕೆಎಸ್ ಬೆಂಗಳೂರು-ಧಾರವಾಡ-ಕೆಎಸ್‌ಆರ್ ಬೆಂಗಳೂರು ರೈಲು (ಸಂಖ್ಯೆ 12725/12726) ಮತ್ತು ಅರಸೀಕೆರೆ-ಕೆಎಸ್ ಆರ್ ಬೆಂಗಳೂರು ನಿಲ್ದಾಣಗಳ ನಡುವಿನ ರೈಲನ್ನು ರದ್ದುಗೊಳಿಸಲಾಗಿದೆ.
ರೈಲು ಮಾರ್ಗ ಬದಲಾವಣೆ ಮಾಹಿತಿ
ಜುಲೈ 17, 24 ರಂದು ವಾಸ್ಕೋಡ ಗಾಮಾದಿಂದ ಹೊರಡುವ ರೈಲು (ಸಂಖ್ಯೆ 17310) ವಾಸ್ಕೋಡ ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಜುಲೈ 18, 25 ರಂದು ಹೊರಡುವ ಮೈಸೂರು- ವಾರಣಾಸಿ ರೈಲು (ಸಂಖ್ಯೆ 22687), ಯಶವಂತಪುರ-ಜೈಪುರ ರೈಲು (ಸಂಖ್ಯೆ 82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿವೆ.
ಆದರೆ ಈ ರೈಲುಗಳು ತುಮಕೂರು ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ.
ಮೈಸೂರು-ಬೆಳಗಾವಿ (ಸಂಖ್ಯೆ 17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಮೈಸೂರು-ಉದಯಪುರ ಸಿಟಿ ರೈಲು (ರೈಲು 19668) ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಪ್ರಯಾಣ ಸೇವೆ ನೀಡಲಿದೆ.












Click it and Unblock the Notifications