ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಕಾಮಗಾರಿ ಶೀಘ್ರ ಅಂತ್ಯ, ಏನು ಅನುಕೂಲ?

|
Google Oneindia Kannada News

ಬೆಂಗಳೂರು, ಜನವರಿ 23: ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಕಾಮಗಾರಿ ಜೂನ್ ವೇಳೆಗೆ ಅಂತ್ಯಗೊಳ್ಳಲಿದೆ, 2019ರ ಅಂತ್ಯದೊಳಗೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಮೊದಲ ಹಂತದ ಕಾಮಗಾರಿಯು ಜೂನ್ 2019ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲ್ವೆ ಸಹಾಯಕ ಖಾತೆ ಸಚಿವರು 2020ರೊಳಗೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಅದೇ ರೀತಿ ಕಳೆದ ಡಿಸೆಂಬರ್ ನಲ್ಲಿ ನಡೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಂಸದ ಪಿಸಿ ಮೋಹನ್ ಕಾಮಗಾರಿ ಕುರಿತು ರೈಲ್ವೆ ಸಚಿವರನ್ನು ಪ್ರಶ್ನಿಸಿದ್ದರು. ಕಾಮಗಾರಿ ವೇಗದಲ್ಲಿ ಮುಗಿಸಲಾಗುವುದು ಎಂದು ಹೇಳಿದ್ದಲ್ಲದೆ ಬೆಂಗಳೂರು ಸುತ್ತಮುತ್ತಲು ಇನ್ನಷ್ಟು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

Soon express trains will stop at Byappanahalli station

ಒಟ್ಟು ಎರಡು ಹಂತದಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದ ಕಾಮಗಾರಿಯು ನಡೆಯುತ್ತಿದೆ. ಅಭಿವೃದ್ಧಿ ಏನೇನು?ಮೊದಲ ಹಂತದಲ್ಲಿ ನಾಲ್ಕು ಫ್ಲ್ಯಾಟ್‌ಫಾರಂ ಲೈನ್‌ಗಳು, ಎರಡು, ಮೂರು ಫ್ಲ್ಯಾಟ್‌ಫಾರಂಗಳು, ಮೂರು ಸ್ಟೇಬ್ಲಿಂಗ್ ಲೈನ್‌ಗಳು, ಮೂರು ಶಂಟಿಂಗ್ ನೆಕ್ ಇರಲಿದೆ. ಅದೇ ರೀತಿ ಎರಡನೇ ಹಂತದಲ್ಲಿ ಮೂರು ಫ್ಲ್ಯಾಟ್‌ಫಾರಂ ಲೈನ್‌ಗಳು, ಎರಡು ಫ್ಲ್ಯಾಟ್‌ಫಾರಂಗಳು, ಎರಡು ಸ್ಟೇಬ್ಲಿಂಗ್ ಲೈನ್‌ಗಳು ಬರಲಿವೆ.

ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಆ ಪ್ರದೇಶದ ಜನರಿಗೆ ಸಾಕಷ್ಟು ಅನುಕೂಲಗಳಿವೆ. ಜೊತೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಇರುವ ಕಾರಣ ಜನರಿಗೆ ಈ ನಿಲ್ದಾಣವನ್ನು ಸಂಪರ್ಕಿಸುವುದು ಕೂಡ ಸುಲಭ ಹೀಗಾಗಿ ದಟ್ಟಣೆ ಇರುವ ಮೆಜೆಸ್ಟಿಕ್ ಗೆ ಬರುವ ಕೆಲವು ರೈಲುಗಳು ಬೈಯಪ್ಪನಹಳ್ಳಿ ಮೂಲಕ ಪ್ರಯಾಣ ಆರಂಭಿಸುತ್ತಿವೆ.

English summary
With expansion work of Byappanahalli railway stations platform nos 1 and 2 expected to be completed by end of june, long distance trains will sonn halt there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X