Sonu Nigam: 'ಕ್ಷಮೆ ಕೇಳುವುದೊಂದೇ ದಾರಿ, ಸಮರ್ಥನೆ ನೀಚತನ'; ಸೋನು ನಿಗಮ್ ಸ್ಪಷ್ಟನೆಗೆ ಕರವೇ ನಾರಾಯಣಗೌಡ ಕಿಡಿ
ಬೆಂಗಳೂರು: ಗಾಯಕ ಸೋನು ನಿಗಮ್ ನೇತೃತ್ವದ ಬೆಂಗಳೂರು ಕಾರ್ಯಕ್ರಮಕ್ಕೆ ಕರವೇ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸೋನು ನಿಗಮ್ ಅವರು ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿದ್ದಾರೆ. ಆ ಬಗ್ಗೆ ಪ್ರತಿಕ್ರಿಯಿಸಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, 'ಸಷ್ಟನೆ ನೀಡುವ ಧಾಟಿಯಲ್ಲಿ ಮತ್ತೆ ತನ್ನ ಹಿಂದಿನ ಭಯೋತ್ಪಾದಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಕನ್ನಡ ಹಾಡು ಹಾಡಲು ಕೇಳಿದ್ದನ್ನೇ ಪೆಹಲ್ಗಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ. ಈ ಮೂಲಕ ಮ್ಯೂಸಿಕ್ ಇವೆಂಟ್‌ಗೆ ಅನುಮತಿಸದಂತೆ ಮತ್ತೆ ಅವರು ಒತ್ತಾಯಿಸಿದ್ದರೆ.
ಎಕ್ಸ್ ಪೋಸ್ಟ್ ಮಾಡಿರುವ ನಾರಾಯಣ ಗೌಡರು, ''ಅಂದು ಹಾಗೇ ಹೇಳಲು ಕಾರಣ, ಸಂದರ್ಭ ಏನೇ ಇರಲಿ, ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು. ಭಯೋತ್ಪಾದಕ ಕೃತ್ಯಗಳಿಗೆ ಒಂದು ಹಾಡಿನ ಬೇಡಿಕೆಯೇ ಕಾರಣ ಎನ್ನುವುದು ನೀಚತನದ ಪರಮಾವಧಿ. ಇದಕ್ಕೆ ಈಗ ಕಾರಣಗಳನ್ನು ಜೋಡಿಸುತ್ತ ಹೋಗುವುದೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ.

ಸೋನು ಅವರಿಗೆ ಕನ್ನಡ ಮಣ್ಣಿನ ಋಣವಿದೆ. ಇಲ್ಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಲಕ್ಷಾಂತರ ಜನರ ಬೆಲೆ ಕಟ್ಟಲಾಗದ ಪ್ರೀತಿ ಗಳಿಸಿದ್ದಾರೆ. ಆ ಪ್ರೀತಿಗೆ ದ್ರೋಹ ಎಸಗುವುದು ಎಷ್ಟು ಸರಿ ಎಂಬುದನ್ನು ಅವರು ತಮಗೆ ತಾವೇ ಕೇಳಿಕೊಳ್ಳಲಿ' ಎಂದರು.
'ಪೆಹಲ್ಗಾಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ಒಂದು ವಿಡಿಯೋ ಪೋಸ್ಟ್ ಮಾಡಿ ಸೋನು ನಿಗಮ್ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಆ ದಾಳಿಯ ಭೀಕರತೆ ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಾವೆಲ್ಲರೂ ಕಣ್ಣೀರಿಟ್ಟಿದ್ದೀವಿ. ಆ ದಾಳಿಯ ಭಯಾನಕತೆ ಗೊತ್ತಿರುವ ಕಾರಣಕ್ಕಾಗಿಯೇ ಸೋನು ಅವರ ಹೇಳಿಕೆಯನ್ನು ನಾವೆಲ್ಲರೂ ಅಷ್ಟು ತೀವ್ರವಾಗಿ ವಿರೋಧಿಸಿದ್ದು. ಆ ಕಾರಣಕ್ಕಾಗಿಯೇ ಸೋನು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು. ಈಗ ಅವರು ಪೆಹಲ್ಗಮ್ ದಾಳಿಯಲ್ಲಿ ಅಸು ನೀಗಿದ ಜೀವಗಳನ್ನು ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಅಗತ್ಯ ಇರಲಿಲ್ಲ'' ಎಂದು ಕಿಡಿ ಕಾರಿದರು.
'ದೇಶಭಕ್ತಿಯ ಪಾಠ ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಶತ ಶತಮಾನಗಳ ಕಾಲ ನಾವೇ ದೇಶವಾಗಿದ್ದೆವು. ನಮ್ಮ ನಾಡಭಕ್ತಿ ಯಾವತ್ತಿಗೂ ದೇಶ ವಿರೋಧಿಯಲ್ಲ. ಭಾಷೆಯನ್ನು ಪ್ರೀತಿಸುವುದು ದೇಶವನ್ನು ಒಡೆಯುವುದಿಲ್ಲ. ಇನ್ನಷ್ಟು ಬಲವಾಗಿ ದೇಶವನ್ನು ಕಟ್ಟುತ್ತದೆ. ದೇಶದ ಸೌಂದರ್ಯ ಇರುವುದೇ ನಮ್ಮ ವೈವಿಧ್ಯತೆಗಳಲ್ಲಿ. ದೇಶದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಈ ವೈವಿಧ್ಯತೆ ಯನ್ನು ವಿರೋಧಿಸುವುದು, ಅಪಮಾನಿಸುವುದು ನಿಜವಾದ ದೇಶದ್ರೋಹ' ಎಂದು ತಿಳಿ ಹೇಳಿದ್ದಾರೆ.
ಸಮರ್ಥನೆಗೆ ಇಳಿಯುವುದು ನೀಚತನ
'ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಮಾಡಬೇಕಾದ, ಮಾಡಬಹುದಾದ ಒಂದೇ ಒಂದು ಕೆಲಸವೇನೆಂದರೆ ತಾನು ಅಪಮಾನಿಸಿದ ಜನರಿಗೆ, ಆ ಮಣ್ಣಿಗೆ ತಲೆಬಾಗಿ ಕ್ಷಮೆ ಕೋರುವುದು ಮತ್ತು ಇನ್ನೆಂದೂ ಇಂಥ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡುವುದು. ಅದನ್ನು ಬಿಟ್ಟು ದೇಶಭಕ್ತಿ, ಧರ್ಮ, ಹುತಾತ್ಮ ಜೀವಗಳ ಬೆನ್ನಲ್ಲಿ ಅಡಗಿಕೊಂಡು ಸಮರ್ಥನೆಗೆ ಇಳಿಯುವುದು ನೀಚತನ. ಅದನ್ನು ಯಾರೂ ಕೂಡ ಮಾಡಬಾರದು'.
'ಸೋನು ನಿಗಮ್ ಒಬ್ಬ ಗಾಯಕರಾಗಿ ನಮಗೆಲ್ಲರಿಗೂ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಸೋನು ಅವರನ್ನೂ ಕೂಡ ಕನ್ನಡ ಚಿತ್ರರಂಗ ಪೊರೆದಿದೆ. ಒಬ್ಬ ಗಾಯಕನಾಗಿ ಹಾಡುಗಳಿಗೆ ಜೀವ ತುಂಬುವಾಗ ಅವರು ತೋರುವ ಸೂಕ್ಷ್ಮತೆಯನ್ನೇ ಸಾರ್ವಜನಿಕ ನಡವಳಿಕೆ, ಆಡುವ ಮಾತುಗಳಲ್ಲಿ ತೋರಬೇಕು ಅನ್ನುವುದಷ್ಟೇ ನಮ್ಮ ಅಪೇಕ್ಷೆ. ಇದನ್ನು ಅವರು ಬೇಗ ಅರ್ಥ ಮಾಡಿಕೊಳ್ಳಲಿ.
ಕನ್ನಡಿಗರು ಎಲ್ಲಾ ಅರ್ಥದಲ್ಲೂ ನಿಜವಾದ ದೇಶಭಕ್ತರು. ಸ್ವಾತಂತ್ರ್ಯ ಪೂರ್ವದಲ್ಲಿ, ನಂತರದಲ್ಲಿ ದೇಶಕ್ಕಾಗಿ ನಮ್ಮನ್ನು ನಾವು ತೇಯ್ದುಕೊಂಡಿದ್ದೇವೆ. ಬೇಕಾದಷ್ಟು ಕಳೆದುಕೊಂಡಿದ್ದೇವೆ. ಸೋನು ಅವರಿಗೆ ಬೇಕಿದ್ದರೆ, ಮಾಹಿತಿ ತಲುಪಿಸುತ್ತೇವೆ' ಎಂದು ಹೇಳಿದರು.
ಸೋನು ನಿಗಮ್ ಹೇಳಿದ್ದೇನು?
'ನನ್ನ ಪ್ರೀತಿಯ ಕನ್ನಡಿಗರೇ', ಎನ್ನುತ್ತಲೇ ಸ್ಪಷ್ಟನೆ ನೀಡಿರುವ ಸೋನು ನಿಗಮ್ ಅವರು ಮನಸಾರೆ ಹೇಳಿದಂತಿಲ್ಲ. ಹಿಂದಿನ ಹೇಳಿಕೆ ಸಮರ್ಥನೆ ಕೊಟ್ಟವರಂತೆ 'ನನಗೆ ಕೆಲಸ ಮಾಡುವ, ಹಾಡುವ ಅಥವಾ ಪ್ರದರ್ಶನ ನೀಡುವ ಯಾವುದೇ ಅಗತ್ಯವಿಲ್ಲ. ಈ ವೃತ್ತಿಯಲ್ಲಿ ಕಳೆದ 49 ವರ್ಷಗಳಲ್ಲಿ ನಾನು ಸಾಕಷ್ಟು ಹಣ ಸಂಪಾದಿಸಿದ್ದೇನೆ' ಅಂತಲೂ ಹೇಳಿದ್ದಾರೆ. ಅಂದರೆ ಬೆಂಗಳೂರಿಗೆ ಬಂದು ಕಾರ್ಯಕ್ರಮ ಮಾಡಲೇಬೇಕೆಂಬ ಅಗತ್ಯವೇನು ಇಲ್ಲ ಎಂಬಂತೆ ದುರಂಹಕಾರ ಪ್ರದರ್ಶಿಸಿದ್ದಾರೆ.
ಪೋಸ್ಟ್‌ನಲ್ಲಿ ಅವರು, 'ಮೊದಲನೆಯದಾಗಿ ನನ್ನ ಸಂಗೀತ ಕಾರ್ಯಕ್ರಮದ ಎಲ್ಲಾ ಟಿಕೆಟ್‌ಗಳು ಮಾರಾಟವಾಗುವಂತೆ ಮಾಡಿದಕ್ಕಾಗಿ ನಿಮಗೆ ಧನ್ಯವಾದಗಳು. ಇದು ನನಗೆ ದೊಡ್ಡ ನಿರಾಳತೆ ಕೊಟ್ಟಿದೆ. ಏಕೆಂದರೆ ನನ್ನ ಸ್ವಂತ ಜನರಂತೆ ನಾನು ಪ್ರೀತಿಸುವವರು, ನನ್ನ ಬಗ್ಗೆ ತಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಅಸಮಾಧಾನ ಅಥವಾ ನೋವನ್ನು ಇಟ್ಟುಕೊಳ್ಳುವುದು ನನಗೆ ಇಷ್ಟವಿಲ್ಲ.
ಇನ್ನು ಪಹಲ್ಗಾಮ್‌ಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ, ಈ ವಿಡಿಯೋದಲ್ಲಿ ಕಾಣುವ ವ್ಯಕ್ತಿಯೇ ಎಲ್ಲದಕ್ಕೂ ಕಾರಣವೆಂದು ಅಂದು ಮೃತರಾದ ವ್ಯಕ್ತಿಯ ಪೋಟೋ ಅವರು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನಂತೆ, ನಾನೂ ಕೂಡ ಈ ವಿಡಿಯೋವನ್ನು ನೋಡಿ ಕಣ್ಣೀರಿಟ್ಟೆ. ಇದರಲ್ಲಿ ಆ ವ್ಯಕ್ತಿ ಮತ್ತು ಆತನ ಪತ್ನಿ, ತಾವು ಕರ್ನಾಟಕದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮತ್ತು ಕಾಶ್ಮೀರದ ತಮ್ಮ ಅನುಭವವನ್ನು ಕೊಂಡಾಡುತ್ತಾರೆ. ಆದರೆ, ಕೇವಲ ಕೆಲವೇ ನಿಮಿಷಗಳಲ್ಲಿ ಆತ ಹಿಂದೂ ಎಂಬ ಕಾರಣಕ್ಕಾಗಿಯೇ ಗುಂಡಿಕ್ಕಿ ಕೊಲ್ಲಲ್ಪಡುತ್ತಾನೆ ಎಂಬುದು ಅವರಿಗೂ ತಿಳಿದಿರಲಿಲ್ಲ!. ಆತ ಕನ್ನಡಿಗನಾಗಿದ್ದ ಎಂಬ ಸಂಗತಿಯೂ ಆತನನ್ನು ಉಳಿಸಲು ಸಹಾಯ ಮಾಡಲಿಲ್ಲ.' ಎಂದಿದ್ದಾರೆ.
ತಾಯಿ, ಸಹೋದರಿಗೆ ನಿಂದಿಸಿದರೆ ಯಾರೂ ಸಹಿಸಲ್ಲ
'ಜೀವನದಲ್ಲಿ, ಯಾರಾದರೂ ನಿಮ್ಮ ತಾಯಿ ಅಥವಾ ಸಹೋದರಿಯರನ್ನು ಉದ್ದೇಶಿಸಿ ಅಶ್ಲೀಲವಾಗಿ ನಿಂದಿಸಿದರೆ ನಿಮ್ಮಲ್ಲಿ ಯಾರೂ ಸಹಿಸಿಕೊಳ್ಳುವುದಿಲ್ಲ. ಅಂದು ನನ್ನ ಕಾರ್ಯಕ್ರಮದಲ್ಲಿ ಮೊದಲ ಹಾಡಿನಿಂದಲೇ ಇಂತಹ ನಿಂದನೆಗಳು ಕೇಳಿ ಬಂದವು. ಗಮನಿಸಿ, ಇದೊಂದು ಕಾಲೇಜು ಕಾರ್ಯಕ್ರಮವಾಗಿತ್ತು. ಟಿಕೆಟ್ ಮಾರಾಟ ಮಾಡಿ ನಡೆಸಿದ ವಾಣಿಜ್ಯ ಕಾರ್ಯಕ್ರಮವಾಗಿರಲಿಲ್ಲ. ಸಾಮಾನ್ಯವಾಗಿ ಕಾಲೇಜು ಕಾರ್ಯಕ್ರಮಗಳಲ್ಲಿ ಬಜೆಟ್ ಕಡಿಮೆ ಇರುವುದರಿಂದ ನಾನು ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಕರ್ನಾಟಕದ ವಿಷಯ ಬಂದಾಗ ನಾನು ಎಂದಿಗೂ 'ಇಲ್ಲ' ಎಂದು ಹೇಳಿಲ್ಲ. ನಾನು ಒಂದೂವರೆ ಗಂಟೆಯಷ್ಟು ಕನ್ನಡ ಹಾಡುಗಳನ್ನು ಸಿದ್ಧಪಡಿಸಿಕೊಂಡು ಹೋಗಿದ್ದೆ. ನನ್ನ ಪ್ರದರ್ಶನ ಅತ್ಯುನ್ನತ ಹಂತದಲ್ಲಿದ್ದಾಗ ಆ ಹಾಡುಗಳನ್ನು ಹಾಡಲು ಯೋಜಿಸಿದ್ದೆ. ಹೀಗಿರುವಾಗ, ಇಂತಹ ನಿಂದನೆಗಳನ್ನು ಎದುರಿಸುವಷ್ಟು ತಪ್ಪು ನಾನು ಏನು ಮಾಡಿದೆ?' ಎಂದು ಅವರು ಮರಳಿ ಪ್ರಶ್ನಿಸಿದ್ದಾರೆ.
ಗಾಯಕ ಸೋನು ನಿಗಮ್ ಸ್ಪಷ್ಟನೆ ನೀಡುವ ಧಾಟಿಯಲ್ಲಿ ಮತ್ತೆ ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಕನ್ನಡ ಹಾಡು ಹಾಡಲು ಕೇಳಿದ್ದನ್ನೇ ಪೆಹಲ್ಗಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ. ಕಾರಣ, ಸಂದರ್ಭ ಏನೇ ಇರಲಿ, ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು, ಭಯೋತ್ಪಾದಕ ಕೃತ್ಯಗಳಿಗೆ ಒಂದು ಹಾಡಿನ ಬೇಡಿಕೆಯೇ ಕಾರಣ ಎನ್ನುವುದು ನೀಚತನದ ಪರಮಾವಧಿ. ಇದಕ್ಕೆ ಈಗ ಕಾರಣಗಳನ್ನು ಜೋಡಿಸುತ್ತ ಹೋಗುವುದೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ. ಸೋನು ಅವರಿಗೆ ಕನ್ನಡ ಮಣ್ಣಿನ ಋಣವಿದೆ. ಇಲ್ಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಲಕ್ಷಾಂತರ ಜನರ ಬೆಲೆ ಕಟ್ಟಲಾಗದ ಪ್ರೀತಿ ಗಳಿಸಿದ್ದಾರೆ. ಆ ಪ್ರೀತಿಗೆ ದ್ರೋಹ ಎಸಗುವುದು ಎಷ್ಟು ಸರಿ ಎಂಬುದನ್ನು ಅವರು ತಮಗೆ ತಾವೇ ಕೇಳಿಕೊಳ್ಳಲಿ.ಪೆಹಲ್ಗಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ಒಂದು ವಿಡಿಯೋ ಪೋಸ್ಟ್ ಮಾಡಿ ಸೋನು ನಿಗಮ್ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಆ ದಾಳಿಯ ಭೀಕರತೆ ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಾವೆಲ್ಲರೂ ಕಣ್ಣೀರಿಟ್ಟಿದ್ದೀವಿ. ಆ ದಾಳಿಯ ಭಯಾನಕತೆ ಗೊತ್ತಿರುವ ಕಾರಣಕ್ಕಾಗಿಯೇ ಸೋನು ಅವರ ಹೇಳಿಕೆಯನ್ನು ನಾವೆಲ್ಲರೂ ಅಷ್ಟು ತೀವ್ರವಾಗಿ ವಿರೋಧಿಸಿದ್ದು. ಆ ಕಾರಣಕ್ಕಾಗಿಯೇ ಸೋನು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು. ಈಗ ಅವರು ಪೆಹಲ್ಗಮ್ ದಾಳಿಯಲ್ಲಿ ಅಸು ನೀಗಿದ ಜೀವಗಳನ್ನು ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಅಗತ್ಯ ಇರಲಿಲ್ಲ. ದೇಶಭಕ್ತಿಯ ಪಾಠವನ್ನು ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಶತ ಶತಮಾನಗಳ ಕಾಲ ನಾವೇ ದೇಶವಾಗಿದ್ದೆವು. ನಮ್ಮ ನಾಡಭಕ್ತಿ ಯಾವತ್ತಿಗೂ ದೇಶ ವಿರೋಧಿಯಲ್ಲ. ಭಾಷೆಯನ್ನು ಪ್ರೀತಿಸುವುದು ದೇಶವನ್ನು ಒಡೆಯುವುದಿಲ್ಲ, ಇನ್ನಷ್ಟು ಬಲವಾಗಿ ದೇಶವನ್ನು ಕಟ್ಟುತ್ತದೆ. ದೇಶದ ಸೌಂದರ್ಯ ಇರುವುದೇ ನಮ್ಮ ವೈವಿಧ್ಯತೆಗಳಲ್ಲಿ. ದೇಶದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಈ ವೈವಿಧ್ಯತೆ ಯನ್ನು ವಿರೋಧಿಸುವುದು, ಅಪಮಾನಿಸುವುದು ನಿಜವಾದ ದೇಶದ್ರೋಹ. ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಮಾಡಬೇಕಾದ, ಮಾಡಬಹುದಾದ ಒಂದೇ ಒಂದು ಕೆಲಸವೇನೆಂದರೆ ತಾನು ಅಪಮಾನಿಸಿದ ಜನರಿಗೆ, ಆ ಮಣ್ಣಿಗೆ ತಲೆಬಾಗಿ ಕ್ಷಮೆ ಕೋರುವುದು ಮತ್ತು ಇನ್ನೆಂದೂ ಇಂಥ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡುವುದು. ಅದನ್ನು ಬಿಟ್ಟು ದೇಶಭಕ್ತಿ, ಧರ್ಮ, ಹುತಾತ್ಮ ಜೀವಗಳ ಬೆನ್ನಲ್ಲಿ ಅಡಗಿಕೊಂಡು ಸಮರ್ಥನೆಗೆ ಇಳಿಯುವುದು ನೀಚತನ. ಅದನ್ನು ಯಾರೂ ಕೂಡ ಮಾಡಬಾರದು.ಸೋನು ನಿಗಮ್ ಒಬ್ಬ ಗಾಯಕರಾಗಿ ನಮಗೆಲ್ಲರಿಗೂ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಸೋನು ಅವರನ್ನೂ ಕೂಡ ಕನ್ನಡ ಚಿತ್ರರಂಗ ಪೊರೆದಿದೆ. ಒಬ್ಬ ಗಾಯಕನಾಗಿ ಹಾಡುಗಳಿಗೆ ಜೀವ ತುಂಬುವಾಗ ಅವರು ತೋರುವ ಸೂಕ್ಷ್ಮತೆಯನ್ನೇ ಸಾರ್ವಜನಿಕ ನಡವಳಿಕೆ, ಆಡುವ ಮಾತುಗಳಲ್ಲಿ ತೋರಬೇಕು ಅನ್ನುವುದಷ್ಟೇ ನಮ್ಮ ಅಪೇಕ್ಷೆ. ಇದನ್ನು ಅವರು ಬೇಗ ಅರ್ಥ ಮಾಡಿಕೊಳ್ಳಲಿ.ಕನ್ನಡಿಗರು ಎಲ್ಲಾ ಅರ್ಥದಲ್ಲೂ ನಿಜವಾದ ದೇಶಭಕ್ತರು. ಸ್ವಾತಂತ್ರ್ಯ ಪೂರ್ವದಲ್ಲಿ, ನಂತರದಲ್ಲಿ ದೇಶಕ್ಕಾಗಿ ನಮ್ಮನ್ನು ನಾವು ತೇಯ್ದುಕೊಂಡಿದ್ದೇವೆ. ಬೇಕಾದಷ್ಟು ಕಳೆದುಕೊಂಡಿದ್ದೇವೆ. ಸೋನು ಅವರಿಗೆ ಬೇಕಿದ್ದರೆ, ಮಾಹಿತಿ ತಲುಪಿಸುತ್ತೇವೆ.
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) October 16, 2026
ಕರವೇಗೆ ವಿನಂತಿಸಿದ ಸೋನು ನಿಗಮ್
'ಅವರಿಗೆ ಪ್ರತಿಯಾಗಿ ನಿಂದಿಸುವ ಬದಲು, ಇಂತಹ ದ್ವೇಷಪೂರಿತ ಪ್ರತ್ಯೇಕತಾವಾದಿಗಳಿಗೆ ನಾನು ಒಂದು ವಿಷಯವನ್ನು ನೆನಪಿಸಿದೆ. ಕೇವಲ ಎರಡು ವಾರಗಳ ಹಿಂದಷ್ಟೇ, ಒಬ್ಬ ಕನ್ನಡಿಗನನ್ನು - ಒಬ್ಬ ಭಾರತೀಯನನ್ನು ಆತ ಹಿಂದೂ ಎಂಬ ಕಾರಣಕ್ಕಾಗಿಯೇ ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು ಅಲ್ಲವೇ?. ಪ್ರೀತಿಯ ಕರವೇ (KRV) ಅವರೇ ಕನ್ನಡ ಮತ್ತು ಕನ್ನಡಿಗರ ಬಗ್ಗೆ ನಿಮಗಿರುವ ಪ್ರೀತಿಯನ್ನು ನಾನು ಗೌರವಿಸುತ್ತೇನೆ. ಅಲ್ಲಿ ನಿಜವಾಗಿಯೂ ಏನಾಯಿತು ಎಂಬುದನ್ನು ನೀವು ಕಣ್ಣಾರೆ ಕಾಣದ ಕಾರಣ, ನಿಮ್ಮ ಕೋಪ ಸಹಜವೇ ಆಗಿದೆ. ಆದ್ದರಿಂದ, ಅಲ್ಲಿ ನಡೆದ ನೈಜ ಘಟನೆಯನ್ನು ನಿಮಗೆ ವಿವರಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದೆ' ಎಂದು ತಿಳಿಸಿದ್ದಾರೆ.
ದಯವಿಟ್ಟು ಅಲ್ಲಿ ಹಾಜರಿದ್ದ ಪ್ರೇಕ್ಷಕರನ್ನು ಕೇಳಿ ನೋಡಿ. ನನ್ನನ್ನು ನಿಂದಿಸುತ್ತಿದ್ದಾಗ ಅವರಿಗೆ ಎಷ್ಟು ಮುಜುಗರ ಉಂಟಾಗಿತ್ತು ಎಂಬುದು ಅವರಿಗೇ ಗೊತ್ತು!. ಇನ್ನು ನನ್ನ ಕನ್ನಡ ಗಾಯನದ ವಿಷಯಕ್ಕೆ ಬಂದರೆ, ಕಳೆದ 30 ವರ್ಷಗಳಿಂದ ಕನ್ನಡ ಸಂಗೀತ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ ವ್ಯಕ್ತಿಯೊಬ್ಬರು 30,000 ಮಂದಿ ಕನ್ನಡಿಗರಲ್ಲದವರು ಇರುವ ಸಂಗೀತ ಕಾರ್ಯಕ್ರಮವೊಂದರಲ್ಲಿ, ಕೇವಲ ಒಬ್ಬ ಕನ್ನಡಿಗನ ಕೋರಿಕೆಯ ಮೇರೆಗೆ ಕನ್ನಡ ಹಾಡೊಂದನ್ನು ಹಾಡಿದಾಗ, ಅಂತಹವರನ್ನು ಟೀಕಿಸುವುದು ಅತ್ಯಂತ ಅಪಕ್ವವಾದ (ಅವಿವೇಕದ) ನಡೆಯಾಗುತ್ತದೆ' ಎಂದು ಹೇಳಿದ್ದಾರೆ.


Click it and Unblock the Notifications
