ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಂಪುರ ಕೆರೆಗೆ ತ್ಯಾಜ್ಯ ಸಂಸ್ಕರಣ ಘಟಕದ ನೀರು: ಸ್ಥಳೀಯ ಆಕ್ರೋಶ

|
Google Oneindia Kannada News

ಬೆಂಗಳೂರು, ನವೆಂಬರ್ 22: ಯುನೈಟೆಡ್ ಬೆಂಗಳೂರು ಲೋಕಾಯುಕ್ತ ಆದೇಶದಂತೆ ಬಿಬಿಎಂಪಿ ಅಧಿಕಾರಿಗಳು , ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರ ಹಾಗೂ ಸ್ಥಳೀಯರೊಂದಿಗೆ ಸೋಂಪುರ ಕೆರೆ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ

ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಬೆಂಗಳೂರು ಸೇರಿ ಒಟ್ಟು 24 ಕೆರೆಗಳ ಸಂಬಂಧಿಸಿದಂತೆ ದೂರು ನೀಡಲಾಗಿತ್ತು. ಸೋಂಪುರ ಕರೆಗೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಾಗ ಸೋಂಪುರ ಕೆರೆಗೆ ಲಿಂಗನೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಸಂಸ್ಕರಣೆ ಮಾಡಿರುವ ನೀರನ್ನು ರಾಜಕಾಲುವೆಗೆ ಬಿಡುತ್ತಿದ್ದರು ಹಾಗೆಯೇ ರಾಜಕಾಲುವೆಗೆ ಬಿಟ್ಟಿದ್ದ ತ್ಯಾಜ್ಯ ನೀರು ನೇರವಾಗಿ ಕೆರೆಗೆ ಬಂದು ತಲುಪುತ್ತಿತ್ತು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಸಂಶೋಧನಾ ಸಹಾಯಕ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ಲೋಕಾಯುಕ್ತ ನಿರ್ದೇಶನ: ಅರಕೆರೆ ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು ಲೋಕಾಯುಕ್ತ ನಿರ್ದೇಶನ: ಅರಕೆರೆ ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು

ಕೆರೆಗೆ ತ್ಯಾಜ್ಯ ನೀರು ಬರುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ವಿಚಾರಿಸಿದಾಗ ಯಾವುದೇ ಮಾಲಿನ್ಯಯುಕ್ತ ನೀರು ಕೆರೆಗೆ ಹರಿದುಬರುತ್ತಿಲ್ಲ ಎಂದು ಹೇಳಿದ್ದರು ಆದರೆ ಸತ್ಯವನ್ನು ತಿಳಿದುಕೊಳ್ಳಲು ಸ್ಥಳೀಯರು, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಕೆರೆ ಪರಿಶೀಲನೆ ಮಾಡಲಾಯಿತು ಎಂದರು.

Sompura lake inspection by United Bengaluru and bbmp authorities

ಇಂದು ಅಷ್ಟಾಗಿ ತ್ಯಾಜ್ಯ ನೀರು ಕೆರೆಗೆ ಬರುತ್ತಿಲ್ಲ ಆದರೆ ಮಳೆಗಾಲದಲ್ಲಿ ವಿಪರೀತ ನೀರು ಬರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ವಾಸಿಸಲು ಕಷ್ಟವಾಗುತ್ತಿದೆ, ಹೀಗಾಗಿ ಆ ನೀರನ್ನು ಪರೀಕ್ಷೆಗೊಳಪಡಿಸಲಾಗಿದೆ ಶೀಘ್ರವೇ ರಿಪೋರ್ಟ್ ಲಭ್ಯವಾಗಲಿದ್ದು, ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

Sompura lake inspection by United Bengaluru and bbmp authorities

ಬಿಡಿಎ ಕೋಟ್ಯಂತರ ರೂಪಾಯಿ ಹಣ ಸುರಿದು ಕೆರೆ ಅಭಿವೃದ್ಧಿ ಮಾಡಿದ್ದರೂ ಕೂಡ ಅಲ್ಲಿನ ಗಿಡಗಂಟಿಗಳ ಹಾಗೆ ಇವೆ ಕೆರೆಯ ಸುತ್ತಮುತ್ತಲು ಲಾಂಟಾನಾ ಗಿಡಗಳು ಹಬ್ಬಿಕೊಂಡಿದೆ, ಅಭಿವೃದ್ಧಿಯ ಯಾವ ಕುರುಹು ಕೂಡ ಪತ್ತೆಯಾಗುತ್ತಿಲ್ಲ, ಬಿಬಿಎಂಪಿಯು ಈ ಕೆರೆಯ ಪುನರುಜ್ಜೀವನಕ್ಕೆ ನಾಲ್ಕು ಕೋಟಿ ರೂ ನೀಡುವುದಾಗಿ ಭರವಸೆ ನೀಡಿದ್ದಾರೆ, ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತದೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದರು.

English summary
Following Lokayukta direction KSPCB, BBMP and land records officials were conducted inspection at Sompura lake on Thursday. United Bengaluru had filed petition before the Lokayukta regarding lake encroachment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X