ಬೆಂಗಳೂರಿನ 41 ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಸಿಗ್ನಲಿಂಗ್ ವ್ಯವಸ್ಥೆ- ಇದರಿಂದ ಏನೆಲ್ಲಾ ಉಪಯೋಗ?
ಬೆಂಗಳೂರು, ಸೆಪ್ಟೆಂಬರ್, 12: ಸ್ಮಾರ್ಟ್ ಟೆಕ್ನಾಲಜಿ ವಿಚಾರದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಇನ್ನು ಇದೀಗ ನಗರದ ಟ್ರಾಫಿಕ್ ಸಿಗ್ನಲಿಂಗ್‌ಗಳಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಏನೆಲ್ಲಾ ಬದಲಾವಣೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ತರಲು 41 ಜಂಕ್ಷನ್‌ಗಳಲ್ಲಿ AI-ಸಕ್ರಿಯಗೊಳಿಸಲಾದ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಅಳವಡಿಕೆ ಮಾಡಲಾಗುತ್ತಿದೆ.

ಈ ಕ್ರಮವು ಟ್ರಾಫಿಕ್ ಸಿಗ್ನಲ್‌ಗಳನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸುವ ಯೋಜನೆಯ ಭಾಗವಾಗಿದೆ. ಟ್ರಾಫಿಕ್ ಕಂಟ್ರೋಲ್ ಮಾಡಲು ಇದು ಸಹಕಾರಿ ಆಗಿರಲಿದೆ. 41 ಜಂಕ್ಷನ್‌ಗಳಲ್ಲಿ, 7 ಹೊಸದಾಗಿ ಸಿಗ್ನಲ್‌ಗಳನ್ನು ಹೊಂದಿದ್ದು, 34 ಹಳೆಯ ಕ್ಯಾಮೆರಾ ಆಧಾರಿತ ಅಡಾಪ್ಟಿವ್ ಸಿಸ್ಟಮ್‌ಗಳಿಂದ ಅಪ್‌ಗ್ರೇಡ್ ಮಾಡಲಾಗಿದೆ.
ಡಿಸೆಂಬರ್ ಅಂತ್ಯದ ವೇಳೆಗೆ, ಬೆಂಗಳೂರಿನಲ್ಲಿ ಸಂಪೂರ್ಣ ಸ್ವಯಂಚಾಲಿತ AI-ಚಾಲಿತ ಸಿಗ್ನಲ್‌ಗಳು ಇರಲಿವೆ. ಬೆಂಗಳೂರಿನಲ್ಲಿ 165 AI ಜಂಕ್ಷನ್‌ಗಳನ್ನು ಮಾಡಲಾಗುತ್ತಿದೆ. ನಗರದಲ್ಲಿ 165 AI ಜಂಕ್ಷನ್‌ಗಳನ್ನು ಮಾಡಲಾಗುತ್ತಿದ್ದು, AI ಸಿಗ್ನಲ್ಗಳಿಂದಾಗಿ ವಾಹನ ಸವಾರರು ಹೆಚ್ಚು ಸಮಯ ಸಿಗ್ನಲ್ನಲ್ಲಿ ಕಾಯುವ ಪರಿಸ್ಥಿತಿ ಬರುವುದಿಲ್ಲ ಮತ್ತು ಟ್ರಾಫಿಕ್ ಸಮಸ್ಯೆ ಕೂಡ ಕಡಿಮೆ ಆಗಲಿದೆ.
ಇದರಲ್ಲಿ 136 ಜಂಕ್ಷನ್‌ಗಳನ್ನು ನವೀಕರಿಸಲಾಗುವುದು ಮತ್ತು 29 ಹೊಸ ಜಂಕ್ಷನ್‌ಗಳನ್ನು ನಿರ್ಮಾಣ ಮಾಡಲಾಗುವುದು. ಇದರಿಂದ ಪ್ರಾಥಮಿಕವಾಗಿ ಬೆಂಗಳೂರು ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಯಾವುದೇ ಪ್ರಮುಖ ಮೆಟ್ರೋ ಅಥವಾ ರಸ್ತೆ ಮೂಲಸೌಕರ್ಯ ಯೋಜನೆಗಳು ಅನುಷ್ಠಾನಕ್ಕೆ ಅಡ್ಡಿ ಆಗುವುದಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಹೇಳಿದ್ದಾರೆ.
ಮೂರು ಮಾದರಿಯ ಸಿಗ್ನಲ್‌ಗಳು
* ಮ್ಯಾನುಯಲ್ ಮೋಡ್: ಆಂಬ್ಯುಲೆನ್ಸ್‌ಗಳು ಅಥವಾ ವಿಐಪಿಗಳ ವಾಹನಗಳು ಬಂದ ಸಮಯದಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆಯನ್ನು ಅತಿಕ್ರಮಿಸಲು ಅನುವು ಮಾಡಿಕೊಡುವುದು.
* ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್: ಇದು ವಾಹನಗಳ ಸಂಖ್ಯೆ ಮತ್ತು ನೈಜ ಸಮಯದಲ್ಲಿ ಸಿಗ್ನಲ್ ಸಮಯವನ್ನು ಸರಿಹೊಂದಿಸಲು ಕಂಪ್ಯೂಟರ್ ಸಕ್ರಿಯಗೊಳಿಸಿದ ಕ್ಯಾಮೆರಾಗಳನ್ನು ಬಳಸಲಾಗುತ್ತದೆ.
* ATCS ಮೋಡ್: ಇದು ಬಹು ಜಂಕ್ಷನ್‌ಗಳಲ್ಲಿ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡುತ್ತದೆ.
ಈ ಸಿಂಕ್ರೊನೈಸೇಶನ್ ಅನ್ನು ಮೊದಲು ಕೆಆರ್ ರಸ್ತೆ ಮತ್ತು ರೋಸ್ ಗಾರ್ಡನ್ ರಸ್ತೆಯಲ್ಲಿ ಅಳವಡಿಕೆ ಮಾಡಲಾಯಿತು ಮತ್ತು ಈಗ VAC ಮೋಡ್ ಅನ್ನು ಹಡ್ಸನ್ ವೃತ್ತದಲ್ಲೂ ಅಳವಡಿಕೆ ಮಾಡಲಾಗುತ್ತಿದೆ.












Click it and Unblock the Notifications