ವೀಕ್ಲಿ ಆಫ್‌ ಇಲ್ಲದೆ ಆರು ಬೋಗಿಯ ಮೆಟ್ರೋ ಭಾನುವಾರವೂ ಸೇವೆ ನೀಡಿದೆ

Recommended Video

      ಆರು ಬೋಗಿಯ ಮೆಟ್ರೋ ಭಾನುವಾರವೂ ಸೇವೆ ನೀಡಿದೆ | Oneindia kannada

      ಬೆಂಗಳೂರು, ಜೂನ್ 25 : ಆರು ಬೋಗಿಗಳ ಮೆಟ್ರೋ ಸುಂದರಿಗೆ ಟೆಕ್ಕಿಗಳ ರೀತಿ ವೀಕ್ಲಿ ಆಫ್. ಅಂದ್ರೆ, ಐದು ದಿನಗಳ ಕಾಲ, ಸೋಮವಾರದಿಂದ ಶುಕ್ರವಾರದವರೆಗೆ ಮೈಮುರಿಯುವಂತೆ ದುಡಿದು, ಶನಿವಾರ ಮತ್ತು ಭಾನುವಾರ ವಿಶ್ರಾಂತಿ!

      ಆದರೆ, ಶುಕ್ರವಾರದಿಂದ ತನ್ನ ಸೇವೆ ಆರಂಭಿಸಿರುವ ಆರು ಬೋಗಿಗಳ ಮೆಟ್ರೋ ಅನಿವಾರ್ಯವಾಗಿ ಭಾನುವಾರವೂ ಕೆಲಸ ಮಾಡುವಂತಾಗಿದೆ. ಈ ಮೆಟ್ರೋ ಭಾನುವಾರವೂ ಕೂಡ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಐದು ಟ್ರಿಪ್‌ಗಳನ್ನು ನಡೆಸಿದೆ.

      ಸೋಮವಾರದಿಂದ ಶುಕ್ರವಾರದವರೆಗೆ ಪೀಕ್‌ ಸಮಯದಲ್ಲಿ ಮಾತ್ರ ಆರು ಬೋಗಿಯ ಮೆಟ್ರೋ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಭಾನುವಾರ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಕೂಡ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶದಿಂದ ಆರು ಬೋಗಿಯ ರೈಲನ್ನು ಕಾರ್ಯಾಚರಣೆಗೊಳಿಸಲಾಯಿತು.

      ಬೆಳಗ್ಗೆ 11.18ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಟ ರೈಲು ಸಂಜೆ 5.21ರವರೆಗೆ ಸೇವೆ ನೀಡಿತು. ನಂತರ 5.32ರಿಂದ ಮತ್ತೆ ಸೇವೆ ಆರಂಭವಾಗಿಯಿತು. 6.57ಕ್ಕೆ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ರೈಲು ಆ ದಿನದ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿತು. ಸಂಜೆ 6.58ಕ್ಕೆ ಬೈಯಪ್ಪನಹಳ್ಳಿಗೆ ಕಳುಹಿಸಿ ನಿರ್ವಹಣೆ ಮಾಡಲಾಯಿತು.

      Six coaches metro ran on Sunday too

      ಸದ್ಯ ಮೆಟ್ರೊ ಬಳಿಯಿರುವ 50 ರೈಲುಗಳ ಪೈಕಿ ಒಂದು ರೈಲಿಗೆ ಬೆಮೆಲ್ ಸಂಸ್ಥೆ ನೀಡಿದ 3 ಬೋಗಿಗಳನ್ನು ಸೇರಿಸಿ 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರತಿದಿನ ಪೀಕ್ ಅವರ್ ನಲ್ಲಿ 12 ಟ್ರಿಪ್ ಗಳಲ್ಲಿ ಈ 6 ಬೋಗಿಗಳ ರೈಲನ್ನು ಬಳಸಿಕೊಳ್ಳಲು ಮೆಟ್ರೊ ನಿಗಮ ನಿರ್ಧರಿಸಿದೆ. ರೈಲ್ವೇ ಸುರಕ್ಷತಾ ಆಯುಕ್ತರು 6 ಬೋಗಿಗಳ ರೈಲು ಗರಿಷ್ಠ 80 ಕಿಲೋ ಮೀಟರ್ ಸ್ಪೀಡ್ ನಲ್ಲಿ ಸಂಚರಿಸಲು ಅನುಮತಿ ನೀಡಿದ್ದಾರೆ.

      2019ರ ಜೂನ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ರೈಲುಗಳೆಲ್ಲಾ 6 ಬೋಗಿಗಳಾದರೆ ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯ ಹೆಚ್ಚಾಗಲಿದೆ. ಆಗಸ್ಟ್ ನಲ್ಲಿ ಮತ್ತೊಂದು ಸೆಟ್ ಕೋಚ್ ಬೆಮೆಲ್ ನಿಂದ ಮೆಟ್ರೊ ನಿಗಮಕ್ಕೆ ಹಸ್ತಾಂತರವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+