Tomato Prices: ಬೆಂಗಳೂರಿನಲ್ಲಿ ಒಂದೇ ಒಂದು ಟೊಮೆಟೊ ಮಾರಾಟ: ಇದರ ಬೆಲೆ ಎಷ್ಟು ಗೊತ್ತೇ? ಕೇಳಿದರೆ ಗಾಬರಿ ಗ್ಯಾರಂಟಿ

ಬೆಂಗಳೂರು, ಆಗಸ್ಟ್‌ 05: ಭಾರತದಾದ್ಯಂತ ಟೊಮೆಟೊ ಬೆಲೆ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಒಂದು ಕಿಲೋ ಟೊಮೆಟೊ ಬೆಲೆ 200 ರೂಪಾಯಿಗಳಿಗೂ ಅಧಿಕವಾಗಿದೆ. ಮಂದಿನ ಕೆಲ ದಿನಗಳಲ್ಲಿ ಇದು 300 ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಚಿತ್ರ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನಲ್ಲಿ ಕಿಲೋಗಟ್ಟಲೇ ಮಾರಲಾಗುತ್ತಿದ್ದ ಟೊಮೊಟೊವನ್ನು ಒಂದು.. ಎರಡು... ಮೂರರಂತೆ ಮಾರಾಟ ಮಾಡಲಾಗುತ್ತಿದೆ. ಒಂದು ಟೊಮೆಟೊ ಬೆಲೆಯನ್ನು ಕೇಳಿದರೂ ನಿಮಗೆ ಗಾಬರಿಯಾಗುತ್ತದೆ. ಈ ವರದಿ ಓದಿ.

ಒಂದು ಕಿಲೋ ಟೊಮೆಟೊ 300 ರೂಪಾಯಿ ತಲುಪುವ ಸಾಧ್ಯತೆ

ಸಗಟು ವ್ಯಾಪಾರಿಗಳ ಪ್ರಕಾರ, ಒಂದು ಕಿಲೋ ಟೊಮೆಟೊ ಬೆಲೆ ಶೀಘ್ರದಲ್ಲೇ 300 ರೂಪಾಯಿಗಳನ್ನು ತಲುಪುವ ಸಾಧ್ಯತೆ ಇದೆ. ಸಗಟು ಮಾರುಕಟ್ಟೆಯಲ್ಲಿ ಕಿಲೋಗೆ 160 ರೂಪಾಯಿ ಇದ್ದ ಟೊಮೆಟೊ ಬೆಲೆ 220 ರೂಪಾಯಿಗೆ ಏರಿಕೆಯಾಗಿದೆ. ಇದರ ಚಿಲ್ಲರೆ ಮಾರಾಟದ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

Single tomato sold out in Bengaluru Market: Do you know how much it costs?

ಇದೇ ಸಂದರ್ಭದಲ್ಲಿ ಮದರ್ ಡೈರಿಯು ತನ್ನ ಸಫಲ್ ರೀಟೇಲ್ ಸ್ಟೋರ್‌ಗಳ ಮೂಲಕ ಪ್ರತಿ ಕಿಲೋ ಟೊಮೆಟೊವನ್ನು 259 ರೂಪಾಯಿಗೆ ಮಾರಾಟ ಮಾಡಲು ಆರಂಭಿಸಿದೆ.

ಟೊಮೆಟೊ ಉತ್ಪಾದಿಸುವ ಪ್ರಮುಖ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಟೊಮೆಟೊ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆಗಳು ಮುಗಿಲಿಗೆ ಮುಟ್ಟಿವೆ.

Single tomato sold out in Bengaluru Market: Do you know how much it costs?

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ತರಕಾರಿ ಸಾಗಣೆಗೆ ಸಾಕಷ್ಟು ತೊಂದರೆಯಾಗಿದೆ. ಟೊಮೆಟೊ ರಫ್ತು ಮಾಡಲು ಆರರಿಂದ ಎಂಟು ಗಂಟೆಗಳಷ್ಟು ತಡವಾಗುತ್ತಿದೆ. ಇದರಿಂದಾಗಿ ಟೊಮೆಟೊ ಬೆಲೆ ಪ್ರತಿ ಕಿಲೋಗೆ ಸುಮಾರು 300 ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಸಗಟು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ರಫ್ತು ಮಾಡುವ ಟೊಮೆಟೊ ಮತ್ತು ಇತರ ತರಕಾರಿಗಳ ಗುಣಮಟ್ಟ ಕುಸಿದಿದೆ ಎಂದೂ ಅವರು ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಜುಲೈನಲ್ಲಿ ಭಾರಿ ಮಳೆಯಾಗಿದ್ದು, ಬೆಳೆ ಹಾನಿಯಾಗಿದೆ.

Single tomato sold out in Bengaluru Market: Do you know how much it costs?

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಕಾರಣ ಕಟಾವಿಗೆ ಬಂದಿದ್ದ ಟೊಮೆಟೊ ರೈತರ ಕೈಸೇರದೇ ಕೊಳೆತು ಹೋಗಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೊಗೆ ಪೂರೈಕೆ ಮತ್ತು ಬೇಡಿಕೆ ಎರಡೂ ಕಡಿಮೆಯಾಗಿದೆ. ಕಾರಣ, ಮಾರಾಟಗಾರರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಟೊಮೆಟೊ ಬೆಲೆ ಶುಕ್ರವಾರ ಕೆಜಿಗೆ 203 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಒಂದು ಟೊಮೆಟೊ ಮಾರಾಟ

ಬೆಂಗಳೂರಿನಲ್ಲಿ ಕೆಜಿಗಟ್ಟಲೇ ಮಾರಾಟ ಮಾಡಲಾಗುತ್ತಿದ್ದ ಟೊಮೆಟೊವನ್ನು ಒಂದು.. ಎರಡು... ಮೂರರಂತೆ ಮಾರಾಟ ಮಾಡಲಾಗುತ್ತಿದೆ. ಒಂದು ಟೊಮೆಟೊದ ತೂಕವನ್ನು ಅಳೆದು ಒಂದು ಕೆಜಿ ಬೆಲೆಗೆ ಹೋಲಿಸಿ ಲೆಕ್ಕಹಾಕಲಾಗುತ್ತಿದೆ. 0.120 ಕಿಲೋಗ್ರಾಂ ಇರುವ ಒಂದು ಟೊಮೆಟೊ ಬೆಲೆ 17 ರೂಪಾಯಿ ಆಗಿದೆ. ಇದರ ಬಿಲ್‌ ಹೊಂದಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಲ್ಲರ ಗಾಬರಿ ಹಾಗೂ ಅಚ್ಚರಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+