ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಿಗೈಯಲ್ಲಿ ಬಂದ್ರೂ ಬೆಂಗಳೂರಿನಲ್ಲಿ ಬದುಕೋಕೆ ಇಲ್ಲೊಂದು ಸಿಂಪಲ್ ದಾರಿ!

|
Google Oneindia Kannada News

ಬೆಂಗಳೂರು, ಜೂ. 11: ಬೆಂಗಳೂರಿಗೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸಿ ಬರುವ ಎಷ್ಟೋ ಯುವಕರು ತಿಂಗಳಾನುಗಟ್ಟಲೇ ರಾಜಧಾನಿಯಲ್ಲಿ ಅಲೆಯುತ್ತಾರೆ. ಉದ್ಯೋಗ ಮಾಹಿತಿ ಕೇಂದ್ರಗಳ ಮೊರೆ ಹೋಗಿ ಹಣ ಪಾವತಿಸಿ ಕೈ ಸುಟ್ಟುಕೊಳ್ಳುತ್ತಾರೆ. ಇವತ್ತಿನ ತಂತ್ರಜ್ಞಾನ ಇದೆಲ್ಲದ್ದಕ್ಕೂ ತಿಲಾಂಜಲಿ ನೀಡಿದೆ. ಬರಿಗೈಯಲ್ಲಿ ಬರುವವರಿಗೂ ಬದುಕುವ ಅವಕಾಶವನ್ನು ತಂತ್ರಜ್ಞಾನ ಒದಗಿಸಿಕೊಟ್ಟಿದೆ. ಬರಿಗೈಯಲ್ಲಿ ಬಂದ ಎಷ್ಟೋ ಯುವಕರು ಈ ತಂತ್ರಜ್ಞಾನ ಹುಟ್ಟಿಹಾಕಿರುವ ಅವಕಾಶ ಬಳಿಸಿಕೊಂಡು ಪುಟ್ಟ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ನಾಂದಿ ಹಾಡಿರುವುದು ಸ್ವಿಗ್ಗಿ ಹಾಗೂ ಯುಲು ಬ್ಯಾಟರಿ ಚಾಲಿತ ಸೈಕಲ್ !

ಸ್ವಿಗ್ಗಿ ಆಹಾರ ಡೆಲಿವರಿ ಮಾಡುವ ಸಂಸ್ಥೆ. ಎಷ್ಟೋ ಯುವಕರಿಗೆ ಅರೆಕಾಲಿಕ ಮತ್ತು ಪೂರ್ಣಾವಧಿ ಕೆಲಸ ಕೊಟ್ಟಿದೆ. ದುಡಿಮೆಗೆ ತಕ್ಕ ಕೈತುಂಬಾ ಕಾಸು ಬರುತ್ತದೆ. ಆದರೆ ಈ ಸ್ವಿಗ್ಗಿ ಡೆಲಿವರಿ ಮಾಡಬೇಕಾದರೆ ದ್ವಿಚಕ್ರ ವಾಹನ ಇರಲೇಬೇಕು. ಅದನ್ನು ಯುಲು ಇಲ್ಲವಾಗಿಸಿದೆ. APP ಮೂಲಕ 100 ರೂಪಾಯಿ ಪಾವತಿಸಿದರೆ ದಿನ ಪೂರ್ತಿ ಓಡಾಡಲು ಯುಲು ಬ್ಯಾಟರಿ ಚಾಲಿತ ಸೈಕಲ್ ನಿಮಗೆ ಬೀದಿಯಲ್ಲೇ ಸಿಗುತ್ತದೆ. ಹೀಗೆ ಆಪ್ ಮೂಲಕ ಬಾಡಿಗೆ ಪಾವತಿಸಿ ಸೈಕಲ್ ಪಡೆಯುವ ಮಂದಿ ಅದರಿಂದ ಸ್ವಿಗ್ಗಿ ಡೆಲಿವರಿ ಮಾಡುತ್ತಾರೆ.

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪರಿಸರ ಸ್ನೇಹಿ ಇ-ಬೈಕ್ ಲೋಕಾರ್ಪಣೆಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪರಿಸರ ಸ್ನೇಹಿ ಇ-ಬೈಕ್ ಲೋಕಾರ್ಪಣೆ

ಒಂದು ಡೆಲಿವರಿಗೆ ಇಷ್ಟು ಅಂತ ಗಳಿಕೆ ಮಾಡುತ್ತಾರೆ. ಎಲ್ಲವೂ ಕಳೆದು ದಿನಕ್ಕೆ ಸರಾಸರಿ 500 ರಿಂದ 600 ರೂ ಸಂಪಾದನೆ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಐದು ರೂಪಾಯಿ ಹೂಡಿಕೆ ಮಾಡುವ ಅಗತ್ಯವಿಲ್ಲ. ಇನ್ನೊಬ್ಬರ ಕೈ ಅಡಿಯಾಳಾಗಿ ದುಡಿಯುವ ಪ್ರಮೇಯವೂ ಇಲ್ಲ. ಕೆಲಸ ಕೇಳಿಕೊಂಡು ಹೋಗಬೇಕು ಎನ್ನುವ ಉಸಾಬರಿಯೂ ಇಲ್ಲ. ಇಂತದೊದ್ದು ನೆಮ್ಮದಿ ಜೀವನ ಕಟ್ಟಿಕೊಳ್ಳಲಿಕ್ಕೆ ಅನೇಕ ಯುವಕರಿಗೆ ಸ್ವಿಗ್ಗಿ ಮತ್ತು ಯುಲು ಬೈಸಿಕಲ್ ಕಾಂಬಿನೇಷನ್ ಆಪ್‌ಗಳು ಹೊಸ ಮನ್ವಂತರಕ್ಕೆ ನಾಂದಿ ಹಾಡಿವೆ.

Simple way earning way for unemployment youths in Bengaluru!

ಇನ್ನು ಕೈಯಲ್ಲಿ ಸ್ಮಾರ್ಟ್ ಪೋನ್ ಒಂದಿದ್ದರೆ ಸಾಕು ಯುಲು ಸೈಕಲ್ ನ್ನು ಪಾರ್ಕಿಂಗ್ ಲಾಟ್ ನಲ್ಲಿ ಪಡೆಯಬಹುದು. ಇರುವ ಜಾಗದಿಂದಲೇ ಸ್ವಿಗ್ಗಿ ಫುಡ್ ಡೆಲಿವರಿ ಆರಂಭವಾಗುತ್ತದೆ. ಈ ಕೊರೊನಾ ಲಾಕ್ ಡೌನ್ ಸಮಯದಲ್ಲಂತೂ ಇನ್ನಿಲ್ಲದ ಬೇಡಿಕೆ ಬಂದಿದೆ. ಹೀಗಾಗಿ ಕೆಲಸ ಕಳೆದುಕೊಂಡವರು, ಖಾಸಗಿ ಸಂಸ್ಥೆಗಳಲ್ಲಿ ದುಡಿಮೆ ಮಾಡುವರು ಅರೆಕಾಲಿಕ ಉದ್ಯೋಗವನ್ನಾಗಿ ಈ ಎರಡೂ ಕಾಂಬಿನೇಷನ್ ನಿಂದಲೇ ಸಂಪಾದನೆಗೆ ಇಳಿದಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಸಾವಿರಾರು ಯುವಕರು ಇದೀಗ ಸ್ವಿಗ್ಗಿ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಬೈಕ್ ಇಲ್ಲದಿದ್ದರೂ ಯುಲು ಸೈಕಲ್ ಬಾಡಿಗೆ ಪಡೆದು ಚಾಲನೆ ಮಾಡುತ್ತಿದ್ದಾರೆ.

ಬರೀ ಕೈಯಲ್ಲಿ ಬೆಂಗಳೂರಿಗೆ ಬಂದ ಯುವಕನೊಬ್ಬ ಯುಲು ಸೈಕಲ್ ಬಾಡಿಗೆ ಪಡೆದು ಸ್ವಿಗ್ಗಿ, ಜೊಮಾಟೋ ಫುಡ್ ಡೆಲಿವರಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ. ಸುಲಭ ಕೆಲಸ ಗಿಟ್ಟಿಸಿಕೊಂಡು ಜೀವನ ರೂಪಿಸಿಕೊಂಡಿರುವ ನಾಗರಾಜು, ಒನ್ಇಂಡಿಯಾ ಕನ್ನಡ ಜತೆ ತನ್ನ ಅನುಭವ ಹಂಚಿಕೊಂಡ. ಎಷ್ಟೋ ಮಂದಿಗೆ ಈ ಯುಲು ಸೈಕಲ್ ಜೀವನಾಧಾರವಾಗಿದೆ. ನೂರು ರೂಪಾಯಿ ಕಟ್ಟಿದರೆ ಸಾಕು ದಿನ ಪೂರ್ತಿ ಬ್ಯಾಟರಿ ಚಾಲಿತ ಸೈಕಲ್‌ನಲ್ಲಿ ಓಡಾಡಬಹುದು.

Simple way earning way for unemployment youths in Bengaluru!

''ಬೈಕ್, ಪೊಲೀಸರ ಫೈನ್ ಯಾವ ಗೊಡವೇ ಇರುವುದಿಲ್ಲ. ಸ್ವಿಗ್ಗಿ ಫುಡ್ ಡೆಲಿವರಿ ಮಾಡುತ್ತೇನೆ. ದಿನಕ್ಕೆ ಎಂಟ ರಿಂದ ಹತ್ತು ಕಡೆ ಡೆಲಿವರಿ ಮಾಡುತ್ತೇನೆ. ಸರಾಸರಿ 700 ರೂ.ನಿಂದ 900 ರೂ.ವರೆಗೂ ಸಂಪಾದನೆ ಮಾಡುತ್ತೇನೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿ ಬರುವ ಹಣ ಸಾಕಾಗುವುದಿಲ್ಲ. ಅರೆ ಕಾಲಿಕವಾಗಿ ಫ್ರೀ ಇರುವ ಟೈಮ್‌ನಲ್ಲಿ ನಾನು ಈ ಕೆಲಸ ಮಾಡುತ್ತೇನೆ. ರಜೆ ದಿನಗಳಲ್ಲಿ ಪೂರ್ತಿ ಈ ಕೆಲಸವೇ ಮಾಡುತ್ತೇನೆ. ಎಲ್ಲಾ ವೆಚ್ಚ ಹೋಗಿ ಕನಿಷ್ಠ 500 ರೂ. ಅಂತಲೂ ಉಳಿಸುತ್ತೇನೆ. ಇಷ್ಟವಿಲ್ಲದಿದ್ದರೆ ಸೈಕಲ್ ಬಿಟ್ಟು ಹೋಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಕೆಲಸ ಏನೂ ಇಲ್ಲ ಎಂದು ಭಾವಿಸಿ ಹುಡುಕುವ ಬದಲಿಗೆ ಈ ರೀತಿ ಕೆಲಸ ಮಾಡಿ ನಾಲ್ಕು ಕಾಸು ದುಡಿಮೆ ಮಾಡಲಿಕ್ಕೆ ದೊಡ್ಡ ಅವಕಾಶವಿದು. ಯಾರ ಬಳಿಯೂ ಕೆಲಸ ಕೇಳಿಕೊಂಡು ಕೈ ಚಾಚುವ ಅಗತ್ಯವಿಲ್ಲ. ಎಷ್ಟೋ ಮಂದಿ ಈ ಕೆಲಸ ಮಾಡಿ ದುಡಿಮೆ ಮಾಡುತ್ತಿದ್ದಾರೆ'' ಎಂದು ನಾಗರಾಜ್ ತನ್ನ ಅನುಭವ ಹಂಚಿಕೊಂಡರು.

Simple way earning way for unemployment youths in Bengaluru!

Recommended Video

Kamal Pant : ಇನ್ಮುಂದೆ ಯಾರಿಗೂ ಹೋಡಿಯೋ ಹಾಗಿಲ್ಲ! | Oneindia Kannada

ಐದು ಲಕ್ಷ ರೂ. ಹೂಡಿಕೆ ಮಾಡಿ ಕಾರ್ ತಗೊಂಡು ಕ್ಯಾಬ್ ಓಡಿಸುವುದಕ್ಕಿಂತಲೂ ಈ ಕೆಲಸವೇ ಒಳಿತು. ಲಕ್ಷಾಂತರ ಬಂಡವಾಳ ಹೂಡಿಕೆ ಮಾಡಿ ಸಾಲ ತೀರಿಸಿಕೊಂಡು ಜೀವ ಸವೆಸುವ ಬದಲಿಗೆ ಇದು ತುಂಬಾ ಒಳಿತು. ಒಂದು ರೂಪಾಯಿ ಹೂಡಿಕೆ ಮಾಡುವ ಹಾಗಿಲ್ಲ. ದಿನಕ್ಕೆ ನೂರು ರೂಪಾಯಿ ಬಾಡಿಗೆ ಹಾಕಿ ಅದನ್ನು ದುಡಿಮೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಲೈಫ್ ಲೀಡ್ ಮಾಡೋಕೆ ಇದಕ್ಕಿಂತೂ ಬೇರೆ ಬೇಕಿಲ್ಲ ಎನ್ನುತ್ತಾರೆ ನಾಗರಾಜ್. ಇವತ್ತಿನ ತಂತ್ರಜ್ಞಾನ ಇಂತಹ ಹೊಸ ರೀತಿಯ ಉದ್ಯೋಗ ಅವಕಾಶಕ್ಕೆ ನಾಂದಿ ಹಾಡಿದೆ.

English summary
Yulu bicycle, Swiggy food delivery simple way to earn money in Bengauru without any investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X