ಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯ

ಬೆಂಗಳೂರು, ಜುಲೈ 11: ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದ್ದಾರೆ.

Recommended Video

      Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

      ಕೊರೊನಾ ವೈರಸ್ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮ, ಯೋಜನೆ, ಖರ್ಚಿನ ಕುರಿತು ಲೆಕ್ಕ ಕೊಡಿ ಎಂದು ಅಭಿಯಾನ ಆರಂಭಿಸಿದ್ದಾರೆ. 'ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

      ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, 'ಸಿದ್ದರಾಮಯ್ಯ ಬಳಿ ಯಾವುದೇ ದಾಖಲೆ ಇಲ್ಲ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ವಿಧಾನಸೌಧದಲ್ಲಿ ಲೆಕ್ಕ ಕೊಡುತ್ತೇವೆ' ಎನ್ನುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನೆ ಬಿಡದ ಸಿದ್ದರಾಮಯ್ಯ ಇಂದು ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಆರು ಲೆಕ್ಕದ ವಿವರಣೆ ಕೇಳಿದ್ದಾರೆ. ಮುಂದೆ ಓದಿ....

      ಲೆಕ್ಕ ಕೊಡಿ, ಸಿದ್ದರಾಮಯ್ಯ ಪ್ರಶ್ನೆ 1

      ರಾಜ್ಯದ ಜನ ಲೆಕ್ಕ ಕೇಳುತ್ತಿದ್ದಾರೆ, ಲೆಕ್ಕ ಕೊಡಿ ಎಂಬ ಅಭಿಮಾನ ಆರಂಭಿಸಿರುವ ಸಿದ್ದರಾಮಯ್ಯ ಇಂದು ರಾಜ್ಯ ಸರ್ಕಾರದ ಮುಂದೆ ಆರು ಪ್ರಶ್ನೆಗಳನ್ನಿಟ್ಟಿದ್ದಾರೆ. ಅದಕ್ಕೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದ್ದಾರೆ.

      1. ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೂ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು? ಕೇಂದ್ರ ಸರ್ಕಾರ ಎಷ್ಟು ನೀಡಿದೆ?

      ಲೆಕ್ಕ ಕೊಡಿ, ಸಿದ್ದರಾಮಯ್ಯ ಪ್ರಶ್ನೆ 2

      ಲೆಕ್ಕ ಕೊಡಿ, ಸಿದ್ದರಾಮಯ್ಯ ಪ್ರಶ್ನೆ 2

      2. ಯಾವ ಯಾವ ಇಲಾಖೆ ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಿವೆ?

      3. ಪಿಪಿಇ ಕಿಟ್, ಟೆಸ್ಟ್ ಕಿಟ್, ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು? ನೀವು ಪ್ರತಿಯೊಂದನ್ನು ಯಾವ ದರಕ್ಕೆ ಖರೀದಿಸಿದ್ದೀರಾ? ಯಾವ ಕಂಪನಿಗಳಿಂದ ಖರೀದಿಸಿದ್ದೀರಾ?

      ಲೆಕ್ಕ ಕೊಡಿ, ಸಿದ್ದರಾಮಯ್ಯ ಪ್ರಶ್ನೆ 4

      ಲೆಕ್ಕ ಕೊಡಿ, ಸಿದ್ದರಾಮಯ್ಯ ಪ್ರಶ್ನೆ 4

      4. ಈವರೆಗೂ ಎಷ್ಟು ಪುಡ್ ಕಿಟ್ ಎಷ್ಟು ಪುಡ್ ಪ್ಯಾಕೆಟ್ ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ?

      ತಾಲ್ಲೂಕುವಾರು, ವಾರ್ಡ್‌ವಾರು ಲೆಕ್ಕ ಕೊಡಿ?

      - ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಪುಡ್ ಕಿಟ್ ಕೊಟ್ಟಿದ್ದೀರಿ? ಏನೇನು ಕೊಟ್ಟಿದ್ದೀರಿ? ಪ್ರತಿ ಕಿಟ್‌ಗೆ ಖರ್ಚು ಮಾಡಿದ ಹಣ ಎಷ್ಟು?

      ಲೆಕ್ಕ ಕೊಡಿ, ಸಿದ್ದರಾಮಯ್ಯ ಲೆಕ್ಕ 5

      ಲೆಕ್ಕ ಕೊಡಿ, ಸಿದ್ದರಾಮಯ್ಯ ಲೆಕ್ಕ 5

      5. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಘೋಷಿಸಿರುವ ಪ್ಯಾಕೇಜುಗಳು ಯಾವುವು? ಇದುವರೆಗೂ ಯಾವ ಯಾವ ವೃತ್ತಿಯವರಿಗೆ, ಯಾವ ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?

      6. ಕೊರೊನಾ ಸಂತ್ರಸ್ಥರ ಆರೈಕಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ ಈ ಎಲ್ಲದರ ಸಂಪೂರ್ಣ ಲೆಕ್ಕ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+