ಸಿದ್ದರಾಮಯ್ಯ V/S ಡಿವಿ ಸದಾನಂದ ಗೌಡ ಟ್ವಿಟ್ಟರ್ ವಾರ್

Recommended Video

      ಸಿದ್ದರಾಮಯ್ಯ ಹಾಗು ಸದಾನಂದ ಗೌಡ ನಡುವೆ ಟ್ವಿಟ್ಟರ್ ಯುದ್ಧ ಶುರುವಾಯ್ತು | Oneindia Kannada

      ಬೆಂಗಳೂರು, ನವೆಂಬರ್ 17: ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತೆ ಟ್ವಿಟ್ಟರ್ ವಾರ್ ಆರಂಭಿಸಿದ್ದಾರೆ, ಸಿದ್ದರಾಮಯ್ಯ ಹಾಗೂ ಡಿವಿ ಸದಾನಂದ ಗೌಡರು ಸರ್ಕಾರ ರಚನೆ ಹಾಗೂ ಲೋಕಸಭಾ ಚುನಾವಣೆ ಕುರಿತು ಮತ್ತೊಮ್ಮೆ ಅಕಾಡಕ್ಕಿಳಿದಿದ್ದಾರೆ.

      ನವೆಂಬರ್ 16ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನರು ಬೆಂಬಲ ನೀಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.

      ಕರಾವಳಿ ಕೋಮುವಾದದ ಪ್ರಯೋಗಶಾಲೆಯಾಗಿದೆ

      ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ, ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ.

      ಹಳೆಯ ಕಂಠಪಾಠವನ್ನೇ ಹೇಳಿದರೆ ಜನರು ಒಪ್ಪಲ್ಲ

      ಅದಕ್ಕೆ ತಿರುಗೇಟು ನೀಡುವಂತೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ಮತ್ತೊಂದು ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಅವರೇ ಅದೇ ರೆಕಾರ್ಡ್ ಕಂಠ ಪಾಠ ಮಾಡಿಕೊಂಡು ಎಷ್ಟು ದಿನ ಸುತ್ತಬೇಕು ಎಂದುಕೊಂಡಿದ್ದೀರಾ ಚಾಮುಂಡೇಶ್ವರಿಯ ಮತಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿ ಜನ ನಿಮ್ಮ ಕಂಠಪಾಠವನ್ನು ಒಪ್ಪುತ್ತಾರಾ, ಕರಾವಳಿ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ ಎಂದು ಖಾರವಾಗಿಯೇ ಬರೆದುಕೊಂಡಿದ್ದಾರೆ.

      ಜೆಡಿಎಸ್ ಜೊತೆ ಸರ್ಕಾರ ರಚಿಸಿದ್ದಾಗ ನಿಮಗೆ ಬಹುಮತ ಇತ್ತೇ?

      ಇದಕ್ಕೆ ಸಿದ್ದರಾಮಯ್ಯ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಕರಾವಳಿ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ. ಎಂದು ಸರಿಯಾಗಿ ಹೇಳಿದ್ದೀರಿ, ನೀವು ಉಡುಪಿ-ಪುತ್ತೂರು ಬಿಟ್ಟು ಬೆಂಗಳೂರಿಗೆ ಬಂದು ಸೇರಿಕೊಂಡಿದ್ದು ಕರಾವಳಿಯವರಿಗೆ ಖಂಡಿತ ಗೊತ್ತಿದೆ. ಜೆಡಿಎಸ್ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದಾಗ ನಿಮ್ಮ ಪಕ್ಷಕ್ಕೆ ಬಹುಮತ ಇತ್ತಾ ಗೌಡ್ರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಹೀಗೆಯೇ ಟ್ವೀಟ್ ಮುಂದುವರೆದಿದೆ.

      ಟ್ವಿಟ್ಟಿಗರ ಪ್ರತಿಕ್ರಿಯೆ

      ಹಾಗಾದ್ರೆ,ಜೆ ಡಿ ಎಸ್ ಜೊತೆ ಸೇರೋದು ತಪ್ಪು ಅಂತಾ ಪರೋಕ್ಷವಾಗಿ ಹೇಳ್ತಿದೀರಿ.ಒಳ್ಳೆಯದು.!! ಕುಮಾರಸ್ವಾಮಿ ಅವರ ಅಪ್ಪನಾಣೆಗೂ ಮುಖ್ಯ ಮಂತ್ರಿ ಆಗಲ್ಲ ಅಂತಿದ್ದೋರು ಅದೇ ಅಪ್ಪನ ಮನೆಗೆ ಹೋಗಿ ಸಿ ಎಂ ಆಗಿ ಅಂತಾ ಹೇಳಿದ ಮಹಾನುಭಾವರು ಯಾರು ಸರ್ ?ಜೆ ಡಿ ಎಸ್ ಅಂದ್ರೆ ಸಂಘ ಪರಿವಾರ ಅಂದಿದ್ದು ಕೂಡಾ ನೀವೇ ಸರ್..ಎಂದು ರಾಜ್ ಅವರು ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+