Shreyanka Patil: ವಿದ್ಯಾರ್ಥಿ ಭವನದ ದೋಸೆ ಮುರಿದ ಶ್ರೇಯಾಂಕಾ ಪಾಟೀಲ್
ಬೆಂಗಳೂರು, ಮೇ. 12: ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಚಾಂಪಿಯನ್ ಪಟ್ಟ ಪಡೆದ ಬಳಿಕ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಶ್ರೇಯಾಂಕಾ ಪಾಟೀಲ್. ಕನ್ನಡತಿ ಶ್ರೇಯಾಂಕಾ ಪಾಟೀಲ್ ಸದ್ಯ ಟೀಮ್ ಇಂಡಿಯಾದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಆಟಗಾರ್ತಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಶ್ರೇಯಾಂಕಾ ಪಾಟೀಲ್, ಆರ್‌ಸಿಬಿ ತಂಡದ ಭರವಸೆಯ ಆಟಗಾರ್ತಿಯಾಗಿದ್ದಾರೆ. ಜನರಿಗೆ ಈ ಕನ್ನಡತಿಯ ಬಗ್ಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಇಂದಿಗೂ ಆಕೆ ಏನೇ ಮಾಡಿದರು ಸುದ್ದಿಯಾಗುತ್ತಿದೆ. ಇವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಜನ ಬಯಸುತ್ತಿದ್ದಾರೆ. ಇದರ ನಡುವೆ ಶ್ರೇಯಾಂಕಾ ಪಾಟೀಲ್ ಬೆಂಗಳೂರಿನ ಫೇಮಸ್ ದೋಸೆ ಸ್ಪಾಟ್ ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ.

ವಿದ್ಯಾರ್ಥಿ ಭವನದಲ್ಲಿ ದೋಸೆ ರುಚಿ ಸವಿದ ಶ್ರೇಯಾಂಕಾ ಪಾಟೀಲ್
ಸಿಲಿಕಾನ್ ಸಿಟಿಯ ಫೇಮಸ್ ಮಸಾಲೆ ದೋಸೆ ಕೇಂದ್ರಗಳಲ್ಲಿ ಮೊದಲ ಸಾಲಿನಲ್ಲಿ ಇದೆ ವಿದ್ಯಾರ್ಥಿ ಭವನ. ಬೆಂಗಳೂರಿಗರು ಒಂದಲ್ಲ ಒಂದು ಸಲಿ ಈ ದೋಸೆ ಕೇಂದ್ರಕ್ಕೆ ಭೇಟಿ ನೀಡಿಯೇ ನೀಡಿರುತ್ತಾರೆ. ಬೆಂಗಳೂರಿಗರ ನೆಚ್ಚಿನ ಬ್ರೇಕ್‌ಫಾಸ್ಟ್ ಜಾಗಕ್ಕೆ ಶ್ರೇಯಾಂಕಾ ಪಾಟೀಲ್ ಭೇಟಿ ನೀಡ, ಫೇಮಸ್ ದೋಸೆ ಸವಿದಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿರುವ ಫೋಟೋವನ್ನು ಹೋಟೆಲ್ ತನ್ನ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದು, ಧನ್ಯವಾದ ತಿಳಿಸಿದ್ದು ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದೆ. "ಇಂತಹ ಸಂತೋಷಕರ ಕ್ಷಣವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಶ್ರೇಯಾಂಕಾ ಪಾಟೀಲ್!. ನಾವೂ ನಿಮ್ಮನ್ನು ಪ್ರೀತಿಸುತ್ತೇವೆ. ಮೈದಾನದ ಒಳಗೆ ಮತ್ತು ಹೊರಗೆ ನಿಮ್ಮ ಕೆಲಸ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನೀವು ಆರ್‌ಸಿಬಿ ಮತ್ತು ಅದರಾಚೆಗೆ ಯಶಸ್ಸನ್ನು ಮುಂದುವರಿಸಬೇಕೆಂದು ಹಾರೈಸುತ್ತೇವೆ. ನಿಮ್ಮ ಪ್ರಯಾಣವು ಇನ್ನೂ ಅನೇಕ ವಿಜಯಗಳು ಮತ್ತು ರುಚಿಕರವಾದ ದೋಸೆಗಳಿಂದ ತುಂಬಿರಲಿ! ಸದಾ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದೆ.
Thank you @shreyanka_patil for sharing such a delightful moment with us!
— Vidyarthi Bhavan (@VidyarthiBhavan) May 12, 2024
We love you too. Your dedication both on and off the field inspires us all. Wishing you continued success with @RCBTweets and beyond.
May your journey be filled with many more victories and delicious… pic.twitter.com/BawTMmtVDB
ಫೋಟೋದಲ್ಲಿ ಶ್ರೇಯಾಂಕಾ ಪಾಟೀಲ್ ವಿದ್ಯಾರ್ಥಿ ಭವನದ ಮುಂದೆ ನಿಂತು ಫೋಸ್ ನೀಡಿದ್ದಾರೆ. ಜೊತೆಗೆ ಎಕ್ಸಾಂ ಬರೆಯಲು ಹೊರಟಿರುವ ಬಗ್ಗೆ ಮತ್ತು ಅವರ ತಂದೆ ಬೆಸ್ಟ್ ದೋಸೆ ಸಿಗುವ ಜಾಗಕ್ಕೆ ಕರೆದುಕೊಂಡು ಹೋಗಿರುವ ಬಗ್ಗೆ ಖುಷಿಯಿಂದ ಎರಡು ಲೈನ್‌ಗಳನ್ನು ಬರೆದಿದ್ದಾರೆ.
ಶ್ರೇಯಾಂಕಾ ಪಾಟೀಲ್
ಕರ್ನಾಟಕ ಅಂಡರ್ 19 ತಂಡದಿಂದ ಆಟ ಆರಂಭಿಸಿದ ಶ್ರೇಯಾಂಕಾ ಪಾಟೀಲ್, 2020-21ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡದ ಪರ 20 ವಿಕೆಟ್ ಕಬಳಿಸಿದ್ದರು. ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡದಲ್ಲಿ ಕಾಣಿಸಿಕೊಂಡು ಸಕತ್ ಖ್ಯಾತಿ ಗಳಿಸಿದರು. 2023 ರಲ್ಲಿ ಶ್ರೇಯಾಂಕಾ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್‌ನಲ್ಲಿ ಆಡಿದ ಅನುಭವವನ್ನು ತಮ್ಮ ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ.
ವಿದ್ಯಾರ್ಥಿ ಭವನ
ದಕ್ಷಿಣ ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ ನಗರದ ಪ್ರಮುಖ ಸ್ಥಗಳಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಫೇಮಸ್ ಬ್ರೇಕ್‌ಫಾಸ್ಟ್ ತಾಣವಾಗಿರುವ ಇಲ್ಲಿನ ಮಸಾಲೆ ದೋಸೆ ಎಲ್ಲರನ್ನು ಸೆಳೆಯುತ್ತಿದೆ. 1943 ರಲ್ಲಿ ವೆಂಕಟರಾಮ ಉರಾಲ್ ಸ್ಥಾಪಿಸಿದ ಈ ಹೋಟೆಲ್ ಇಂದಿನವರೆಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ವಿದ್ಯಾಭ್ಯಾಸಕ್ಕಾಗಿ ಹೊರಗಿನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳಿಗಾಗಿ ಈ ಹೋಟೆಲ್ ತೆರೆಯಲಾಗಿತ್ತು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್‌ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
IPL 2026: ಆರ್‌ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ










Click it and Unblock the Notifications