• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರಿಗೆ ಖಾರದ ಪುಡಿ ಎರಚಿ ಪರಾರಿಗೆ ಕೊಲೆ ಆರೋಪಿ ಯತ್ನ: ಶೂಟೌಟ್

|

ಬೆಂಗಳೂರು, ಮೇ 4: ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸುತ್ತಿದ್ದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಬೆಂಗಳೂರಿನ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ಲಿಡ್ಕರ್ ಕಾಲೊನಿಯಲ್ಲಿ ಬೆಳಗ್ಗೆ 6 ಗಂಟೆ ಸಂದರ್ಭದಲ್ಲಿ ಕೊಲೆ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದಾಗ ಶೂಟೌಟ್ ಸಂಭವಿಸಿದೆ.

ಖಾರದ ಪುಡಿ ಎರಚಿ, ಕುರ್ಚಿ ತೂರಾಡಿದ ಶ್ರೀಲಂಕಾ ಸಂಸದರು

ಸಣ್ಣ ವಿಚಾರಕ್ಕೆ ಡ್ಯಾನಿಯಲ್ ಗ್ಯಾಂಗ್ ಜೊತೆ ಗಲಾಟೆ ಮಾಡಿಕೊಂಡಿದ್ದ ಬಾಗಲೂರು ಲೇಔಟ್‌ನ ಬುಜ್ಜಿ(30) ಕೊಲೆಯಾದ ರೌಡಿ. ಶನಿವಾರ ರಾತ್ರಿ 9 ಗಂಟೆಗೆ ಎದುರಾಳಿ ಗ್ಯಾಂಗ್‌ನವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಕಾಡುಗೊಂಡನಹಳ್ಳಿಯಲ್ಲಿ ಪ್ರಕರಣ ದಾಖಲಾಗಿತ್ತು.

ಎರಡು ದಿನಗಳ ಹಿಂದೆ ನಡೆದ ರೌಡಿಶೀಟರ್ ಬಿಜು ಅಲಿಯಾಸ್ ಬಾಗಲೂರು ಲೇಔಟ್‌ನ ಬುಜ್ಜಿ ಹತ್ಯೆ ಪ್ರಕರಣದ ಆರೋಪಿ ಸಂಜಯ್ ಅಲಿಯಾಸ್ ಆಂಡ್ರೂಸ್‌ನನ್ನು ಬಂಧಿಸಲು ಸೋಮವಾರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಈ ಸಂದರ್ಭದಲ್ಲಿ ಪೊಲೀಸರಿಗೆ ಖಾರದಪುಡಿ ಎರಚಿ ಪರಾರಿಯಾಗಲು ಸಂಜಯ್ ಯತ್ನಿಸಿದ್ದ. ಕೂಡಲೇ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು.

ಇದಕ್ಕೆ ಸಂಜಯ್ ಸ್ಪಂದಿಸಲಿಲ್ಲ, ಹೀಗಾಗಿ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಓಡಲಾರದೆ ಬಿದ್ದಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
There Has Been shootout in Bengaluru's KG Halli Police Station Limits after a murder accused assaulted the police chasing him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X