ಪ್ರಯಾಣಿಕರೇ ಎಚ್ಚರ.. ಎಚ್ಚರ.. ತುಮಕೂರು ಬಳಿ ಬೆಳಗ್ಗೆಯಿಂದ ಸ್ಥಗಿತಗೊಂಡ ಎಕ್ಸ್‌ಪ್ರೆಸ್‌ ರೈಲು, ಆಗಿದ್ದಾದ್ರೂ ಏನು?

ತುಮಕೂರು, ಮೇ, 23: ಯಾವುದೇ ರೈಲು ಆಗಲಿ 15 ನಿಮಿಷ ತಡವಾದರೆ ಸಾಕು ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಕೆಂಡಕಾರುತ್ತಾರೆ. ಅದರಲ್ಲೂ ಗಂಟೆಗಟ್ಟಲೇ ರೈಲು ಸ್ಥಗಿತವಾದರೆ ಪ್ರಯಾಣಿಕರು ಸುಮ್ಮನಿರುತ್ತಾರಾ?. ಹೀಗೆ ತುಮಕೂರಿನ ಬಳಿ ಸುಮಾರು 3 ಗಂಟೆಗಳ ಕಾಲ ಎಕ್ಸ್‌ಪ್ರೆಸ್‌ ರೈಲು ಸ್ಥಗಿತವಾಗಿದ್ದು, ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾದರೆ ಈ ರೈಲು ಯಾವ ಮಾರ್ಗವಾಗಿ ಹೊರಟಿತ್ತು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಕ್ಸ್​ಪ್ರೆಸ್​ ರೈಲು ತುಮಕೂರಿನ ಸಿದ್ಧಗಂಗಾ ಮಠದ ಬಳಿ ಏಕಾಏಕಿ ಕೆಟ್ಟು ನಿಂತಿದೆ. ಬೆಳಗ್ಗೆಯಿಂದ ಮಧ್ಯಾಹ್ನ ಆದರೂ ಕೂಡ ಈ ರೈಲು ನಿಂತಲ್ಲೇ ನಿಂತಿದ್ದು, ಇದರಿಂದ ಬೇಸತ್ತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಗದ ಮಧ್ಯೆ ಸಾವಿರಾರು ಪ್ರಯಾಣಿಕರನ್ನು ನಿಲ್ಲಿಸಿದ್ದು, ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Shivamogga Bengaluru Express train stopped near Tumakuru, Passengers are worried

ರೈಲು ಸತತವಾಗಿ 3 ತಾಸುಗಳ ಕಾಲ ನಿಂತಲ್ಲೇ ನಿಂತಿದ್ದು, ಇದರಿಂದ ಕಾದು ನೀಮತ ಸಾವಿರಾರು ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಕೌಂಟರ್​ನಿಂದ ಸಿಬ್ಬಂದಿ ತಪ್ಪಿಸಿಕೊಂಡು ಹೋಗಿದ್ದಾರೆ. ಬೆಂಗಳೂರು-ತುಮಕೂರು ನಡುವೆ ಮುಜಾನೆಯಿಂದ 19 ರೈಲು ಸಂಚಾರ ಸ್ಥಗಿತವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಇದರ ಪರಿಣಾಮ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್​ಪ್ರೆಸ್ ಎಕ್ಸ್‌ಪ್ರೆಸ್‌ ರೈಲನ್ನು ತುಮಕೂರಿನಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೈಲು ನಿಂತಿದ್ದು ಸಾವಿರಾರು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಹಣ ಕೊಟ್ಟು ಟಿಕೆಟ್ ಖರೀದಿಸಿದರೂ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪಲಾಗುತ್ತಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.

ಮತ್ತೊಂದೆಡೆ ಟಿಕೆಟ್​ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದು, ರೈಲ್ವೆ ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+