ಶಿವಾಜಿನಗರದ ಸುಲ್ತಾನ ಆಗುವವರು ಯಾರು?

ಬೆಂಗಳೂರು, ಡಿಸೆಂಬರ್ 5: ಕರ್ನಾಟಕದ ಒಟ್ಟು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಶಿವಾಜಿನಗರ ಕೂಡ ಒಂದು. ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್, ಬಿಜೆಪಿಯಿಂದ ಸರವಣ ಹಾಗೂ ಜೆಡಿಎಸ್ ‌ನಿಂದ ತನ್ವೀರ್ ಅಹ್ಮದ್ ಕಣದಲ್ಲಿದ್ದಾರೆ.

ಐಎಂಎ ವಂಚನೆ ಹಗರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ರೋಷನ್ ಬೇಗ್ ವಿರುದ್ಧ ಕ್ಷೇತ್ರದ ಮತದಾರರು ಆಕ್ರೋಶಗೊಂಡಿದ್ದಾರೆ. ಅದನ್ನು ತನ್ನ ಪರ ಮತವಾಗಿ ತಿರುಗಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಪಡುತ್ತಿದೆ. ಸ್ಥಳೀಯರಲ್ಲದ ಅರ್ಷದ್ ‌ಗೆ ಟಿಕೆಟ್ ನೀಡಿದ ಬಗ್ಗೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಶಿವಾಜಿನಗರ ವಿಧಾನ ಸಭಾ ಕ್ಷೇತ್ರ
ಒಟ್ಟು ಮತದಾರರು - 191528
ಪುರುಷ ಮತದಾರರು - 97441
ಮಹಿಳಾ ಮತದಾರರು - 94085
2019 ರ ಉಪ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು: ಕಾಂಗ್ರೆಸ್ - ರಿಜ್ವಾನ್ ಅರ್ಷದ್, ಬಿಜೆಪಿ - ಶರವಣ, ಜೆಡಿಎಸ್ - ತನ್ವೀರ್ ಅಹಮದ್

Shivajinagar Assembly Constituency By Election 2019

ರಿಜ್ವಾನ್ ಅರ್ಷದ್: ಬಿಕಾಂ ಪದವೀಧರರಾದ ಇವರು ಮೈಸೂರಿನವರು. ಕಾಲೇಜಿನ ದಿನಗಳಲ್ಲೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದವರು. ಎನ್ಎಸ್.ಯು.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
2011ರಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
2014ರಲ್ಲಿ ಬೆಂಗಳೂರು ಸೆಂಟ್ರಲ್ ನಿಂದ ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು.
2016 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
2019 ರ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು.
ಶಿವಾಜಿನಗರದಿಂದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್: 2019 ರ ಲೋಕಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಗಿಂತ ಹೆಚ್ಚು ಮತ ಪಡೆದಿದ್ದ ರಿಜ್ವಾನ್ ಅರ್ಷದ್.

ಶರವಣ: ಬಿಜೆಪಿಯಿಂದ ಸ್ಪರ್ಧಿಸಿ ಒಂದು ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದ ಶರವಣ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪತ್ನಿ ಕಣಕ್ಕಿಳಿಸಿ ಪಕ್ಷೇತರರಾಗಿ ಗೆಲ್ಲಿಸಿಕೊಂಡಿದ್ದರು. ಪ್ರಸ್ತುತ ಮಾಜಿ ಕಾರ್ಪೋರೇಟರ್ ಆಗಿದ್ದಾರೆ. ರೋಷನ್ ಬೇಗ್ ಅವರ ಜೊತೆಯಲ್ಲಿ ರಾಜಕೀಯ ಅನುಭವ ಇರುವ ಇವರು, ಮೊದಲ ಬಾರಿಗೆ ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಶಿವಾಜಿನಗರ ಅಭ್ಯರ್ಥಿ ಆಗಿರುವ ಶರವಣ ಬಿಜೆಪಿಯಲ್ಲಿ ಆರ್ ಅಶೋಕ್ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು.

ತನ್ವೀರ್ ಅಹಮದ್: ವೆಡ್ಡಿಂಗ್ ಪ್ಲಾನರ್ ಆಗಿರುವ ತನ್ವೀರ್, ಫೈನಾನ್ಷಿಯಲ್ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜೆಡಿಎಸ್ ರಾಷ್ಟ್ರೀಯ ವಕ್ತಾರರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಇವರು ಜೆಡಿಎಸ್ ನಿಂದ ಶಿವಾಜಿನಗರ ಅಭ್ಯರ್ಥಿ.

ಧರ್ಮ ಹಾಗು ಜಾತಿವಾರು ಮತಗಳ ಲೆಕ್ಕಾಚಾರ
ಧರ್ಮವಾರು ಮತ
ಹಿಂದುಗಳು - 135000
ಮುಸ್ಲಿಂಮರು - 53000
ಕ್ರಿಸ್ಚಿಯನ್ಸ್ - 15000

ಭಾಷಾವಾರು ಮತ
ತಮಿಳು ಮತದಾರರು - 56000
ಮುಸ್ಲಿಂ ಮತದಾರರು - 53000
ತೆಲಗು ಮತದಾರರು - 44000
ದೇವಾಂಗ - 18000
ದಲಿತರು- 16000
ಕ್ರಿಶ್ಚಿಯನ್ - 15000

ವಾರ್ಡ್ ಗಳ ಹೆಸರು
ರಾಮಸ್ವಾಮಿ ಪಾಳ್ಯ - 62
ಜಯಮಹಲ್ - 63
ಹಲಸೂರು - 90
ಭಾರತಿ ನಗರ - 91
ಶಿವಾಜಿ ನಗರ - 92
ವಸಂತ ನಗರ - 93
ಸಂಪಂಗಿರಾಮನಗರ - 110

ಶಿವಾಜಿನಗರ - 2018ರ ಫಲಿತಾಂಶ
ಕಾಂಗ್ರೆಸ್ : ರೋಷನ್ ಬೇಗ್ - 59742
ಬಿಜೆಪಿ - ಕಟ್ಟಾಸುಬ್ರಮಣ್ಯ ನಾಯ್ಡು - 44702
ನೋಟಾ - 1654
ಜೆಡಿಎಸ್ : ಶಕಿ ಮುಸ್ತಾನ್ ಅಲಿ - 1313..
ಎ.ಎ.ಪಿ : ಅಯುಬ್ ಖಾನ್ - 300

15040 ಮತಗಳ ಅಂತರದಲ್ಲಿ ಕಾಂಗ್ರೆಸ್ ಜಯ ದೊರಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+