ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2 ನೇ ಹಂತ: ನಿಲ್ದಾಣದ ವಿಶೇಷತೆಗಳೇನು?

|
Google Oneindia Kannada News

ಬೆಂಗಳೂರು, ಮೇ 7: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಗಳ ವಿನ್ಯಾಸ ಬದಲಾಗಲಿದೆ.

ಈಗಿರುವ ನೆಲಹಾಸು ಜಾರುವ ಕಾರಣದಿಂದ ವೇಗವಾಗಿ ನಡೆದುಕೊಂಡು ಹೋಗಲು ಸಾದ್ಯವಾಗುತ್ತಿಲ್ಲ. ಈಗ ಹಾಕಿರುವ ಗ್ರಾನೈಟ್ ಜಾರುವಂಥದ್ದಾಗಿದೆ ಎಂದು ಕೆಲವು ಪ್ರಯಾಣಿಕರು ದೂರಿದ್ದರು.

ಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದಿದ್ದ ಮಗು ಸಾವು ಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದಿದ್ದ ಮಗು ಸಾವು

ಹಾಗಾಗಿ ಒರಟು ಹಾಸುಗಳನ್ನು ಹಾಕಲಾಗುತ್ತದೆ. ಇತ್ತೀಚೆಗೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜನಾರ್ಧನ್ ಎನ್ನುವವರು ಮಾಗಡಿ ಮೆಟ್ರೋ ನಿಲ್ದಾಣದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಜನಾರ್ಧನ್ ಮೆಟ್ರೋ ಸ್ಟೇಷನ್ ಮ್ಯಾನೇಜರ್ ಮೇಲೆ ದೂರು ದಾಖಲಿಸಿದ್ದರು.

Shiny granite floors of Phase-I might be slippery

ಹೀಗಾಗಿ ಎಚ್ಚೆತ್ತುಕೊಂಡಿರುವ ಮೆಟ್ರೋ ನಿಗಮವು ಏರ್‌ಪೋರ್ಟ್‌, ಮಾಲ್ ಮಾದರಿಯ ನೆಲಹಾಸನ್ನು ನಿರ್ಮಿಸಲು ಮುಂದಾಗಿದೆ. ಗ್ರಿಪ್ ಸಿಗುವ, ಜಾರದ ಒರಟು ಗ್ರಾನೈಟ್‌ಗಳನ್ನು ಬಳಕೆ ಮಾಡುತ್ತಿದೆ. ಮೊದಲ ಹಂತದಲ್ಲಿ ಮಾಡಿದ್ದ ತಪ್ಪುಗಳನ್ನು ಎರಡನೇ ಹಂತದಲ್ಲಿ ಮಾಡದೆ ತಿದ್ದಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಇನ್ನೂ ಕೆಲವು ಪ್ರಯಾಣಿಕರು ನನಗೆ ಅಂತಹ ಯಾವುದೇ ಅನುಭವವಾಗಿಲ್ಲ, ವೇಗವಾಗಿ ಓಡಿ ಹೋಗಿ ಮೆಟ್ರೋವನ್ನು ಹತ್ತುವ ಆತುರದಲ್ಲಿ ಬೀಳುತ್ತಾರೆ, ಅದು ಪ್ರಯಾಣಿಕರ ತಪ್ಪು ಎಂದಿದ್ದಾರೆ.

ಹಾಗೆಯೇ ಮೆಟ್ರೋ ನಿಲ್ದಾಣದಲ್ಲಿ ಗಾಜಿನ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಇನ್ನು ಎಸ್ಕಲೇಟರ್ ಅಕ್ಕಪಕ್ಕದಲ್ಲಿಯೂ ಹಿಡಿದುಕೊಂಡು ಹತ್ತಲು ಸಹಾಯವಾಗುವಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗುತ್ತಿದೆ.

English summary
The Bangalore Metro Rail Corporation Limited (BMRCL) is examining the possibility of laying a different kind of flooring for its stations falling under Metro Phase-II. This is in light of a general concern that the existing, shiny granite floors of Phase-I might be slippery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X