ಟ್ವಿಟ್ಟರ್ ಹಾಸ್ಯ: 'ಪನ್ನೀರ್' ಅಗಿಯೋಕಂತ ಶಶಿಕಲಾಗೆ ವಿಶೇಷ ಅಡುಗೆ ಮನೆ!
ಬೆಂಗಳೂರು, ಜುಲೈ 13: ಕರ್ನಾಟಕ ಕಾರಾಗೃಹ ಇಲಾಖೆ ಡಿಐಜಿ ರೂಪಾ ಡಿ ಮೌದ್ಗೀಲ್ ಅವರು, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಶಶಿಕಲಾ ನಟರಾಜನ್ ಅವರ ಮೇಳೆ ಹೊರಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ವ್ಯಾಪಕ ಚರ್ಚೆ ಏರ್ಪಟ್ಟಿದೆ.
ಈ ಕುರಿತು ಕಾರಾಗೃಹ ಡಿಐಜಿ ಅವರಿಗೆ ರೂಪಾ ಅವರು ಬರೆದ ಪತ್ರದಲ್ಲಿ ಖೈದಿ ಶಶಿಕಲಾ ನಟರಾಜನ್ ಅವರು ವಿಐಪಿ ಸೌಲಭ್ಯ ಪಡೆಯುತ್ತಿದ್ದಾರೆ, ಅದಕ್ಕಾಗಿ 2 ಕೋಟಿ ರೂ.ಲಂಚ ಸಹ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ ಸತ್ಯನಾರಾಯಣರಾವ್ ಈ ಆರೋಪವನ್ನು ತಳ್ಳಿಹಾಕಿಯೂ ಆಗಿದೆ. ಆದರೆ ಈ ವಿಷಯ ಈಗ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ತಲ್ಲಣವನ್ನುಂಟುಮಾಡಿದ್ದು, #SasikalaBribegate , #Sasikala ಎಂಬ ಹ್ಯಾಶ್ ಟ್ಯಾಗ್ ಗಳಲ್ಲಿ ಟ್ವಿಟ್ಟರಿನಲ್ಲಿ ಸಾಕಷ್ಟು ಹಾಸ್ಯ ಚಟಾಕಿಯಂತೂ ಹೊರಬರುತ್ತಿದೆ.
ರೂಪಾ ಅವರು ಪೊಲೀಸ್ ಕೇಂದ್ರ ಕಾರಾಗೃಹದ ಉಪ ಮಹಾನಿರೀಕ್ಷಕರಿಗೆ ಬರೆದ ಪತ್ರ ಇಲಾಖೆಯ ಒಳಗೇ ಇರುವ ಬದಲು ಮಾಧ್ಯಮಗಳಿಗೆ ತಲುಪಿದ್ದು ಹೇಗೆ ಎಂಬ ಬಗ್ಗೆಯೂ ಈಗ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದೇನೇ ಇದ್ದರೂ ಟ್ವಿಟ್ಟಿಗರಿಗಂತೂ ಈ ಸುದ್ದಿ ಇವತ್ತಿನ ಮೃಷ್ಟಾನ್ನ ಭೋಜನ ಎಂದರೆ ತಪ್ಪಿಲ್ಲ! ಮೃಷ್ಟಾನ್ನ ಭೋಜನದ ಕೆಲವು ಸ್ಯಾಂಪಲ್ ನಿಮಗಾಗಿ..!
|
ಪನ್ನೀರ್ ಅಗಿಯೋಕೆ ವಿಶೇಷ ಅಡುಗೆ ಮನೆ!
ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಅವರಿಗೆ ಪ್ರತ್ಯೇಕ ವಿಶೇಷ ಅಡುಗೆ ಮನೆ ನೀಡಲಾಗಿದೆಯಂತೆ. ಬಹುಶಃ ಅವರು ದಿನದ ಮೂರು ಹೊತ್ತೂ 'ಪನ್ನೀರ'ನ್ನು ಅಗಿದು ತಿನ್ನುತಗ್ತಾರೇನೋ! ಎಂದು ರಮೇಶ್ ಶ್ರೀವತ್ಸ ಎನ್ನುವವರು ಹಾಸ್ಯ ಚಟಾಕಿ ಹಾರಿಸಿದ್ದಾರೆ!
|
ಶಶಿಕಲಾ ಸಹ ಗಾಂಜಾ ಸೇವಿಸುತ್ತಾರಾ..?!
ರೂಪಾ ಅವರು ಹೇಳಿರುವ ಪ್ರಕಾರ ಇಲ್ಲಿನ 25 ಖೈದಿಗಳ ವೈದ್ಯಕೀಯ ಪರೀಕ್ಷೆ ಮಾಡಿದಾಗ 18 ಜನ ಗಾಂಜಾ ಸೇವಿಸಿದ್ದು ದೃಢವಾಗಿದೆ. ಹಾಗಾದರೆ ಶಶಿಕಲಾ ಸಹ ಗಾಂಜಾ ಸೇವಿಸುತ್ತಾರಾ..? ಎಂದು ಹರಿ ಪ್ರಭಾಕರನ್ ಎನ್ನುವವರು ಟ್ವೀಟ್ ಮಾಡಿದ್ದಾರೆ!
|
ಶಶಿಕಲಾ ಇಂದ ಇನ್ನೇನು ನಿರೀಕ್ಷಿಸೋಕೆ ಸಾಧ್ಯ?
ವಿವಿಐಪಿ ಸೌಲಭ್ಯಕ್ಕಾಗಿ ಶಶಿಕಲಾ 2 ಕೋಟಿ ಲಂಚ ನೀಡಿದ್ದಾರೆ ಎಂಬ ಆರೋಪವಿದೆ. ಶಶಿಕಲಾ ಥರದ ಮಹಿಳೆಯಿಂದ ನಾವು ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ ಎಂದು ಕೀರ್ತಿ ಎಂಬುವವರು ಪ್ರಶ್ನಿಸಿದ್ದಾರೆ!
|
ಅಡುಗೆಯವಳೇ ತಮಿಳುನಾಡಿನ ಮುಂದಿನ ಸಿಎಂ!
ಶಶಿಕಲಾ ಅವರಿಗೆ ಅಡುಗೆ ಮಾಡುವುದಕ್ಕೆಂದೇ ಒಬ್ಬ ಖೈದಿಯನ್ನು ನೇಮಿಸಿಕೊಂಡಿದ್ದಾರಂತೆ. ತಮಿಳುನಾಡಿನ ಮುಂದಿನ ನಾಯಕಿ ಯಾರು ಎಂಬುದು ತಿಳಿಯಿತು! ಆಕೆಗೆ ಅಡುಗೆ ಮಾಡಿ ಕೊಡುತ್ತಿರುವವಳೇ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದು ರಾಜೇಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications