ಬೆಂಗಳೂರಿನ ಶಾಲೆಯೊಂದರಲ್ಲಿ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರಿನ ಪ್ಲೇಸ್ಕೂಲ್ ವೊಂದರಲ್ಲಿ ಮಗುವೊಂದರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆ ನಂತರ ಅದೇ ಶಾಲೆಯಲ್ಲಿ, ಅದೇ ಆರೋಪಿಯಿಂದ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ

ಬೆಂಗಳೂರು, ಫೆಬ್ರವರಿ 22: ಪ್ಲೇಸ್ಕೂಲ್ ನಲ್ಲಿ ಮಗುವೊಂದರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಒಂದು ದೂರು ದಾಖಲಾದ ನಂತರ, ಅದೇ ಶಾಲೆಯಲ್ಲಿ ನಡೆದ ಇಂಥ ಹಲವು ಪ್ರಕರಣಗಳ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ಪ್ಲೇಸ್ಕೂಲ್ ನ ಹೊರಗೆ ಮಂಗಳವಾರ ಸೇರಿದ್ದ ಮಕ್ಕಳ ಪೋಷಕರು ಮಂಜು ಎಂಬಾತ ಹಲವು ಮಕ್ಕಳ ಮೇಲೆ ಹೀಗೆ ದೌರ್ಜನ್ಯ ನಡೆಸಿರುವುದಾಗಿ ದೂರಿದ್ದಾರೆ.

ಆರೋಪಿಯು ತಮಗೂ ಹೀಗೇ ಮಾಡಿದ್ದ ಎಂಬ ಸಂಗತಿಯನ್ನು ಮಕ್ಕಳು ಈಗ ತಮ್ಮ ಪೋಷಕರಿಗೆ ಹೇಳಿಕೊಳ್ಳುತ್ತಿದ್ದಾರೆ. "ನಾವು ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ಮಂಗಳವಾರ ರಾತ್ರಿ 8 ಗಂಟೆಗೆ ಹೋದೆವು. ಬೆಳಗ್ಗೆ ನಾಲ್ಕರ ತನಕ ಅಲ್ಲೇ ಇದ್ವು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮಂಜು ವಿರುದ್ಧ ಮತ್ತೆ ಐದು ಎಫ್ ಐಆರ್ ದಾಖಲಾದವು.[ಬೆಳ್ಳಂದೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

Sexual abuse case on Bengaluru playschool, more kids complain

"ಬುಧವಾರ ಬೆಳಗ್ಗೆ ಇನ್ನಷ್ಟು ಪೋಷಕರು ಪೊಲೀಸರಿಗೆ ದೂರು ನೀಡಲು ತೆರಳಿದ್ದಾರೆ" ಎಂದು ಪ್ಲೇಸ್ಕೂಲ್ ನ ಮಕ್ಕಳ ಪೋಷಕರೊಬ್ಬರು ತಿಳಿಸಿದರು. ನಮ್ಮ ಮಗು ಮಂಜು ಬಗ್ಗೆ ಬಂದು ಹೇಳಿತು. ಅದೇ ವಿಚಾರವನ್ನು ಶಾಲೆಯ ಶಿಕ್ಷಕಿ ಹತ್ತಿರ ಹೇಳಿಕೊಂಡಿದೆ. ಆದರೆ ಆಕೆ ಮಂಜುನ ಕರೆದು ಎಚ್ಚರಿಕೆ ಕೊಟ್ಟು ಕಳಿಸಿಬಿಟ್ಟಿದ್ದಾರೆ ಎಂದು ಅವರು ತಿಳಿಸಿದರು.[ಜರ್ಮನಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಮೂವರು ಶಂಕಿತರ ವಿಚಾರಣೆ]

ಬಹುತೇಕ ಪೋಷಕರು ಒಂದೇ ರೀತಿಯ ದೂರುಗಳನ್ನು ಮಕ್ಕಳಿಂದ ಕೇಳಿದ್ದಾರೆ. ಮಕ್ಕಳ ಬಟ್ಟೆ ಬದಲಿಸುವಾಗ ಮಂಜು ಎಂಬಾತ ಅಲ್ಲೇ ಇರುತ್ತಿದ್ದ. ತಾನೇ ಮಕ್ಕಳನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದ ಎಂದು ಕೂಡ ಗೊತ್ತಾಗಿದೆ. ಮಾರತ್ ಹಳ್ಳಿ ಪೊಲೀಸರು ಶಾಲೆಯ ಪ್ರಾಂಶುಪಾಲ ಸೇರಿದಂತೆ ಇತರ ಇಬ್ಬರನ್ನು ಬಂಧಿಸಿದ್ದಾರೆ. ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+